ಹೊಸಪೇಟೆ:
ವಿಜಯನಗರ ಕ್ಷೇತ್ರದ ಶಾಸಕರಾದ ಹೆಚ ಆರ್ ಗವಿಯಪ್ಪನವರು ಅಂಗನವಾಡಿಗಳಿಗೆ ಶುದ್ಧ ಕುಡಿಯುವ ನೀರಿನ ಪೂರೈಕೆಗೆ ಶುದ್ಧ ನೀರಿನ ಘಟಕಗಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಿದರು.
ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಸುಮಾರು ೨೫೦ಕ್ಕೂ ಹೆಚ್ಚು ಅಂಗನವಾಡಿ ಕೇಂದ್ರಗಳಿಗೆ ಮಕ್ಕಳಿಗೆ ಶುದ್ಧ ಕುಡಿವ ನೀರು ಪೂರೈಸುವ ಸಲುವಾಗಿ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಚ್.ಆರ್. ಗವಿಯಪ್ಪ ಶುದ್ಧ ಕುಡಿವ ನೀರಿನ ಘಟಕಗಳನ್ನು ಸುಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು. ಕಾಲ ಕಾಲಕ್ಕೆ ನಿರ್ವಹಿಸಿಕೊಳ್ಳಬೇಕು. ಎಪೇರಿ ಬಂದಲ್ಲಿ ಅದನ್ನು ಗಮನಕ್ಕೆ ತಂದಲ್ಲಿ ಪುನಾ ಸರಿಪಡಿಸಿ ಒದಗಿಸಲಾಗುವುದು ಎಂದರು.
ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ವೈ. ಯಮುನೇಶ್ ಮಾತನಾಡಿ, ಶಾಸಕ ಗವಿಯಪ್ಪ ಅವರು ಶಾಂತವಾಗಿ ಹರಿಯುವ ನೀರಿನಂತೆ, ತಂಪಾದ ಗಾಳಿಯಂತೆ. ಶಾಂತವಾಗಿ ಹರಿಯುವ ನೀರಿನಿಂದ ಸಮೃದ್ಧಿ ಹೆಚ್ಚು. ಗವಿಯಪ್ಪ ಅವರು ಜನಮಾನಸದೊಂದಿಗೆ ಜನರೊಂದಿಗೆ ಒಡನಾಟದಲ್ಲಿದ್ದಾರೆ. ಎಲ್ಲವನ್ನು ಅರಿತು ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸಲು ಪ್ರಮಾಣಿಕ ಪ್ರಯತ್ನಿಸುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ವೀರೇಶ್ ಮಾನಳ್ಳಿ, ಗುಜ್ಜಲ್ ನಾಗರಾಜ್, ರಾಮಣ ಗೌಡ, ಜಕಾತಿ ಲಿಂಗಪ್ಪ, ಅನಿಲ್ ಜೋಶಿ, ಜಲಿಲ್, ಎಚ್.ಪಿ.ಸಿ. ಬಾಬು. ಗಿಂಜಿ ಮಂಜುನಾಥ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಎಸಿಡಿಪಿಒ ಅಂಬುಜಮ್ಮ, ಇಲಾಖೆ ಅಧಿಕಾರಿಗಳು, ಅಂಗನವಾಡಿ ಶಿಕ್ಷಕಿಯರು ಇತರರಿದ್ದರು.