This is the title of the web page
This is the title of the web page

Please assign a menu to the primary menu location under menu

Local News

ಕಾರ್ಮಿಕ ಅದಾಲತ್: ಬಾಕಿ ಅರ್ಜಿಗಳು ವಿಲೇವಾರಿ


ಬೆಳಗಾವಿ,ಆ.೧೧: ಬೆಳಗಾವಿಯ ೧ ನೇ ಹಾಗೂ ೨ ನೇ ಹಿರಿಯ ಕಾರ್ಮಿಕ ನಿರೀಕ್ಷಕರ ಕಛೇರಿಗಳಿಗೆ ಸಂಬಂಧಿಸಿದಂತೆ ಬಾಕಿ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿರುತ್ತದೆ. ವಿಲೇವಾರಿಯಾದ ಕೆಲವು ಮಂಜೂರಾತಿ ಆದೇಶಗಳನ್ನು ಹಾಗೂ ಮದುವೆ ಬಾಂಡ್ ಪತ್ರಗಳನ್ನು ಮಾನ್ಯ ಬೆಳಗಾವಿ ಜಿಲ್ಲಾಧಿಕಾರಿಗಳಾದ ಸನ್ಮಾನ್ಯ ಶ್ರೀ ನಿತೇಶ ಪಾಟೀಲ ರವರು ಫಲಾನುಭವಿಗಳಿಗೆ ವಿತರಿಸಿದರು.
ಕಾರ್ಮಿಕ ಇಲಾಖೆ ಹಾಗೂ ಇಲಾಖೆಯ ಅದೀನದಲ್ಲಿ ಬರುವ ಮಂಡಳಿಗಳಿಗೆ ಸಂಬಂಧಿಸಿದ ಬಾಕಿ ಉಳಿದ ಪ್ರಕರಣಗಳು/ ಅರ್ಜಿಗಳನ್ನು ವಿಲೇವಾರಿ ಮಾಡುವ ಸಂಬಂಧ ರಾಜ್ಯದಾದ್ಯಂತ ದಿನಾಂಕ ೧೫ ಜುಲೈ ೨೦೨೨ ರಿಂದ ೧೫ ಆಗಸ್ಟ್ ೨೦೨೨ ರವರೆಗೆ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಕರ್ನಾಡಕ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭಧ್ರತಾ ಮಂಡಳಿ ಹಾಗೂ ಇಲಾಖೆಯಲ್ಲಿ ಬರುವ ಎಲ್ಲಾ ಅರ್ಜಿಗಳು/ ಪ್ರಕರಣಗಳನ್ನು ವಿಲೇವಾರಿ ಮಾಡಲು ಕಾರ್ಮಿಕ ಸಚಿವರು ಸೂಚಿಸಿರುವ ಹಿನ್ನೆಲೆ ಈ ಕಾರ್ಯಕ್ರಮ ನಡೆಸಲಾಯಿತು.
ಈ ಸಂದರ್ಭದಲ್ಲಿಮಾನ್ಯ ವೆಂಕಟೇಶ ಶಿಂದಿಹಟ್ಟಿ, ಉಪ ಕಾರ್ಮಿಕ ಆಯುಕ್ತರು ಬೆಳಗಾವಿ ಪ್ರಾದೇಶಿಕ ಬೆಳಗಾವಿ, ಕಾರ್ಮಿಕ ಅಧಿಕಾರಿಗಳಾದ ಮಹೇಶ ಕುಳಲಿ ಹಾಗೂ ತರನ್ನುಂ ಬೆಂಗಾಲಿ ಮತ್ತು ಹಿರಿಯ ಕಾರ್ಮಿಕ ನಿರೀಕ್ಷಕರು ಹಾಜರಿದ್ದರು.


Gadi Kannadiga

Leave a Reply