ರೋಟರಿಯಿಂದ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸುವ ಕಾರ್ಯ;ರೋ ದಿಲೀಪ್ ಚಿಟ್ನೆಸ್

Murugesh Shivapuji
ರೋಟರಿಯಿಂದ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸುವ ಕಾರ್ಯ;ರೋ ದಿಲೀಪ್ ಚಿಟ್ನೆಸ್
WhatsApp Group Join Now
ಬೆಳಗಾವಿ; ವಿದ್ಯಾರ್ಥಿಗಳಲ್ಲಿಯ ನಾಯಕತ್ವ ಗುಣಕ್ಕೆ ನೀರೆದು ಪೋಷಿಸುವವ ಕೆಲಸವನ್ನು ಬೆಳಗಾವಿಯ ರೋಟರಿ  ಮಿಡ್ ಟೌನ್ ಸಂಸ್ಥೆಯು ಮಾಡುತ್ತಿದೆ.ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ, ರಾಷ್ಟ್ರಪ್ರೇಮ,ಸಹೋದರತ್ವ,ಸೌಹಾರ್ದ,ಕಾಯಕ, ದಾಸೋಹ  ಪರಿಸರ ಪ್ರಜ್ಞೆ, ಬೆಳೆಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು.ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಪ್ರೇರೆಪಿಸಿ, ಉತ್ತಮ ಪ್ರಜೆಗಳನ್ನಾಗಿ ರೂಪಗೊಳಿಸುವ ನಿಟ್ಟಿನಲ್ಲಿ ಶ್ರಮವಹಿಸಬೇಕು ಎಂದು  ಎಮ್.ವ್ಹಿ.ಹೇರವಾಡಕರ ಪ್ರೌಢಶಾಲೆಯ ಸಭಾಂಗಣದಲ್ಲಿ ರೋಟರಿ ಇಂಟರ್ಯಾಕ್ಟ ( Interact club )ಕ್ಲಬ್ ಗಳ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ  ಖ್ಯಾತ ಉದ್ಯಮಿ .ರೋ ದಿಲೀಪ್ ಚಿಟ್ನೆಸ್ ಹೇಳಿದರು.
 ಎಮ್ ವ್ಹಿ ಹೇರವಾಡಕರ ಇಂಗ್ಲಿಷ್ ಪ್ರೌಢಶಾಲೆಯ ಇಂಟರಾಕ್ಟ ಕ್ಲಬ್ ಅದ್ಯಕ್ಷರಾಗಿ  ಕು ಪವಿತ್ರಾ ಮನ್ನೇರಿ ಕಾರ್ಯದರ್ಶಿಯಾಗಿ ಸಮರ್ಥ  ರೇವಣಕರ
 ಸೆಂಟಮೆರಿ ಇಂಗ್ಲೀಷ ಪ್ರೌಢಶಾಲಾ ಇಂಟರಾಕ್ಟ ಕ್ಲಬ್ ಅದ್ಯಕ್ಷರಾಗಿ ರಾವು ಬಾಲದಾರ. ಕಾರ್ಯದರ್ಶಿಯಾಗಿ ಸಬೀನಾ ರೇಹಾನ್
  ಸಂತಮೀರಾ ಇಂಗ್ಲಿಷ್ ಪ್ರೌಢಶಾಲಾ ಇಂಟರಾಕ್ಟ ಕ್ಲಬ್ ಅಧ್ಯಕ್ಷರಾಗಿ ಶ್ರೇಯಸ್ ಚಂದನ ಕಾರ್ಯದರ್ಶಿಯಾಗಿ ಸೃಷ್ಟಿ ಬೊಂಗಾಳೆ.
 ವಾಯ್ ವಿ.ಎಸ್ ಹಂಜಿ ಯಮಕನಮರ್ಡಿ ಪ್ರೌಢಶಾಲಾ ಇಂಟರಾಕ್ಟ ಕ್ಲಬ್ ಅಧ್ಯಕ್ಷರಾಗಿ ಕು.ಸೌಮ್ಯ ನಿರ್ಮಲ. ಕಾರ್ಯದರ್ಶಿಯಾಗಿ ಅಭಯ ಹಂಜಿ.
ಸೇವಾ ದೀಕ್ಷೆಯನ್ನು ಪಡೆದುಕೊಂಡರು.
  ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡಿದ ರೋಟರಿ ಕ್ಲಬ್ ಮಿಡ್ ಟೌನ್ ಅಧ್ಯಕ್ಷರಾದ ರೊ.ಉದಯಸಿಂಗ ರಜಪೂತರು ಮಾತನಾಡುತ್ತಾ ಶಾಲಾ ಆವರಣವು ಪ್ಲಾಸ್ಟಿಕ್ ಮುಕ್ತ ವಲಯವನ್ನಾಗಿ ಮಾಡಲು ಶ್ರಮಿಸಬೇಕು ಅಲ್ಲದೇ ನೀರನ್ನು ಮಿತವ್ಯಯ ವಾಗಿ ಬಳಿಸಿ ಮುಂದಿನ ಪೀಳಿಗೆಗೆ ಸಹಾಯಮಾಡಬೇಕು.”ಹೊಟೆಲ್ ಗಳಿಗೆ ಹೋದಾಗ ಅಲ್ಲಿ ಅವರು ನಿಮಗೆ ನೀರನ್ನು ಗ್ಲಾಸಿನಲ್ಲಿ ತುಂಬಿ ಕೊಡುತ್ತಾರೆ.ಅದರಲ್ಲಿ ಸ್ವಲ್ಪವೇ ನೀರನ್ನು ಕುಡಿದು ಉಳಿದ ನೀರನ್ನು ಹಾಳು ಮಾಡುತ್ತಿರಿ.ಅಂತಹ ಹೊಟೆಲ್ ಗಳಲ್ಲಿ ಒನ್ ಬಾಯ್ ಟು ಪದ್ಧತಿಯನ್ನು ಅನುಸರಿಸಿರಿ  ನೀರು ಉಳಿಸುವ ಅಭಿಯಾನ ” ಮಾಡಲು ವಿದ್ಯಾರ್ಥಿಗಳಿಗೆ ಕರೆ ಕೊಟ್ಟರು.
  ವೇದಿಕೆಯ ಮೇಲೆ ರೊ.ನಂದನ ಬಾಗಿ,ಅಶೋಕ ಬದಾಮಿ,ಪ್ರಾಂಶುಪಾಲರಾದ ಶೋಭಾ ಕುಲಕರ್ಣಿ ಇದ್ದರು. ಹೇರವಾಡಕರ ಪ್ರೌಢಶಾಲಾ ವಿದ್ಯಾರ್ಥಿನಿಯರು ಕಾರ್ಯಕ್ರಮ ನಿರೂಪಣೆ ಹಾಗೂ ವಂದನಾರ್ಪಣೆ ಮಾಡಿದರು.
 ಕಾರ್ಯಕ್ರಮದಲ್ಲಿ,ಅಶೋಕ ಮಳಗಲಿ,ಮನೋಹರ ಜರತಾರಕರ,ರಾಮ ಸಾಂಗಲೆ,ಸತೀಶ ನಾಯಕ, ರಾಜೀವ ದೇಶಪಾಂಡೆ, ರೂಪಾ ದೇಶಪಾಂಡೆ ಹೇರವಾಡಕರ ಶಾಲಾ ಸಿಬ್ಬಂದಿ  ಮುಂತಾದವರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article
error: Content is protected !!