ಗದಗ ಡಿಸೆಂಬರ್ ೨೮: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು, ಗದಗ ಇವರ ಅಧೀನದ ಗ್ರಾಮೀಣ ಪ್ರದೇಶಗಳ ಸಮುದಾಯ ಆರೋಗ್ಯ ಕೇಂದ್ರ ಕೇಂದ್ರಗಳಲ್ಲಿ ಖಾಲಿ ಇರುವ ತಜ್ಞ ವ್ಯದ್ಯರ (ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞರು, ಅರವಳಿಕೆ ತಜ್ಞರು, ಚಿಕ್ಕಮಕ್ಕಳ ತಜ್ಞರು) ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ ಸಾಮಾನ್ಯ ಕರ್ತವ್ಯ ವೈಧ್ಯಾಧಿಕಾರಿಗಳ ಹುದ್ದೆಗಳನ್ನು ತಾತ್ಕಾಲಿಕವಾಗಿ ಅಥವಾ ಕ್ರಮಬಧ್ದವಾಗಿ ನೇಮಕವಾಗುವವರೆಗೆ ಭರ್ತಿ ಮಾಡಲು ನೇರ ಸಂದರ್ಶನ (ವಾಕ್-ಇನ್-ಇಂಟರ್‌ವ್ಯೂವ್) ಮೂಲಕ ಅರ್ಹ ಅಭ್ಯರ್ಥಿಗಳನ್ನು ಅಹ್ವಾನಿಸಲಾಗಿದೆ.
ಇಚ್ಚೆಯುಳ್ಳ ಅಭ್ಯರ್ಥಿಗಳು ಪ್ರತಿ ಸೋಮವಾರದಂದು ಬೆಳಿಗ್ಗೆ ೧೧ ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ, ಕೊಠಡಿ ಸಂ-೨೧, ಜಿಲ್ಲಾಡಳಿತ ಭವನ, ಹುಬ್ಬಳ್ಳಿ ರಸ್ತೆ, ಗದಗ ಇಲ್ಲಿಗೆ ತಮ್ಮ ಬಯೋಡೆಟಾ ಮತ್ತು ವಿದ್ಯಾರ್ಹತೆಗೆ ಸಂಬಂಧಿಸಿದ ದಾಖಲಾತಿ ದ್ವಿಪ್ರತಿಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಲು ಸೂಚಿಸಿದೆ. ಗ್ರಾಮೀಣ ಪ್ರದೇಶದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರ ಮತ್ತು ಪ್ರಾಥಮಿÀ ಆರೋಗ್ಯ ಕೇಂದ್ರಗಳಲ್ಲಿ ಸೇವೆ ಸಲ್ಲಿಸಲು ಒಪ್ಪಿಗೆ ಇರಬೇಕು. ಗುತ್ತಿಗೆ ಆಧಾರದ ಮೇಲೆ ಭರ್ತಿಯಾದ ತಜ್ಞ ವೈದ್ಯರಿಗೆ ರೂ ೧.೦೦.೦೦೦/- ಗಳನ್ನು ಹಾಗೂ ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳಿಗೆÀ ರೂ.೬೦.೦೦೦/-ಸಂಚಿತ ವೇತನವಾಗಿ ಪಾವತಿ ಮಾಡಲಾಗುವದು. ಇದು ಕ್ರಮಬಧ್ದ ನೇಮಕಾತಿಯಾಗಿರದ ಕಾರಣ ಕರ್ತವ್ಯಕ್ಕೆ ಹಾಜರಾಗುವ ಅಭ್ಯರ್ಥಿಗಳು ಕರ್ನಾಟಕ ಲೋಕಸೇವಾ ಅಯೋಗ ನಡೆಸುವ ನೇಮಕಾತಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಹೊಂದಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಅಧಿಕಾರಿಗಳು, ಗದಗ ಮೊಬೈಲ್ ಸಂಖ್ಯೆ : ೯೪೪೯೮೪೩೦೫೨ ಇವರನ್ನು ಸಂಪರ್ಕಿಸಬಹುದು.
Gadi Kannadiga > State > ನೇರ ಸಂದರ್ಶನ