This is the title of the web page
This is the title of the web page

Please assign a menu to the primary menu location under menu

Local News

ಪ್ರತಿಭಾ ಪೋಷಕ ಯೋಜನೆಯಡಿ ಮಕ್ಕಳಿಗೆ ಫೌಂಡೇಶನ್ ವತಿಯಿಂದ ಟ್ಯಾಬ್ ವಿತರಣೆ


ಬೆಳಗಾವಿ:ನಗರದ ಶೈಕ್ಷಣಿಕ ಜಿಲ್ಲೆಯ ಏಳು ತಾಲೂಕುಗಳ 90 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್, ನೆಟ್ ಪ್ಯಾಕ್ ಮತ್ತು ಉಚಿತ ಆನ್‌ಲೈನ್ ತರಬೇತಿ ನೀಡಿ ಅವರನ್ನು ಶೈಕ್ಷಣಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಲು ರಾಜಲಕ್ಷ್ಮಿ ಚಿಲ್ಡ್ರನ್ ಫೌಂಡೇಶನ್ ಪಣತೊಟ್ಟು ಅಂತಹ ಮಹಾ ಕಾರ್ಯವನ್ನು ಮಂಗಳವಾರ ಆಗಸ್ಟ್ 9 ರಂದು ಶ್ರೀಮತಿ ಉಷಾತಾಯಿ ಗೋಗಟೆ ಕನ್ಯಾ ವಿದ್ಯಾಲಯದಲ್ಲಿ ಇಂದು ನೆರವೇರಿಸಿಕೊಟ್ಟಿದೆ.

ಪ್ರತಿಭಾ ಪೋಷಕ ಯೋಜನೆಯ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಬೆಳಗಾವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅವಿನಾಶ ಪೋತದಾರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಗೌರವ ಅತಿಥಿಗಳಾಗಿ ಬೆಳಗಾವಿ ನಗರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಜೆ.ಬಜಂತ್ರಿ ಉಪಸ್ಥಿತರಿದ್ದರು. ಡಾ.ಶಶಿಕಾಂತ ಕುಲಗೋಡ , ಡಾ.ವಿಜಯಲಕ್ಷ್ಮಿ ಕುಲಗೋಡ , ಡಾ.ರವೀಂದ್ರ ಗುರವನ್ನವರ್ ಉಪಸ್ಥಿತರಿದ್ದರು. ರಾಜಲಕ್ಷ್ಮಿ ಚಿಲ್ಡ್ರನ್ ಫೌಂಡೇಶನ್ ಈ ಸಂಸ್ಥೆ , ಡಾ.ವಿಜಯಲಕ್ಷ್ಮಿ ಕುಲಗೋಡ ಅವರ ಮಾತೋಶ್ರೀ ರಾಜಲಕ್ಷ್ಮಿ ಅವರ ಹೆಸರಿನಲ್ಲಿರುವ ಈ ಸಂಸ್ಥೆಯ ಮುಖ್ಯ ಉದ್ದೇಶ ಸಮಾಜದ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವಂತೆ ತರಬೇತಿ ನೀಡಿ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದೇ ಅವರ ಮುಖ್ಯ ಗುರಿಯಾಗಿದೆ.

ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು. ಡಾ.ಕೀರ್ತಿ ಶಿವಕುಮಾರ್ ನಿರೂಪಣೆ ಮಾಡಿದರು, ಎಂ.ಎಸ್.ದೇಶನೂರ ಇವರು ಎಲ್ಲರಿಗೂ ಧನ್ಯವಾದ ಅರ್ಪಿಸಿದರು. ಈ ಕಾರ್ಯಕ್ರಮದಲ್ಲಿ ಒಂಬತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಬೆಳಗಾವಿ ಶೈಕ್ಷಣಿಕ ಜಿಲ್ಲೆಯ 90 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ಮತ್ತು ನೆಟ್ ಪ್ಯಾಕ್ ನೀಡಿ ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗೆ ಬಳಸುವ ಬಗ್ಗೆ ತರಬೇತಿ ನೀಡಲಾಯಿತು.


Gadi Kannadiga

Leave a Reply