ಗದಗ ನವೆಂಬರ್ ೨೪: ಅಂಚೆ ಇಲಾಖೆಯು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ನ ಮೂಲಕ ಪೆನ್ಶನರ್ ಗಳ ಮನೆಬಾಗಿಲಿಗೆ ಜೀವನ ಪ್ರಮಾಣ ಪತ್ರವನ್ನು ನೀಡುವ ಸೇವೆಯನ್ನು ಮಾಡುತ್ತಿದೆ. ಕೇವಲ ೭೦/- ರೂಪಾಯಿಗಳಿಗೆ ನಿಮ್ಮ ಸಮೀಪದ ಅಂಚೆ ಕಚೇರಿಯ ಪೋಸ್ಟ್ಮನ್ನರು ಈ ಸೇವೆಯನ್ನು ನೀಡುತ್ತಾರೆ. ಪೋಸ್ಟ್ ಇನ್ಫೋ ಅಪ್ಲಿಕೇಷನ್ ಮೂಲಕ ಕೋರಿಕೆಯನ್ನು ಸಲ್ಲಿಸಿದರೆ ಸಂಭಂದಿಸಿದ ಪೋಸ್ಟ್ ಮನ್ನರು ನಿಮ್ಮ ಮನೆ ಬಾಗಿಲಿಗೆ ಬಂದು ಡಿಜಿಟಲ್ ಜೀವನ ಪ್ರಮಾಣ ಪತ್ರವನ್ನು ನೀಡುತ್ತಾರೆ. ಇದಕ್ಕೆ ಯಾವುದೇ ಹೆಚ್ಚುವರಿ ಶುಲ್ಕ ಇರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಸಮೀಪದ ಅಂಚೆ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.
Gadi Kannadiga > State > ಡಿಜಿಟಲ್ ಜೀವನ ಪ್ರಮಾಣ ಪತ್ರ