This is the title of the web page
This is the title of the web page

Please assign a menu to the primary menu location under menu

State

ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ವಿತರಣೆ


ಗದಗ ಸೆಪ್ಟೆಂಬರ್ ೨೬: ರಾಜ್ಯಾದ್ಯಂತ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ತಮ್ಮ ವಾಸಸ್ಥಳದಿಂದ ಗರಿಷ್ಟ ೪೫ ಕಿ.ಮೀ ವರೆಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಬಸ್‌ಪಾಸ್ ವಿತರಣೆಯ ಪ್ರಕ್ರಿಯೆಗೆ ಮುಖ್ಯಮಂತ್ರಿಗಳು ಸೆಪ್ಟೆಂಬರ್ ೨೦ ರಂದು ಚಾಲನೆ ನೀಡಿದ್ದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯಲ್ಲಿ ಈ ಸೌಲಭ್ಯ ಪಡೆಯಲು ನೋಂದಾಯಿತ ಕಟ್ಟಡ ಕಾರ್ಮಿಕರು ಕಾರ್ಮಿಕ ಇಲಾಖೆಯ ನೋಂದಾಯಿತ ಗುರುತಿನ ಚೀಟಿ/ಮಾಹಿತಿಯೊಂದಿಗೆ ಸ್ಥಳಿಯ ಗ್ರಾಮ-೧ ಅಥವಾ ಕರ್ನಾಟಕ-೧ ಕೇಂದ್ರವನ್ನು ಸಂಪರ್ಕಿಸಿ ಸೌಲಭ್ಯವನ್ನು ಪಡೆಯಬಹುದಾಗಿದೆ. ಕಾರ್ಮಿಕರು ಸದರಿ ಸೌಲಭ್ಯದ ಸದುಪಯೋಗ ಪಡೆದುಕೊಳ್ಳುವಂತೆ ವಾ.ಕ.ರ.ಸಾ.ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


Gadi Kannadiga

Leave a Reply