ಬೆಳಗಾವಿ ; ಪಂಚಮಸಾಲಿ ಮೀಸಲಾತಿಗೆ ಸಂಬಂಧ ಪಟ್ಟಂತೆ ವಿವರಗಳನ್ನು ಮತ್ತು ಸಚಿವ ಸಂಪುಟ ತೆಗೆದುಕೊಂಡ ತೀರ್ಮಾನ ಕುರಿತು ಇದೇ ತಿಂಗಳ 12ರ ಒಳಗಾಗಿ ಗೆಜೆಟ್ ಪ್ರಕಟಣೆ ಹೊರಟಿಸದೆ ಇದ್ದಲ್ಲಿ 13ನೇ ತಾರೀಕಿನಂದು ಶಿಗ್ಗಾವಿಯಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿವಾಸದ ಎದುರು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಪಂಚಮಸಾಲಿ ಪೀಠದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿಯವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಅವರಿಂದು ಸಂಜೆ ಬೆಳಗಾವಿಯಲ್ಲಿ ಪತ್ರಿಕಾ ಪರಿಷತ್ತಿನಲ್ಲಿ ಈ ವಿಷಯವನ್ನು ತಿಳಿಸಿದರು. ಈ ಸಂಬಂಧ ಸರ್ಕಾರಕ್ಕೆ ಈಗಾಗಲೇ ಗಡುವು ನೀಡಲಾಗಿತ್ತು ಆ ಗಡುವಿನೊಳಗೆ ಮೀಸಲಾತಿ ಕುರಿತ ಸ್ಪಷ್ಟತೆಯನ್ನು ಬಯಸಲಾಗಿತ್ತು ಆದರೆ ಸರ್ಕಾರ ಈ ಗಡುವಿನೊಳಗೆ ಸೂಕ್ತ ಉತ್ತರವನ್ನು ನೀಡಿಲ್ಲ ಹೀಗಾಗಿ ಅನಿವಾರ್ಯವಾಗಿ ಈ ಕ್ರಮವನ್ನು ಕೈಗೊಳ್ಳಲಾಗಿದೆ ಈ ಸಂಬಂಧ ಹಾವೇರಿ ಜಿಲ್ಲೆಯ ಸಮಾಜದ ಹಿರಿಯರೊಂದಿಗೆ ಮತ್ತು ಶಿಗ್ಗಾವಿ ಕ್ಷೇತ್ರದಲ್ಲಿರುವ ಸಮಾಜದ ಹಿರಿಯರೊಂದಿಗೆ ಚರ್ಚಿಸಿ ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ ಎಂದು ನುಡಿದ ಶ್ರೀಗಳು ಈ ಬಾರಿಯ ಸಂಕ್ರಾಂತಿಯನ್ನು ಶಿಗ್ಗಾವಿಯಲ್ಲಿಯೇ ಮಾಡೋಣ ಸಮಾಜದ ಬಾಂಧವರೆಲ್ಲ ಸಂಕ್ರಾಂತಿಯ ಬುತ್ತಿ ಕಟ್ಟಿಕೊಂಡು ಶಿಗ್ಗಾವಿಗೆ ಬನ್ನಿ ಎಂದವರು ಕರೆ ನೀಡಿದರು.
ಶಿಗ್ಗಾವಿಯಲ್ಲಿಯ ಬೃಹತ್ ಸಭೆಯಲ್ಲಿ ಮುಂದಿನ ಹೋರಾಟದ ರೂಪುರೇಷೆಯನ್ನು ನಿರ್ಧರಿಸಲಾಗುವುದು, ಮೀಸಲಾತಿ ಸಂಬಂಧಿಸಿದಂತೆ ಅಡ್ಡಗಾಲ ಹಾಕುತ್ತಿರುವವರು ಮತ್ತು ವಿರೋಧಿಸುತ್ತಿರುವ ವಿವಿಧ ಪಕ್ಷಗಳಲ್ಲಿರುವ ನಾಯಕರು ಶಾಸಕರೆಲ್ಲರ ಹೆಸರುಗಳನ್ನು ಘೋಷಿಸಲಾಗುವುದು ಐಯ ಕ್ಷೇತ್ರಗಳ ಪಂಚಮಸಾಲಿ ಸಮಾಜದ ಬಾಂಧವರು ಯಾವ ರೀತಿ ತೀರ್ಮಾನ ಕೈಗೊಳ್ಳುತ್ತಾರೆ ಎಂಬುದನ್ನು ಭವಿಷ್ಯ ನಿರ್ಧರಿಸಲಿದೆ ಎಂದು ಶ್ರೀಗಳು ಹೇಳಿದರು.
ಮೀಸಲಾತಿಗೆ ಸಂಬಂಧಪಟ್ಟ ಸಂಪೂರ್ಣ ವಿವರಗಳು ತಮ್ಮ ಕೈ ಸೇರಿಲ್ಲ ಇಲ್ಲಿಯವರೆಗೆ ಎಲ್ಲವೂ ಬಾಯಿ ಮಾತಿನಲ್ಲಿಯೇ ಆಗಿದೆ ಅಧಿಕೃತವಾಗಿ ಯಾವುದೇ ಆದೇಶ ಅಥವಾ ಕಾಗದ ಪತ್ರಗಳ ರೂಪದಲ್ಲಿ ಬಂದಿಲ್ಲ ಅದಕ್ಕೇಂದೆ ಇದೇ ತಿಂಗಳ 12ರ ಒಳಗಾಗಿ ಸರ್ಕಾರ ಈ ಕುರಿತು ಗೆಜೆಟ್ ಪ್ರಕಟಣೆಯನ್ನು ಹೊರಡಿಸಲೇಬೇಕು ಇಲ್ಲದಿದ್ದಲ್ಲಿ ದಿನಾಂಕ್ 13ರಂದು ಶಿಗ್ಗಾವಿಯಲ್ಲಿ ಮುಖ್ಯಮಂತ್ರಿಗಳ ಮನೆ ಎದುರು ಬೃಹತ್ ಪ್ರತಿಭಟನೆಯನ್ನು ಎದುರಿಸಬೇಕು ಎಂದು ಶ್ರೀಗಳು ಖಡಕ್ಕಾಗಿ ನುಡಿದರು.