ಕೊಪ್ಪಳ ಡಿಸೆಂಬರ್ ೦೫ : ಗುವಿಸಕಂನಿ, ಕೊಪ್ಪಳ ಕಾರ್ಯ ಮತ್ತು ಪಾಲನಾ ವೃತ್ತ ಕಛೇರಿ ವ್ಯಾಪ್ತಿಗೆ ಒಳಪಡುವ ಜಿಲ್ಲೆಯ ಇ.ಹೆಚ್.ಟಿ/ಹೆಚ್ ಟಿ ವಿದ್ಯುತ್ ಗ್ರಾಹಕರ ಸಂವಾದ ಸಭೆಯನ್ನು ಡಿಸೆಂಬರ್ ೦೭ ರಂದು ಮಧ್ಯಾಹ್ನ ೦೨.೩೦ ಗಂಟೆಗೆ ಕೊಪ್ಪಳ ಕಾರ್ಯ ಮತ್ತು ಪಾಲನಾ ವಿಭಾಗ ಜೆಸ್ಕಾಂ ಕಚೇರಿಯ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಕಾರ್ಯ ಮತ್ತು ಪಾಲನಾ ವೃತ್ತ ಕಛೇರಿ ಗು.ವಿ.ಸ.ಕಂ.ನಿ. ಕೊಪ್ಪಳ ವ್ಯಾಪ್ತಿಗೆ ಒಳಪಡುವ ಕೊಪ್ಪಳ ಜಿಲ್ಲೆಯ ಇ.ಹೆಚ್.ಟಿ/ಹೆಚ್.ಟಿ ವಿದ್ಯುತ್ ಗ್ರಾಹಕರ ಕುಂದು ಕೊರತೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಗ್ರಾಹಕರ ಸಭೆಯನ್ನು ಜೆಸ್ಕಾಂ ಕಾರ್ಯ ಮತ್ತು ಪಾಲನಾ ವಲಯ ಕಛೇರಿ ಬಳ್ಳಾರಿಯ ಮುಖ್ಯ ಅಭಿಯಂತರರ(ವಿ) ಅಧ್ಯಕ್ಷತೆಯಲ್ಲಿ ಕೊಪ್ಪಳ ಕಾ&ಪಾ ವಿಭಾಗ ಜೆಸ್ಕಾಂ ಕಚೇರಿಯಲ್ಲಿ ಡಿಸೆಂಬರ್ ೦೭ ರಂದು ಸಭೆ ಹಮ್ಮಿಕೊಂಡಿದ್ದು, ಎಲ್ಲಾ ಇ.ಹೆಚ್.ಟಿ/ಹೆಚ್.ಟಿ ವಿದ್ಯುತ್ ಗ್ರಾಹಕರು ಸಭೆಯಲ್ಲಿ ಭಾಗವಹಿಸಲು ಕೋರಲಾಗಿದೆ ಎಂದು ಕಾರ್ಯ ಮತ್ತು ಪಾಲನಾ ವೃತ್ತ, ಕೊಪ್ಪಳ ಜೆಸ್ಕಾಂನ ಅಧೀಕ್ಷಕ ಅಭಿಯಂತರರು (ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > State > ಡಿಸೆಂಬರ್ ೦೭ ರಂದು ಕೊಪ್ಪಳ ಜಿಲ್ಲೆಯ ಇ.ಹೆಚ್.ಟಿ/ಹೆಚ್.ಟಿ ವಿದ್ಯುತ್ ಗ್ರಾಹಕರ ಸಂವಾದ ಸಭೆ
ಡಿಸೆಂಬರ್ ೦೭ ರಂದು ಕೊಪ್ಪಳ ಜಿಲ್ಲೆಯ ಇ.ಹೆಚ್.ಟಿ/ಹೆಚ್.ಟಿ ವಿದ್ಯುತ್ ಗ್ರಾಹಕರ ಸಂವಾದ ಸಭೆ
Suresh05/12/2022
posted on