This is the title of the web page
This is the title of the web page

Please assign a menu to the primary menu location under menu

State

ದೇವಶಿಲ್ಪಿ ವಿಶ್ವಕರ್ಮರ ಈ ನಾಡಿಗೆ ನೀಡಿದ ಕೊಡುಗೆ ಅಪಾರ: ಶಾಸಕ ದೊಡ್ಡನಗೌಡ ಪಾಟೀಲ


ಕುಷ್ಟಗಿ: ದೇವಾನು ದೇವತೆಗೆಳ ಸೃಷ್ಠಿಕರ್ತ ಯಾರೆಂದರೆ ವಿಶ್ವಕರ್ಮರಾಗಿದ್ದಾರೆ. ಇಡೀ ಜಗತ್ತಿನ ಇಂಜಿನಿಯರ ವಿಶ್ವಕರ್ಮರು ಎನ್ನುವ ಮಾತಿದ್ದು ಈ ನಾಡಿಗೆ ವಿಶ್ವಕರ್ಮರು ನೀಡಿದ ಕೊಡುಗೆ ಅಪಾರ ಎಂದು ಶಾಸಕ ದೊಡ್ಡನಗೌಡ ಪಾಟೀಲ‌ ಹೇಳಿದರು.

ಪಟ್ಟಣದ ತಹಶೀಲ ಕಾರ್ಯಾಲಯದಲ್ಲಿ ಶ್ರೀ ವಿಶ್ವಕರ್ಮ ಜಯಂತಿ ಪ್ರಯುಕ್ತ ವಿಶ್ವಕರ್ಮ‌ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ಮಾತನಾಡಿದ ಅವರು ವಿಶ್ವಕರ್ಮರು ಕಾಯಕ ಯೋಗಿಯಾಗಿದ್ದಾರೆ. ಇಡೀ ವಿಶ್ವಕ್ಕೆ ದೇವತೆಗಳನ್ನು ಅವರ ರೂಪವನ್ನು ತಮ್ಮ ಕಲೆಯೊಂದಿಗೆ‌ ಪರಿಚಯಿಸಿ‌ದವರು. ಕುಶಲಕರ್ಮಿಗಳು ಇವರಾಗಿದ್ದು ಇವರ ಸಮುದಾಯ ಕೂಡ ಕರಕುಶಲತೆಯಲ್ಲಿ ಪರಿಣಿತರಾಗಿದ್ದಾರೆ. ನಿತ್ಯ ಕಾಯದಲ್ಲಿ ಮುಳುಗಿ ಇಡಿ ಸಮಾಜದೊಂದಿಗೆ ಬೆರೆತು ಒಂದಾಗಿರುವವರಾಗಿದ್ದಾರೆ. ಈ ನಾಡು ಕಂಡ ಶ್ರೇಷ್ಠ ಆಚರಣೆಗಳಲ್ಲಿ ಭಗವಾನ ಶ್ರೀ ವಿಶ್ವಕರ್ಮರ ಜಯಂತಿಯೂ ಒಂದು. ಇತರೆ ಸಮುದಾಯದವರಿಗೆ ವಿಶ್ವಕರ್ಮರು ಈ ನಾಡಿನ ಬಹುಮುಖ್ಯ ಕೊಂಡಿಯಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ತಾಲೂಕ ದಂಡಾಧಿಕಾರಿ ಶೃತಿ ಎಂ. ಮಳ್ಳಪ್ಪಗೌಡ್ರ, ಆರ್.ಐ ಉಮೇಶ ಗೌಡ್ರ ತಾಲೂಕ ಅಧಿಕಾರಿಗಳು ಹಾಗೂ ವಿಶ್ವಕರ್ಮ ಸಮಾಜ ಬಾಂಧವರು ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ತಾಲೂಕ ವಿಶ್ವಕರ್ಮ ಸಮಾಜದ ವತಿಯಿಂದ ಭಗವಾನ್ ಶ್ರೀ ವಿಶ್ವಕರ್ಮ ಜಯಂತಿ ಕಾರ್ಯಕ್ರಮವನ್ನು ಪಟ್ಟಣದ ಬಸ್ ಸ್ಟ್ಯಾಂಡ ರಸ್ತೆಯಲ್ಲಿ ಬರುವ ಶ್ರೀ ವಿಶ್ವಕರ್ಮ ವೃತ್ತಕ್ಕೆ ಪೂಜೆ ಸಲ್ಲಿಸುವುದರ ಮೂಲಕ ನೆರವೇರಿಸಲಾಯಿತು. ತಾಲೂಕ ಅಧ್ಯಕ್ಷ ಶರಣಪ್ಪ ಬಡಿಗೇರ ಮಾತನಾಡಿ ನಮ್ಮ ಸಮುದಾಯದವರು ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಹಿಂದುಳಿದೆ. ನಮ್ಮಲ್ಲಿ ಸಂಘಟನೆ ಕೊರತೆ ಇದ್ದು ತಾಲೂಕಾನಾಧ್ಯಂತ ವಿಶ್ವಕರ್ಮ ಸಮುದಾಯದವರು ಒಗ್ಗಟ್ಟಾಗಿ ಸರಕಾರದ ಸೌಲಭ್ಯ ಪಡೆಯಲು ಮುಂದಾಗಬೇಕು. ಇದಕ್ಕೆ ತಾಲೂಕ ಮಟ್ಟದ ಜಯಂತಿಯನ್ನು ಸಮುದಾಯದ ವತಿಯಿಂದ ಮುಂದಿನ ವಾರದಲ್ಲಿ ಸಮಾಜದವರೊಂದಿಗೆ ಚರ್ಚಿಸಿ ಸ್ಥಳೀಯ ಶಾಸಕರ ಒಪ್ಪಿಗೆ ಮೇರೆಗೆ ದಿನಾಂಕ ನಿಗದಿ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಸಿದ್ದಪ್ಪ ಬಡಿಗೇರ ನಗರ ಸಮಾಜದ ಅಧ್ಯಕ್ಷರು, ಮುಖಂಡರಾದ ರಾಮಣ್ಣ ಬಡಿಗೇರ, ಯಚ್ಚರಪ್ಪ ಬಡಿಗೇರ, ಶಾಶ್ವತಪ್ಪ‌ ಬಡಿಗೇರ, ಕೃಷ್ಣಪ್ಪ ಪತ್ತಾರ, ಮಾನಪ್ಪ ಕಮ್ಮಾರ, ದೇವಪ್ಪ ಬಡಿಗೇರ, ಗುರಪ್ಪ ಬಡಿಗೇರ, ಈರಣ್ಣ ಪತ್ತಾರ, ಲಕ್ಷ್ಮಣ ಬಡಿಗೇರ, ಮೌನೇಶ ದೇವರಗುಡಿ, ಶ್ರೀಶೈಲ ಬಡಿಗೇರ, ಕಾಳಮ್ಮ ಬಡಿಗೇರ, ನಟರಾಜ ಸೋನಾರ, ತಾಲೂಕ ಯುವ ಘಟಕದ ಅಧ್ಯಕ್ಷ ಶಿವಕುಮಾರ ಬಡಿಗೇರ, ತಾಲೂಕ ಪ್ರಧಾನ ಕಾರ್ಯದರ್ಶಿ ಅನೀಲಕುಮಾರ ಕಮ್ಮಾರ, ಮೌನೇಶ ಪತ್ತಾರ, ಮಲ್ಲಿಕಾರ್ಜುನ ಬಡಿಗೇರ, ಕಾಳಪ್ಪ ಬಡಿಗೇರ ಅರ್ಚಕರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಆರ್ ಶರಣಪ್ಪ ಗುಮಗೇರಾ

ಕೊಪ್ಪಳ


Leave a Reply