This is the title of the web page
This is the title of the web page

Please assign a menu to the primary menu location under menu

Local News

ದೇವಾಂಗ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭ


ಬೆಳಗಾವಿ: ಬೆಳಗಾವಿಯ ತಾಳೂಕರ ಸಮಾಜ ಸೇವಾ ಪ್ರತಿಷ್ಠಾನದವರು ದಿನಾಂಕ ೦೮ ೨೦೨೨ರಂದು ನಗರದ ಸಾಯಿ ಭವನದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜರುಗಿತು. ಪುಷಕಲಾ ನೃತ್ಯಾಲಯದ ವಿದುಷಿ ಡಾ ಪೂಜಾ ನಗಳಿಕರ.
ಅವರ ನೇತೃತ್ವದ ಭರತನಾಟ್ಯದಲ್ಲಿ ಜಯಹೇ ಭಾರತ ಜನನಿ ತನುಜಾತೆ ನಾಡಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.
ಅತಿಥಿಗಳ ಸ್ವಾಗತ ಪರಿಚಯವನ್ನು ಚಂದ್ರಗುಪ್ತ ತಾಳೂಕರವರು ಮಾಡಿದರು . ಪ್ರತಿಷ್ಠಾನದ ಅಧ್ಯಕ್ಷರಾದ ಕೃಷ್ಣರಾಜೇಂದ್ರ ತಾಳೂಕರ ಅವರು ಕಳೆದ ೧೨ ವರ್ಷಗಳಿಂದ ಪ್ರತಿಷ್ಠಾನವು ಮಾಡುತ್ತ ಬಂದಿರುವ ಕಾರ್ಯಕ್ರಮಗಳ ಬಗ್ಗೆ ಬೆಳಕು ಚೆಲ್ಲಿದರು ಪುರಸ್ಕಾರ ಸಮಾರಂಭದ ಉದ್ಘಾಟಕರಾಗಿ ಆಗಮಿಸಿದ ಗೌರವಾನ್ವಿತರಾದ ಡಾ, ಜ್ಞಾನೇಶ್ವರ್ ಮೋರಕರ ದೀಪ ಬೆಳಗಿಸಿ, ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ ವಿದ್ಯಾರ್ಥಿಗಳು ಸಾಧನೆ ಕಡೆಗೆ ಗಮನ ಹರಿಸಬೇಕು ಪರಿಶ್ರಮದಿಂದ ಮುಂದೆ ಬರೋ ಪ್ರಯತ್ನ ಮಾಡಬೇಕೆಂದು ಕರೆ ನೀಡಿದರು. ಉಪನ್ಯಾಸಕ ರಾಗಿ ಆಗಮಿಸಿದವರು ಆಗಮಿಸಿದ ಡಾ ರಶ್ಮಿ ಸತ್ತಿಗೇರಿ ಅವರು ವಿದ್ಯಾರ್ಥಿಗಳು ತಂದೆ ತಾಯಿಯರ ದುಡಿಮೆಯ ಮೇಲೆ ಅವಲಂಬಿತರಾಗದೆ ಸಾಧನೆ ಮಾಡಿ ಮುಂದೆ ಬರುವ ಪ್ರಯತ್ನ ಮಾಡಬೇಕೆಂದು ಹೇಳಿದರು.
ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ ಗುರುಗಳಾದ ಸುರೇಶ್ ಶಿನಗಾರಿ ಅವರು ಮಾತನಾಡುತ್ತಾ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನ ಹರಿಸಿ ಸಾಧನೆ ಸಾಗಬೇಕೆಂದು ಕರೆ ನೀಡಿದರು ಬಡ ವಿದ್ಯಾರ್ಥಿಗಳಿಗೆ ಯಾವುದೇ ವಿದ್ಯಾಭ್ಯಾಸದ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡುವುದಾಗಿ ಹಾಗೂ ತನು-ಮನ-ಧನದಿಂದ ಸಹಾಯ ನೀಡುವುದಾಗಿ ತಿಳಿಸಿದರು. ಮೂರು ಚಿನ್ನದ ಪದಕಗಳೊಂದಿಗೆ ಎಂಬಿಬಿಎಸ್ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಹಾಗೂ ಅತಿಥಿಗಳಾಗಿ ಆಗಮಿಸಿದ ಡಾಕ್ಟರ್ ಸೌಭಾಗ್ಯ ಢವಳಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ ತಮ್ಮ ವಿದ್ಯಾರ್ಥಿ ಜೀವನದ ಅಭ್ಯಾಸ ಕ್ರಮಗಳನ್ನು ವಿವರಿಸಿ ಮಾತನಾಡಿದರು ಹಾಗೂ ಇಂದಿನ ವಿದ್ಯಾರ್ಥಿಗಳಿಗೆ ಕಷ್ಟಪಟ್ಟು ಓದಿ ಹೆಚ್ಚಿನ ವಿದ್ಯಾಭ್ಯಾಸ ಮಾಡಲು ಧೈರ್ಯ ತುಂಬಿದರು. ಇದೇ ಸಂದರ್ಭದಲ್ಲಿ ಶೇಕಡ ೮೦ ಕ್ಕಿಂತ ಹೆಚ್ಚು ಅಂಕ ಪಡೆದ ಎಲ್ಲಾ ವಿದ್ಯಾರ್ಥಿಗಳನ್ನು ಉಪಸ್ಥಿತರಿದ್ದ ಎಲ್ಲ ಗಣ್ಯ ಅತಿಥಿಗಳು ಸನ್ಮಾನಿಸಿ ಶುಭಕೋರಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರತಿಷ್ಠಾನದ ಕಾರ್ಯದರ್ಶಿಗಳಾದ ಸುಭಾಷ್ ತಾಳೂಕರ್ ಮಾತನಾಡಿ ವಿದ್ಯಾರ್ಥಿಗಳ ಸಾಮರ್ಥ್ಯಗಳನ್ನು ಬಳಸಿಕೊಂಡು ಸಂಪನ್ಮೂಲಗಳಾಗಬೇಕೆಂದು ಕರೆ ನೀಡಿದರು. ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ ಸಮಾಜದ ಗಣ್ಯರಾದ ವಿದ್ಯುತ್ ಇಲಾಖೆಯ ನಿವೃತ್ತ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಶ್ರೀ ಸಿಪಿ ಸಂಗೊಳ್ಳಿ ಅವರು,ಎಂಪಿ ಬಂಗೋಡಿ ಅವರು, ಉದ್ಯಮಿಗಳಾದ ಪಾಂಡುರಂಗ ಕಾಮಕರ. ದೇವಸ್ಥಾನದ ಪ್ರಮುಖರಾದ ದತ್ತಾತ್ರೇಯ ಮೋರಕರ ಅತಿಥಿಗಳನ್ನು ಪ್ರತಿಷ್ಠಾನದ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳು ತಮ್ಮ ಅನುಭವವನ್ನು ಹಂಚಿಕೊಂಡರು. ಪ್ರತಿಷ್ಠಾನದ ಅಧ್ಯಕ್ಷರಾದ ಕೃಷ್ಣರಾಜೇಂದ್ರ ತಾಳೂಕರ ದಂಪತಿಗಳನ್ನು ಶ್ರೀ ಎಂಪಿ ಬಂಗೋಡಿ ಅವರು, ಹಾಗೂ ಗಾಯತ್ರಿ ಮಹಿಳಾ ಮಂಡಳದ ಸದಸ್ಯರು ಗೌರವಿಸಿ ಶುಭಕೋರಿದರು. ಕಾರ್ಯಕ್ರಮ ಯಶಸ್ವಿಗೆ ಪ್ರತಿಷ್ಠಾನದ ಸದಸ್ಯರುಗಳಾದ ಪುಲಿಕೇಶಿ ತಾಳೂಕರ, ರಾಘವೇಂದ್ರ ಲಕ್ಷ್ಮಣ್ ತಾಳೂಕರ, ಶ್ರೀನಿವಾಸ ಕಲ್ಯಾಣ ತಾಳೂಕರ, ಶ್ರೀಮತಿ ರತ್ನಪ್ರಭಾ ಕಾಮಕರ, ಕಾರ್ತಿಕ್ ಕಾಮಕರ , ಮಂಜುನಾಥ್ ಮಕಾಟಿ, ಸಂಜಯ್ ಹಜೇರಿ ಮುಂತಾದವರು ಶ್ರಮವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು .
ಕಾರ್ಯಕ್ರಮದ ನಿರೂಪಣೆಯನ್ನು ಚಂದ್ರಗುಪ್ತ ಲಕ್ಷ್ಮಣ ತಾಳೂಕರ ಅವರು , ವಂದನಾರ್ಪಣೆಯನ್ನು ಕುಮಾರಿ ನಿರುಪಮಾ ಸುಭಾಷ ತಾಳೂಕರ ನಡೆಸಿಕೊಟ್ಟರು..


Gadi Kannadiga

Leave a Reply