This is the title of the web page
This is the title of the web page

Please assign a menu to the primary menu location under menu

Local News

ಶ್ರದ್ಧಾಭಕ್ತಿಯಿಂದ ಪವನಸುತನ ಆರಾಧನೆ


ಯರಗಟ್ಟಿ: ಪಟ್ಟಣದಲ್ಲಿ ಹನುಮ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಹನುಮ ಜಯಂತಿ ಕಾರಣ ಈ ಸಲ ಮತ್ತಷ್ಟು ಸಂಭ್ರಮದಿಂದ ಆಚರಿಸಿದ್ದು, ಭಕ್ತರ ಉತ್ಸಾಹ ಇಮ್ಮಡಿಗೊಂಡಿತ್ತು.
ದೇವಸ್ಥಾನದಲ್ಲಿ ಬೆಳಗಿನ ಜಾವ ೪ರಿಂದಲೇ ಪೂಜಾ ಕಾರ್ಯಕ್ರಮಗಳು ಆರಂಭ???ಂಡವು. ಅಭಿಷೇಕ, ಅಲಂಕಾರದ ಬಳಿಕ ೬:೧೧ ಗಂಟೆಗೆ ಹನುಮಂತ ದೇವರಿಗೆ ತೆuಟಿಜeಜಿiಟಿeಜಟ್ಟಿಲೋತ್ಸವ ಸೇವೆ ನಡೆಯಿತು. ಬೆಳಗ್ಗೆ ೧೧ ಗಂಟೆಗೆ ಮಹಾಪ್ರಸಾದ ಸೇವೆ ಜರುಗಿತು.
ಆ ನಂತರ ತೀರ್ಥ ಪ್ರಸಾದ ಕಾರ್ಯಕ್ರಮಗಳು ಸಾಂಗವಾಗಿ ಜರುಗಿದವು. ದೇವರಿಗೆ ಭಕ್ತರು ತೆಂಗಿನಕಾಯಿ, ಬಾಳೆಹಣ್ಣು ಹಾಗೂ ಪೂಜಾ ವಸ್ತುಗಳನ್ನು ತಂದು ದೇವರಿಗೆ ಅರ್ಪಿಸಿದರು.
ದೇವಸ್ಥಾನದಲ್ಲಿ ಗದ್ದಲ-ಗೊಂದಲ ಸೃಷ್ಟಿಯಾಗಬಾರದು ಎಂದು ಪೊಲೀಸ್ ಪಹರೆ ವ್ಯವಸ್ಥೆ ಮಾಡಲಾಗಿತ್ತು. ಪಟ್ಟಣದ ಎರಡು ಹನುಮಂತ ದೇವಸ್ಥಾನಗಳಲ್ಲಿ ಅದ್ಧೂರಿಯಾಗಿ ಹನುಮ ಜಯಂತಿ ಆಚರಿಸಲಾಯಿತು.
ಅಜೀತಕುಮಾರ ದೇಸಾಯಿ, ಈರಣ್ಣಾ ಚಂದರಗಿ, ಕುಮಾರ ಜಕಾತಿ, ಈರಣ್ಣಾ ಪೂಜೇರ, ಸದಾನಂದ ಹಣಬರ, ನೀಲಪ್ಪ ಬಾರ್ಕಿ, ಸದಾನಂದ ಪಾಟೀಲ, ವಿಠ್ಠಲಗೌಡ ದೇವರಡ್ಡಿ, ರಾಜೇಂದ್ರಗೌಡ ಪಾಟೀಲ, ಗಂಗಪ್ಪ ವಾಲಿ, ಬಾಬು ಗಲಬಿ, ಸಿದ್ದಪ್ಪ ದೇವರಡ್ಡಿ, ರಾಮನಗೌಡ ಪಾಟೀಲ, ದೇವಸ್ಥಾನ ಅರ್ಚಕರಾದ ನಿಂಗಪ್ಪ ಇಟ್ನಾಳ, ಯಲ್ಲಪ್ಪ ಇಟ್ನಾಳ, ಹನುಮ ಮಾಲಾಧಾರಿಗಳು ಸೇರಿದಂತೆ ಅನೇಕ ಉಪಸ್ಥಿತರಿದ್ದರು.


Leave a Reply