This is the title of the web page
This is the title of the web page

Please assign a menu to the primary menu location under menu

Local News

ಬೆಳಗಾವಿ ಗ್ರಾಮೀಣ ಕ್ಷೇತ್ರದ ಹೊನ್ನಿಹಾಳ ಕನ್ನಡ ಮತ್ತು ಮರಾಠಿ ಶಾಲೆಗಳಿಗೆ ಗ್ರೀನ ಬೋರ್ಡ ವಿತರಣೆ


ಬೆಳಗಾವಿ : ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಳ ವತಿಯಿಂದ ವಿಧಾನಪರಿಷತ ಸದಸ್ಯರಾದ ಶ್ರೀ. ಸಾಬನ್ನಾ ತಳವಾರ ಇವರ ಅನುದಾನದಲ್ಲಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಬರುವ ಪ್ರಾಥಮಿಕ ಶಾಲೆಗಳಿಗೆ ಉತ್ಕ್ರುಷ್ಠ ದರ್ಜೆಯ ಗ್ರೀನ ಬೋರ್ಡ ಗಳನ್ನು ಕೊಡುವ ಕಾರ್ಯಕ್ರಮವು ಅನೇಕ ದಿನಗಳಿಂದ ಹಮ್ಮಿಕೊಂಡಿದ್ದೆವೆ. ಇಂದು ದಿನಾಂಕ 06 ಜನೆವರಿ 2022 ರಂದು ಹೊನ್ನಿಹಾಳನ ಗ್ರಾಮದಲ್ಲಿರುವ ಕನ್ನಡ ಹಾಗು ಮರಾಠಿ ಪ್ರಾಥಮಿಕ ಶಾಲೆಗಳಿಗೆ 4 × 10 ಅಳತೆಯ 08 ಗ್ರೀನ ಬೋರ್ಡಗಳನ್ನು ಕೊಡುವ ಕಾರ್ಯಕ್ರಮ ಮುಕ್ತಾಯಗೊಂಡಿತ್ತು.

ಕಾರ್ಯಕ್ರಮದ ಉದ್ಘಾಟನೆಯನ್ನು ಬಿಜೆಪಿ ಗ್ರಾಮೀಣ ಮಂಡಳದ ಅಧ್ಯಕ್ಷರರಾದ ಶ್ರೀ ಧನಂಜಯ ಜಾಧವ ಅವರು ದೀಪ ಪ್ರಜ್ವಲನೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇದೆ ಸಂದರ್ಭದಲ್ಲಿ ಧನಂಜಯ ಜಾಧವ ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಳ ವತಿಯಿಂದ ಇಂತಹ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತಿದ್ದೆವೆ ಸ್ವಚ್ಛತಾ ಕಾರ್ಯಕ್ರಮ, ಕೋವಿಡ ಕಾಲದಲ್ಲಿ ಅಂಬ್ಯುಲೆನ್ಸ ಸೇವೆ, ಕೋರೊನಾದಿಂದ ಮೃತರಾದವರನ್ನು ಉಚಿತ ಅಂತ್ಯವಿಧಿ ಸೇವೆ ಹಾಗು ಗ್ರಾಮೀಣ ಭಾಗದಲ್ಲಿ ಬರುವ ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ಗ್ರೀನಬೋರ್ಡ ಕೊಡುವ ಕಾರ್ಯಕ್ರಮವನ್ನು ಭಾರತೀಯ ಜನತಾ ಪಾರ್ಟಿಯ ವರಿಷ್ಠರ ಮಾರ್ಗದರ್ಶನದ ಮೇರೆಗೆ ಈ ಎಲ್ಲ ಕಾರ್ಯಗಳನ್ನು ಮಾಡಿದ್ದೆವೆಂದು ಬಿಜೆಪಿ ಗ್ರಾಮೀಣ ಮಂಡಳ ಅಧ್ಯಕ್ಷರು ಧನಂಜಯ್ ಜಾಧವ ಇವರು ಹೇಳಿದರು ಹಾಗು ಇತರ ಸದುಉಪಯೊಗವನ್ನು ಶಿಕ್ಷಕರು ಮತ್ತು ಎಲ್ಲ ವಿಧ್ಯಾರ್ಥಿಗಳು ಪಡೆದ ಕೊಳ್ಳಬೇಕೆಂದು ಹೇಳಿದರು.


Gadi Kannadiga

Leave a Reply