This is the title of the web page
This is the title of the web page

Please assign a menu to the primary menu location under menu

Local News

ಗುರುಪೂರ್ಣಿಮೆ ಪ್ರಯುಕ್ತ ದ್ಯಾನ ಕಾರ್ಯಕ್ರಮ


ಗುರುಪೂರ್ಣಿಮೆಯು ಭಾರತದ ಮಹಾನ್ ಗುರುಗಳಿಗೆ ಗೌರವಾರ್ಪಣೆಗಾಗಿ ಮೀಸಲಾದ ಒಂದು ವಿಶಿಷ್ಟವಾದ ದಿನ. ಗುರುಗಳ ಆದರ್ಶಗಳಿಗೆ ಈ ಅತೀ ಮುಖ್ಯವಾದ ದಿನದಂದು ಪುನರ್ ಸಮರ್ಪಣೆ ಮಾಡಿ, ಸಾಕ್ಷಾತ್ಕಾರದ ಕಡೆಗಿರುವ ಏಣಿಯಲ್ಲಿ ಮುಂದಿನ ಮೆಟ್ಟಿಲನ್ನು ಏರಲು ಪ್ರಯತ್ನಿಸುವ ಸಾಧನೆಗಾಗಿ ಅವರ ಆಶೀರ್ವಾದವನ್ನು ಬೇಡುವ ಪವಿತ್ರ ದಿನ. ಈ ವಿಶೇಷವಾದ ಗುರುಪೂರ್ಣಮೆಯ ಅಂಗವಾಗಿ ಯೋಗದಾ ಸತ್ಸಂಗ ಧ್ಯಾನ ಮಂಡಳಿ, ಬೆಳಗಾವಿವತಿಯಿಂದ ಧ್ಯಾನದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಗುರು-ಶಿಷ್ಯರ ಬಾಂಧವ್ಯವು, ನಮ್ಮ ಭಾರತೀಯ ಸಮಾಜ ಜೀವನದ, ಒಂದು ವೈಶಿಷ್ಟ್ಯವಾಗಿದ್ದು, ನಮ್ಮ ಸಾಂಪ್ರದಾಯಿಕ ಮೌಲ್ಯಗಳ ಕ್ರಮಬದ್ಧ ಅಂಶವಾಗಿರುತ್ತದೆ. ಅನಾದಿ ಕಾಲದಿಂದಲೂ ಗುರುವನ್ನು ಅತ್ಯುನ್ನತ ಪೀಠದಲ್ಲಿ ಇರಿಸಿರುವ ಸರಳ ಕಾರಣವೆಂದರೆ ಗುರುವಿಗೆ ಸಮಾನವಾದುದು ಮತ್ತೊಂದಿಲ್ಲ.
ಜಗದ್ಗುರುವೆಂದು ಗುರುತಿಸಲ್ಪಟ್ಟಿರುವ ಪರಮಹಂಸ ಯೋಗಾನಂದಜೀಯವರ ಪ್ರಮುಖ ಉದ್ದೇಶವೆಂದರೆ, ಅಂತರಂಗ ಯುದ್ಧವನ್ನು ದೃಢವಾದ ಆಧ್ಯಾತ್ಮಿಕ ಅಭ್ಯಾಸದಿಂದ ಗೆಲ್ಲುವುದು. ಅವರ ಕ್ರಿಯಾಯೋಗದ ಮಾರ್ಗ ಖಚಿತವಾದ ವೈಜ್ಞಾನಿಕ ತಂತ್ರಗಳನ್ನೊಳಗೊಂಡಿದ್ದು, ಮಹಾನ್ ಋಷಿ ಪತಂಜಲಿಯು ಪ್ರತಿಪಾದಿಸಿರುವ ಅಷ್ಟಾಂಗ ಯೋಗದ ಮೇಲೆ ಆಧಾರಿತವಾಗಿದೆ.
ಗುರು-ಶಿಷ್ಯರ ಬಾಂಧವ್ಯವನ್ನು ವಿಶ್ವದಾದ್ಯಂತ ಪ್ರಸಿದ್ಧವಾದ ತಮ್ಮ ಆಧ್ಯಾತ್ಮಿಕ ಶೇಷ್ಠ ಗ್ರಂಥ ‘ಯೋಗಿಯ ಆತ್ಮಕಥೆ’ಯಲ್ಲಿ ಅತ್ಯಂತ ಶ್ರದ್ಧೆಯಿಂದ, ಸಮರ್ಪಣಾ ಭಾವದಿಂದ ಯೋಗಾನಂದರು ವಿವರಿಸಿದ್ದಾರೆ. ಗುರುವಿನ ಪಾದವನ್ನು ನೆನೆಯೋಣ, ಧನ್ಯರಾಗೋಣ.


Gadi Kannadiga

Leave a Reply