This is the title of the web page
This is the title of the web page

Please assign a menu to the primary menu location under menu

State

ನೇರ ಸಂದರ್ಶನ


ಗದಗ ಸೆಪ್ಟೆಂಬರ್ ೧೪: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಗದಗ ವತಿಯಿಂದ ಸೆಪ್ಟೆಂಬರ್ ೧೭ ರಂದು ಬೆಳಿಗ್ಗೆ ೯-೩೦ ರಿಂದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ರೂಮ್ ನಂಬರ್-೧೧೫, ಜಿಲ್ಲಾಆಡಳಿತ ಭವನ ಗದಗ. ಇಲ್ಲಿ ನೇರ ಸಂರ್ದಶನ ಹಮ್ಮಿಕೊಳ್ಳಲಾಗಿದೆ. ನೇರ ಸಂರ್ದಶನದಲ್ಲಿ ಎಲ್ & ಟಿ ಫೈನಾನ್ಸ್ ಲಿಮಿಟೆಡ್ , ಬಿ.ಎಸ್.ಎಸ್. ಮೈಕ್ರೋಫೈನಾನ್ಸ್ ಲಿಮಿಟೆಡ್ ಕಂಪನಿಗಳು ಭಾಗವಹಿಸಲಿವೆ.
ಈ ನೇರ ಸಂರ್ದಶನದಲ್ಲಿ ಎಸ್.ಎಸ್.ಎಲ್.ಸಿ, ಐ ಟಿ ಐ, ಪಿ.ಯು.ಸಿ, ಮತ್ತು ಪದವಿದರ, ಪಡೆದಿರುವ ೧೮ ರಿಂದ ೩೦ ವರ್ಷದೊಳಗಿನ ಪುರುಷ ಅಭ್ಯರ್ಥಿಗಳಿಗೆ ಅವಕಾಶವಿರುತ್ತದೆ. ನೇರ ಸಂದರ್ಶನದಲ್ಲಿ ಪಾಲ್ಗೊಳುವ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯ ಅಂಕಪಟ್ಟಿಗಳ ಝೆರಾಕ್ಸ್ ಪ್ರತಿಗಳು, ೪ ರೆಸ್ಯೂಮೆ(ಬಯೋಡಾಟಾ)ಪ್ರತಿಗಳು, ಮತ್ತು ಆಧಾರ ಕಾರ್ಡ್ ಝೆರಾಕ್ಸ್ನೊಂದಿಗೆ ಭಾಗವಹಿಸಬಹುದು. ನೇರ ಸಂರ್ದಶನದಲ್ಲಿ ಭಾಗವಹಿಸಿದ ಅಭ್ಯರ್ಥಿಗಳಿಗೆ ನೋಂದಣಿ ಕಡ್ಡಾಯವಾಗಿರುತ್ತದೆ. ಹಾಗೂ ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ ೦೮೩೭೨-೨೨೦೬೦೯, ೬೩೬೩೩೩೦೬೮೮, ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಪ್ರಭಾರಿ ಜಿಲ್ಲಾ ಉದ್ಯೋಗಾಧಿಕಾರಿ ಬಸವಂತ ಪಿ ಎನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply