ಬೆಳಗಾವಿ : ಬೆಳಗಾವಿ ಜಿಲ್ಲೆ ವಿಭಜನೆ ಆಗಬೇಕು ಎನ್ನುವುದು ಬಹುದಿನಗಳ ಬೇಡಿಕೆಯಾಗಿದ್ದೆ, ಈ ಕುರಿತು ಸ್ಥಳೀಯ ನಾಯಕರ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಬೆಳಗಾವಿ ನಗರದ ಸರ್ಕಿಟ್ ಹೌಸ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಬೆಳಗಾವಿಯನ್ನು ಮೂರು ಜಿಲ್ಲೆಯಾಗಬೇಕು ಅಥವಾ ಎರಡು ಜಿಲ್ಲೆಯಾಗಬೇಕು ಅಲ್ಲದೆ ಭಾಷಾವಾರು ಕುರಿತು ಜಿಲ್ಲೆ ವಿಭಜನೆ ಆಗುವುದು ಬಹು ದಿನಗಳಿಂದ ಬೇಡಿಕೆ ಇದೆ ಈ ವಿಷಯ ಕುರಿತು ಸರ್ಕಾರ ಸ್ಥಳೀಯ ನಾಯಕರ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಇನ್ನು ಸರ್ಕಾರ ಸಂಪುಟ ರಚನೆ ಬಗ್ಗೆ ಪ್ರಶ್ನಿಸಿದಾಗ ನಾನು ನಾಳೆ ದೆಹಲಿಗೆ ,ಹೋಗ್ತಾ ಇದ್ದೇನೆ ವರಿಷ್ಠರ ಜೊತೆ ಮಾತನಾಡಿ ಇದರ ಬಗ್ಗೆ ಕ್ರಮ ಕೈಗೊಳ್ಳಲಾಗುವುದು
ಬೆಳಗಾವಿ ಜಿಲ್ಲೆಯಲ್ಲಿ ಆಕಾಂಕ್ಷಿಗಳ ಪಟ್ಟಿ ಹೆಚ್ಚಾಗಿರುವುದರಿಂದ ನಮ್ಮನಾಯಕರು ಕೈಗೊಳ್ಳುವ ನಿರ್ಧಾರವನ್ನು ನಾವು ಒಪ್ಪಿಕೊಳ್ಳಬೇಕಾಗಿದೆ ಎಂದು ಹೇಳಿದರು.