This is the title of the web page
This is the title of the web page

Please assign a menu to the primary menu location under menu

State

ವಿಕಲಚೇತನರ ಯಂತ್ರಚಾಲಿತ ತ್ರಿಚಕ್ರ ವಾಹನ ವಿತರಣೆ


ಗದಗಮಾ ೨೮ : ನಗರದ ಜಿಲ್ಲಾಡಳಿತ ಭವನದ ಅವರಣದಲ್ಲಿ ಶನಿವಾರದಂದು ವಿಧಾನ ಪರಿಷತ್ ಸದಸ್ಯರಾದ ಎಸ್.ವಿ. ಸಂಕನೂರ ಅವರು ವಿಕಲಚೇತನರ ಯಂತ್ರಚಾಲಿತ ತ್ರಿಚಕ್ರ ವಾಹನವನ್ನು ವಿತರಿಸಿದರು. ನಂತರ ಅವರು ಮಾತನಾಡಿ ವಿಕಲಚೇತನರ ಯಂತ್ರಚಾಲಿತ ತ್ರಿಚಕ್ರವಾಹನವನ್ನು ವಿಕಲಚೇತನರು ಸ್ವಾವಲಂಬಿ ಜೀವನ ನಡೆಸಲು ಉದ್ಯೋಗಕ್ಕಾಗಿ ಹಾಗೂ ಉನ್ನತ ಶಿಕ್ಷಣಕ್ಕಾಗಿ ಸದುಪಯೋಗ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.
ಕರ್ನಾಟಕ ಶಾಸಕರ ಸ್ಥಳಿಯ ಪ್ರದೇಶಾಭಿವೃದ್ಧಿ ಯೋಜನೆಯ ಅನುದಾನದಡಿ ಗದಗ ಜಿಲ್ಲೆಯ ಇಬ್ಬರು ವಿಕಲಚೇತನ ಫಲಾನುಭವಿಗಳಾದ ಕು.ರಾಜೇಶ್ವರಿ ವಿ ಜ್ಞಾನೋಪಂತರ ಸಾ. ಲಿಂಗದಾಳ ಹಾಗೂ ಶಿವರಡ್ಡಿ ಜಗನ್ನಾಥ ಮೂಲಿಮನಿ ಸಾ. ಬಿಂಕದಕಟ್ಟಿ ಇವರಿಗೆ ವಿಕಲಚೇತನರ ಯಂತ್ರಚಾಲಿತ ತ್ರಿಚಕ್ರವಾಹನಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಕೆ. ಮಹಾಂತೇಶ, ಮುತ್ತಣ್ಣ ಲಿಂಗನಗೌಡ್ರ, ವಸಂತ ಮೇಟಿ, ಗದಗ ತಾಲೂಕಾ ಎಂ.ಆರ್. ಡಬ್ಲುö್ಯ, ಇಲಾಖೆಯ ಸಿಬ್ಬಂದಿ ಸೇರಿದಂತೆ ಮತ್ತಿತರರು ಹಾಜರಿದ್ದರು.


Leave a Reply