This is the title of the web page
This is the title of the web page

Please assign a menu to the primary menu location under menu

State

ಜಾನುವಾರು ದತ್ತು ಪಡೆದ ಸುಶೀರೇಂದ್ರ ರಾವ್‌ಗೆ ಪ್ರಮಾಣ ಪತ್ರ ವಿತರಣೆ


ಕೊಪ್ಪಳ, ಅ. ೧೫ : ಪುಣ್ಯಕೋಟಿ ಯೋಜನೆಯಡಿ ಜಾನುವಾರು ದತ್ತು ಪಡೆದ ಸುಶೀರೇಂದ್ರ ರಾವ್ ಅವರಿಗೆ ಸಂಸದರಾದ ಕರಡಿ ಸಂಗಣ್ಣನವರು ಪ್ರಮಾಣ ಪತ್ರ ವಿತರಣೆ ಮಾಡಿದರು.
ಪುಣ್ಯಕೋಟಿ ಯೋಜನೆಯಡಿ ಕೊಪ್ಪಳ ಜಿಲ್ಲಾ ಪಂಚಾಯತ್‌ಯಲ್ಲಿ ಪ್ರಥಮ ದರ್ಜೆ ಲೆಕ್ಕ ಸಹಾಯಕರಾಗಿ ಕಾರ್ಯ£ರ್ವಹಿಸುತ್ತಿರುವ ಸುಶೀರೇಂದ್ರ ರಾವ್ ದೇಶಪಾಂಡೆ ಅವರು ಗಂಗಾವತಿ ತಾಲ್ಲೂಕಿನ ಆನೇಗುಂದಿಯ ಶ್ರೀ ದುರ್ಗಾಮಾತ ಗೋಶಾಲೆ ಟ್ರಸ್ಟ್(ರಿ) ನ ಅನುಶ್ರೀ ಎಂಬ ಜಾನುವಾರುವನ್ನು ರೂ. ೧೧ ಸಾವಿರಗಳನ್ನು ಪಾವತಿಸಿ ಒಂದು ವರ್ಷದ ಅವಧಿಗೆ ದತ್ತು ಪಡೆದಿರುತ್ತಾರೆ. ಈ ವಿಷಯವಾಗಿ ಜಿ.ಪಂ. ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ಶುಕ್ರವಾರ (ಅ. ೧೪) ಜರುಗಿದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯಲ್ಲಿ ಅವರಿಗೆ ಪ್ರಮಾಣ ಪತ್ರ £Ãಡಿ ಗೌರವಿಸಿದರು.
ಕೊಪ್ಪಳ ಪಶುಪಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಪುಣ್ಯಕೋಟಿ ದತ್ತು ಯೋಜನೆಯ ಮುಖಾಂತರ ಸಾರ್ವಜ£ಕರು ಹಾಗೂ ಸಂಘ-ಸಂಸ್ಥೆಗಳು ಜಾನುವಾರುಗಳನ್ನು ದತ್ತು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ರಕ್ಷಿಸಲ್ಪಟ್ಟ ಗೋವುಗಳನ್ನು ದತ್ತು ಪಡೆದು ಗೋಶಾಲಾ ಅಭಿವೃದ್ಧಿಗೆ ದೇಣಿಗೆ £Ãಡಲು ಪುಣ್ಯಕೋಟಿ ದತ್ತು ಯೋಜನೆಯನ್ನು ಜಾರಿಮಾಡಲಾಗಿದ್ದು, ಈ ಯೋಜನೆಯಡಿ ಜಿಲ್ಲೆಯ ೪ ಖಾಸಗಿ ಗೋಶಾಲೆಗಳಲ್ಲಿರುವ ಜಾನುವಾರುಗಳನ್ನು ಸಾರ್ವಜ£ಕರು ಹಾಗೂ ಸಂಘ-ಸಂಸ್ಥೆಗಳು ದತ್ತು ಪಡೆಯಬಹುದಾಗಿರುತ್ತದೆ. ಪ್ರಸ್ತುತ ಜಿಲ್ಲೆಯ ೪ ಗೋಶಾಲೆಗಳಲ್ಲಿನ ಒಟ್ಟು ೧೯೫೭ ಜಾನುವಾರುಗಳನ್ನು ಈ ಯೋಜನೆಯಡಿ ನೋಂದಣಿ ಮಾಡಲಾಗಿರುತ್ತದೆ.
ದತ್ತು ಮತ್ತು ದೇಣಿಗೆ ವಿವರಗಳು ಇಂತಿವೆ.
ಪ್ರತಿ ಜಾನುವಾರುಗೆ ಒಂದು ವರ್ಷಕ್ಕೆ ರೂ. ೧೧ ಸಾವಿರ ಪಾವತಿಸಿ, ದತ್ತು ಪಡೆಯಬಹುದಾಗಿರುತ್ತದೆ. ೩ ತಿಂಗಳುಗಳು, ೬ ತಿಂಗಳುಗಳು, ೯ ತಿಂಗಳುಗಳು ಅಚಿvಚಿ ಒಂದು ವರ್ಷದಿಂದ ೫ ವರ್ಷಗಳ ವರೆಗೆ ಸಹ ದತ್ತು ಪಡೆಯಬಹುದಾಗಿರುತ್ತದೆ. ಪ್ರತಿ ದಿನಕ್ಕೆ ಪ್ರತಿ ಹಸುವಿಗೆ ರೂ. ೭೦ ರಂತೆ ಮೇವು ಖರೀದಿಸಲು ದೇಣಿಗೆ £Ãಡಬಹುದಾಗಿರುತ್ತದೆ. ಜಾನುವಾರುಗಳ £ರ್ವಹಣೆ, ಜಾನುವಾರುಗಳ ಸ್ವಚ್ಛಗೊಳಿಸುವುದು, ಆವರಣವನ್ನು ಸೋಂಕು ಮುಕ್ತಗೊಳಿಸುವುದು. ಗೋಶಾಲೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ದೇಣಿಗೆ £Ãಡಬಹುದಾಗಿರುತ್ತದೆ ಎಂದು ಪಶುಪಾಲನಾ ಇಲಾಖೆ ಉಪ £ರ್ದೇಶಕರಾದ ಡಾ. ನಾಗರಾಜ, ಹೆಚ್ ಅವರು ತಿಳಿಸಿದ್ದಾರೆ.
ಜಾನುವಾರುಗಳ ದತ್ತು ಪಡೆಯಲು ಆಸಕ್ತಿ ಹೊಂದಿದ ಸಾರ್ವಜ£ಕರು ಹಾಗೂ ಸಂಘ-ಸಂಸ್ಥೆಗಳು ಪುಣ್ಯಕೋಟಿ ದತ್ತು ಯೋಜನೆಯ ವೆಬ್‌ಸೈಟ್ hಣಣಠಿs://ಠಿuಟಿಥಿಚಿಞoಣi.ಞಚಿಡಿಚಿhvs.iಟಿ
ಮೂಲಕ ಜಾನುವಾರುಗಳನ್ನು ದತ್ತು ಪಡೆಯಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.


Gadi Kannadiga

Leave a Reply