This is the title of the web page
This is the title of the web page

Please assign a menu to the primary menu location under menu

Local News

ಅನಾವಶ್ಯಕ ವಾಹನಗಳ ತಪಾಸಣೆ ನಡೆಸದಂತೆ ಡಿಜಿಪಿ ಖಡಕ್ ಆದೇಶ


ಬೆಂಗಳೂರು: ಹೆದ್ದಾರಿಗಳಲ್ಲಿ ತಪಾಸಣೆ ನೆಪದಲ್ಲಿ ವಾಹನಗಳನ್ನು ಪೊಲೀಸರು ತಡೆದು ತಪಾಸಣೆ ನಡೆಸುತ್ತಿದ್ದರು. ಇದರಿಂದ ಅನೇಕ ವಾಹನ ಸವಾರರಿಗೆ ಕಿರಿಕಿರಿ ಕೂಡ ಉಂಟಾಗುತ್ತಿತ್ತು.

ಈ ಕಿರಿಕಿರಿ ತಪ್ಪಿಸೋ ನಿಟ್ಟಿನಲ್ಲಿ, ಈ ಕೂಡಲೇ ರಾಜ್ಯಾಧ್ಯಂತ ಅನಾವಶ್ಯಕ ವಾಹನ ತಪಾಸಣೆ ನಿಲ್ಲಿಸುವಂತೆ ಎಲ್ಲಾ ಎಸ್ಪಿಗಳಿಗೆ ಡಿಜಿಪಿ ಖಡಕ್ ಆದೇಶದಲ್ಲಿ ಸೂಚಿಸಿದ್ದಾರೆ.

ಈ ಸಂಬಂಧ ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಆದೇಶ ಹೊರಡಿಸಿದ್ದು, ರಾಜ್ಯದಲ್ಲಿ ಅನಾವಶ್ಯಕವಾಗಿ ವಾಹನಗಳ ದಾಖಲೆಗಳ ತಪಾಸಣೆ ನಡೆಸಲಾಗುತ್ತಿದೆ. ವಿವಿಧ ದಾಖಲೆಗಳನ್ನು ಕೇಳುತ್ತಾ ಪೊಲೀಸರ ಕಿರಿಕಿರಿ ಉಂಟುಮಾಡುತ್ತಿರುವುದು ಗಮನಕ್ಕೆ ಬಂದಿದೆ ಎಂದಿದ್ದಾರೆ.

ವಾಹನಗಳ ಬಗ್ಗೆ ಅನುಮಾನವಿದ್ದಾಗ, ಡ್ರಿಂಕ್ ಅಂಡ್ ಡ್ರೈವ್ ಸಂಬಂಧದ ಪ್ರಕರಣದಲ್ಲಿ ವಾಹನಗಳ ತಪಾಸಣೆಯನ್ನು ಇನ್ಮುಂದೆ ನಡೆಸುವುದು. ಹೆದ್ದಾರಿಗಳು ಸೇರಿದಂತೆ ಯಾವುದೇ ರಸ್ತೆಗಳಲ್ಲಿ ಅನಗತ್ಯವಾಗಿ ವಾಹನ ತಡೆದು ನಿಲ್ಲಿಸಕೂಡದು ಎಂಬುದಾಗಿ ಪೊಲೀಸರಿಗೆ ಖಡಕ್ ಆಗಿ ಸೂಚಿಸಿದ್ದಾರೆ.


Gadi Kannadiga

Leave a Reply