This is the title of the web page
This is the title of the web page

Please assign a menu to the primary menu location under menu

State

ಧರಿತ್ರಿ ಫ್ಯಾಶನ್ ಶೋ ಕಾರ್ಯಕ್ರಮ


ಬೆಳಗಾವಿ: ನಗರದ ಕ್ರಾಂತಿ ಮಹಿಳಾ ಮಂಡಳ, ಉಮಾ ಸಂಗೀತ ಪ್ರತಿಷ್ಠಾನ, ಹಿಂದವಾಡಿ ಹಾಗೂ ದೇಶಪಾಂಡೆ ಫೌಂಡೇಶನ್ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಅಂತರ್‌ರಾಷ್ಟ್ರೀಯ ಮಹಿಳಾ ದಿನಾಚರಣೆಯ ಹಿನ್ನೆಲೆಯಲ್ಲಿ ಗ್ರಹಿಣಿಯರಿಗಾಗಿ “ಧರಿತ್ರಿ ಫ್ಯಾಶನ್ ಶೋ” ಕಾರ್ಯಕ್ರಮವನ್ನು ಖಾಸಬಾಗದ ದೇವಾಂಗ ಮಂಗಲ ಕಾರ್ಯಾಲಯದಲ್ಲಿ ಆಯೋಜಿಸಲಾಗಿತ್ತು.
ಮುಖ್ಯ ಅಥಿತಿಗಳಾಗಿ ಆಗಮಿಸಿದ ಬೆಳಗಾವಿ ಮಹಾನಗರಸಭೆಯ ಡೆಪುಟಿ ಕಮೀಶನರ್ ಭಾಗ್ಯಶ್ರೀ ಹುಗ್ಗಿ ಗುಂಜೇರಿಯವರು, ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಖಾಸಬಾಗ, ವಡಗಾವದಲ್ಲಿ ತಯಾರಾಗುವ ಶಾಪುರಿ ಸೀರೆಗಳ ಪ್ರಚಾರ ಮತ್ತು ಮಾರಾಟವನ್ನು ಪ್ರೋತ್ಸಾಹಿಸುವ ಉದ್ದೇಶದ ಹಿನ್ನೆಲೆಯಲ್ಲಿ ಕೇವಲ ಶಾಪುರಿ ಸೀರೆ ಹಾಗೂ ಅವುಗಳಿಂದ ನಿರ್ಮಿಸಿದ ವಿವಿಧ ಉಡುಪುಗಳನ್ನು ತೊಟ್ಟು ಸುಮಾರು ೩೦ ರಿಂದ ೬೫ ವರ್ಷ ವಯೋಮಾನದ ಸುಮಾರು ೩೦ ಕ್ರಾಂತಿ ಮಹಿಳಾ ಮಂಡಳದ ಸದಸ್ಯೆಯರು “ಧರಿತ್ರಿ ಫ್ಯಾಶನ್ ಶೋ”ದಲ್ಲಿ ಪಾಲ್ಗೊಂಡಿದ್ದು ಇದೊಂದು ವಿಭಿನ್ನ ರೀತಿಯ ಪ್ರಪ್ರಥಮ ಫ್ಯಾಶನ್ ಶೋ ಇದಾಗಿದೆ ಎಂದರು. ಅಲ್ಲದೆ ಸ್ತ್ರೀ ಪುರುಷರ ಸಮಾನತೆಗೆ ಒತ್ತು ಕೊಡುತ್ತಾ ಹೆಣ್ಣು ಮಗುವಿಗೆ ಗಂಡು ಮಗುವಿನಷ್ಟೇ ಪ್ರೊತ್ಸಾಹ ಸಹಕಾರ ಸಂಸ್ಕಾರ ಕೊಡುವದು ತಂದೆ ತಾಯಿಗಳ ಕರ್ತವ್ಯವಾಗಿದೆ ಎಂದರು. .
ಈರಣ್ಣಾ ರೊಟ್ಟೆ ಡೆೆಪುಟಿ ಡೈರೆಕ್ಟರ, ದೇಶಪಾಂಡೆ ಫೌಂಡೇಶನ್ ಹುಬ್ಬಳ್ಳಿ, ಹಾಗೂ ಖಾಸಬಾಗ ದೇವಾಂಗ ಸಮಾಜದ ಚೇರಮನ್‌ರಾದ ನಾರಾಯಣ ಕುಲಗೊಡ ಅಥಿತಿಗಳಾಗಿ ಆಗಮಿಸಿದ್ದರು.
ಅಥಿತಿ ಉಪನ್ಯಾಸಕರಾಗಿ ಆಗಮಿಸಿದ ಮಹಾಂತೇಶ ನಗರ ರಹವಾಸಿ ಸಂಘ ಶಿಕ್ಷಣ ಮಹಾವಿದ್ಯಾಲಯದ ಪ್ರಿನ್ಸಿಪಾಲರಾದ ಡಾ. ನಿರ್ಮಲಾ ಬಟ್ಟಲ ಅವರು, ಕ್ರಾಂತಿ ಮಹಿಳಾ ಮಂಡಳವು ಮಹಿಳಾಪರ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದುದು ಶ್ಲಾಘನೀಯವೆನ್ನುತ್ತಾ ಮಹಿಳೆಯು ಸ್ವಾತಂತ್ರö್ಯಕ್ಕೆ ಅನರ್ಹಳು ಅನ್ನುವದನ್ನು ಅಲ್ಲಗಳೆದವರು ನಮ್ಮ ೧೨ನೇ ಶತಮಾನದ ಶಿವಶರಣರು. ಅವರು ಸ್ರೀಯಳಿಗೆ ಸಮಾಜದಲ್ಲಿ ಸಮಾನ ಹಕ್ಕನು ಪ್ರತಿಪಾದಿಸಿದವರು. ಒಂದು ಮನೆ ಒಂದು ಸಮಾಜ ಸುಸ್ಥಿಯಲ್ಲಿರಬೇಕಾದರೆ ಅದಕ್ಕೆ ಮೂಲ ಕಾರಣ ಮಹಿಳೆಯೇ ಆಗಿದ್ದಾಳೆ ಎಂದರು.
ಆದರ್ಶ ದಂಪತಿಗಳೆಂದು ಶೈಲಜಾ ಮತ್ತು ದೀಪಕ ಮಾಸ್ತೆ, ಪ್ರೇಮಾ ಮತ್ತು ಶಾಂತಿನಾಥ ಉಪಾಧೈ ಇವರನ್ನು ಸನ್ಮಾನಿಸಲಾಯಿತು. ಮತ್ತು ವಿÀಭಿನ್ನ ಕ್ಷೇತ್ರಗಳಲ್ಲಿ ಸೇವೆಗೈದ ಡಾ. ಸುನಿತಾ ಪಾಟೀಲ, ಮೈನಾ ಕುಲಕರ್ಣಿ ಇವರನ್ನು ಸನ್ಮಾನಿಸಲಾಯಿತು. ಇದರ ಜೊತೆಗೆ ದಿವಂಗತ ಲತಾ ಮಂಗೇಶ್ಕರರವರಿಗೆ ಗಾನ ನಮನ ಸಲ್ಲಿಲಾಯಿತು. ಇದರಲ್ಲಿ ತನಿಶಾ ಕುಲಕರ್ಣಿ, ರೋಶನೀ ಬಳ್ಳಾರಿ, ಆರತಿ ಬಳ್ಳಾರಿ ಲತಾ ಮಂಗೇಶ್ಕರರವರ ಹಾಡುಗಳನ್ನು ಪ್ರಸ್ತುತಪಡಿಸಿದರು.
ಈರಣ್ಣಾ ರೊಟ್ಟೆ ಅವರು ದೇಶಪಾಂಡೆ ಫೌಂಡೇಶನ್‌ವತಿಯಿಂದ ವಿವಿಧ ಕ್ಷೇತ್ರದಲ್ಲಿ ಸಮಾಜ ಸೇವೆಗೈದ ಮಹಿಳೆಯರನ್ನು ಸತ್ಕರಿಸಿದರು.
ಕಾರ್ಯಕ್ರಮವನ್ನು ಮಮತಾ ಅಂಟಿನ ಶೋಭಾ ಕಾಡನ್ನವರ, ರೇಣುಕಾ ಕಾಂಬಳೆಯವರ ಪ್ರಾರ್ಥನಾ ಗೀತೆಯೊಂದಿಗೆ ಪ್ರಾರಂಭಿಸಲಾಯಿತು. ಕ್ರಾಂತಿ ಮಹಿಳಾ ಮಂಡಳದ ಅಧ್ಯಕ್ಷರಾದ ಮಂಗಲ ಮಠದ ಎಲ್ಲರನ್ನು ಸ್ವಾಗತಿಸಿದರು. ಉಮಾ ಸಂಗೀತ ಪ್ರತಿಷ್ಠಾನ ಹಾಗು ಕ್ರಾಂತಿ ಮಹಿಳಾ ಮಂಡಳದ ಧ್ಯೇಯೋದ್ದೇಶಗಳ ಕಿರು ಪರಿಚಯವನ್ನು ಕ್ರಾಂತಿ ಮಹಿಳಾ ಮಂಡ¼ದÀ ಸಕ್ರೆಟರಿಯಾದ ರತ್ನಶ್ರೀ ಗುಡೇರ ಮಾಡಿಕೊಟ್ಟರು. ಅಥಿತಿಗಳ ಪರಿಚಯವನ್ನು ತ್ರಿಶಿಲಾ ಪಾಯಪ್ಪನವರ, ಭಾರತಿ ರತ್ನಪ್ಪಗೋಳ ಹಾಗೂ ದೀಪ್ತಿ ಕಾಗವಾಡ ಮಾಡಿದರು.
ಕಾರ್ಯಕ್ರಮವನ್ನು ಗೀತಾ ಎಮ್ಮಿ ಹಾಗೂ ಮಂಗಳಾ ಅರಳಿಮಟ್ಟಿ ನಿರೂಪಿಸಿದರು. ಭಾರತಿ ಕೆರೂರ ವಂದನೆಗಳನ್ನು ಸಮರ್ಪಿಸಿದರು.


Gadi Kannadiga

Leave a Reply