This is the title of the web page
This is the title of the web page

Please assign a menu to the primary menu location under menu

Local News

ಸರ್ಕಾರದ ಯೋಜನೆ ಜನರ ಕೈ ಸೇರಲು ಡಿಜಿಟಲ್ ಇಂಡಿಯಾ ಅನುಕೂಲ: ಉಪ ಸಭಾಪತಿ ಆನಂದ ಮಾಮನಿ


ಬೆಳಗಾವಿ,ಜುಲೈ೨೧: ಡಿಜಿಟಲ್ ಇಂಡಿಯಾದ ಅಳವಡಿಕೆಯಿಂದ ಭಾರತದಾದ್ಯಂತ ಕೃಷಿ, ಶಿಕ್ಷಣ, ನಾಗರಿಕ ಸೇವೆ ಸೇರಿದಂತೆ ಎಲ್ಲಾ ಯೋಜನೆಗಳು ಪಾರದರ್ಶಕವಾಗಿ ಜನರನ್ನು ತಲುಪುತ್ತಿವೆ ಎಂದು ಕರ್ನಾಟಕ ವಿಧಾನಸಭೆ ಉಪ ಸಭಾಪತಿ ಆನಂದ ಮಾಮನಿ ಅವರು ಅಭಿಪ್ರಾಯಪಟ್ಟರು.
ಕೇಂದ್ರ ಸಂವಹನ ಶಾಖೆ, ಧಾರವಾಡ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಭಾರತ ಸರ್ಕಾರ ಹಾಗೂ ಶ್ರೀ ಕೆ.ಎಮ್.ಮಾಮನಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸವದತ್ತಿ ಇವರ ಸಹಯೋಗದೊಂದಿಗೆ ನಡೆದ ಡಿಜಿಟಲ್ ಇಂಡಿಯಾ ಮತ್ತು ೭೫ನೇ ಸ್ವಾತಂತ್ರö್ಯದ ಅಮೃತ ಮಹೋತ್ಸವ ಕಾರ್ಯಕ್ರಮ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.
ಭಾರತದ ಸಂವಿಧಾನವೇ ಉತ್ಕೃಷ್ಟ ಈ ಸಂವಿಧಾನದ ತಳಹದಿಯಲ್ಲಿ ಜಾರಿಯಾಗುತ್ತಿರುವ ಪ್ರತಿಯೊಂದು ಯೋಜನೆಗಳು ಸಮರ್ಪಕವಾಗಿ ಜನರ ಕೈ ಸೇರಲು ಡಿಜಿಟಲ್ ಇಂಡಿಯಾ ಅತ್ಯಂತ ಸಹಕಾರಿ ಕಾರ್ಯಕ್ರಮವಾಗಿದೆ. ಹಳ್ಳಿಗಳನ್ನು ತಲುಪುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪ್ರತಿಯೊಂದು ಯೋಜನೆಗಳ ಸವಲತ್ತುಗಳನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸವದತ್ತಿ ತಾಲೂಕ ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿ ಯಶವಂತಕುಮಾರ ಗ್ರಾಮ ಒನ್ ಯೋಜನೆಯು ಗ್ರಾಮೀಣ ಪ್ರದೇಶದಲ್ಲಿ ಎಲ್ಲಾ ಸರ್ಕಾರಿ ಸೌಲಭ್ಯವನ್ನು ಒಂದೇ ಸ್ಥಳದಲ್ಲಿ ಜನರಿಗೆ ಒದಗಿಸುತ್ತಿದ್ದು, ಡಿಜಿಟಲ್ ಇಂಡಿಯಾ ಮೂಲಕ ಇದು ಯಶಸ್ವಿಯಾಗಿದೆ ಎಂದು ಹೇಳಿದರು.
ಕೇಂದ್ರ ಸಂವಹನ ಶಾಖೆ ಧಾರವಾಡದ ಕ್ಷೇತ್ರ ಪ್ರಚಾರ ಅಧಿಕಾರಿ ಶೃತಿ ಎಸ್.ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು ಡಿಜಿಟಲ್ ಇಂಡಿಯಾ ಪರಿಕಲ್ಪನೆಯನ್ನು ಭಾರತದ ಎಲ್ಲೆಡೆ ವ್ಯಾಪಕವಾಗಿ ಅನುಷ್ಠಾನಗೊಳಿಸಲು ಹೆಚ್ಚು ಆಸಕ್ತಿ ತೋರಿಸಿರುವುದು ಎಲ್ಲೆಡೆ ಕಾಣಿತ್ತಿದೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾದ ಶಿವಾನಂದ ವ್ಯವಸ್ಥಾಪಕರು, ಎಸ್.ಬಿ.ಐ ಸವದತ್ತಿ ಇವರು ಡಿಜಿಟಲ್ ಇಂಡಿಯಾ ಕುರಿತು ಮಾತನಾಡಿದರು. ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಬಿ.ಎಮ್ ವಾಲಿ ೭೫ ನೇ ಸ್ವಾತಂತ್ರö್ಯದ ಅಮೃತ ಮಹೋತ್ಸವ ಕುರಿತು ಉಪನ್ಯಾಸ ನೀಡಿದರು.
೭೫ ನೇ ಸ್ವಾತಂತ್ರö್ಯದ ಅಮೃತ ಮಹೋತ್ಸವ ಹಾಗೂ ಡಿಜಿಟಲ್ ಇಂಡಿಯಾ ಕುರಿತಾಗಿ ಕಾಲೇಜಿನಲ್ಲಿ ನಡೆಸಿದ್ದ ಪ್ರಬಂಧ, ಭಾಷಣ ಹಾಗೂ ರಂಗೋಲಿ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಗಣ್ಯರು ಬಹುಮಾನ ವಿತರಿಸಿದರು.
ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ. ಮಾರುತಿ ಎಮ್ ವಹಿಸಿದ್ದರು, ಕ್ಷೇತ್ರ ಪ್ರಚಾರ ಸಹಾಯಕರಾದ ಮುರಳೀಧರ ಕಾರಭಾರಿ ಸ್ವಾಗತಿಸಿದರು, ಡಾ. ಎಮ್.ಆರ್.ದೊಡ್ಮನಿ ವಂದಿಸಿದರು, ಪ್ರೊ. ಶಕುಂತಲಾ ಅಜ್ಜಣ್ಣವರ ಕಾರ್ಯಕ್ರಮವನ್ನು ನಿರೂಪಿಸಿದರು, ಕಾರ್ಯಕ್ರಮದಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹಾಗೂ ಉಪನ್ಯಾಸಕ ವೃಂದ ಮುಂತಾದವರು ಪಾಲ್ಗೊಂಡಿದ್ದರು.


Gadi Kannadiga

Leave a Reply