ಬೆಳಗಾವಿ-೨೨ (ಎ.ಪಿ.ಡಿ.) ದಿ. ಅಸೋಸಿಯೇಷನ್ ಆಫ್ ಪೀಪಲ್ ವುತ್ ಡಿಸೇಬಲಿಟಿ ಸಂಸ್ಥೆ ಹಾಗೂ (ಎ. ಎನ್. ಝಡ್.)ಆಸ್ಟ್ರೇಲಿಯಾ ನ್ಯೂಜಿಲೆಂಡ್ ಬ್ಯಾಂಕ್ ಸಹಯೋಗದೊಂದಿಗೆ ಬೆಳಗಾವಿ ಹಾಗೂ ಧಾರವಾಡ ಜಿಲ್ಲೆಯ ೧೦ ಜನ ಬೆನ್ನುಹುರಿ ಅಪಘಾತಕ್ಕೊಳಗಾದ ಫಲಾನುಭವಿಗಳಿಗೆ ವೀಲ್ ಚೇರ್ ಹಾಗೂ ಔಷಧಿ ಕಿಟ್ ವಿತರಿಸಲಾಯಿತು. ಸದರಿ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ, ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆ, ವಿಶ್ರಾಂತ ಉಪ ನಿರ್ದೇಶಕರಾದ ಆರ್. ಬಿ. ಬನಶಂಕರಿಯವರು ಫಲಾನುಭವಿಗಳಿಗೆ ವೀಲ್ ಚೇರ್ ಹಾಗೂ ಔಷಧಿ ಕಿಟ್ ವಿತರಿಸಿ, ಸದರಿ ಸಂಸ್ಥೆಗಳು ನೀಡುತ್ತಿರುವ ಬೆಲೆಯುಳ್ಳ ವೀಲ್ ಚೇರಗಳನ್ನು ಸರಿಯಾಗಿ ಉಪಯೋಗಿಸಿಕೊಂಡು ಸದುಪಯೋಗ ಪಡೆದುಕೊಳ್ಳಲು ಸೂಚಿಸಿ, ವಿಕಲಚೇತನರಿಗಿರುವ ಸರಕಾರದ ಸೌಲಭ್ಯಗಳ ಬಗ್ಗೆ ವಿವರವಾಗಿ ತಿಳಿಸಿದರು. ಅಧ್ಯಕ್ಷೀಯ ಸ್ಥಾನ ವಹಿಸಿದ್ದ, ಎ. ಪಿ. ಡಿ. ಸಂಸ್ಥೆಯ ವಿಭಾಗೀಯ ನಿರ್ದೇಶಕರಾದ ರಮೇಶ ಗೊಂಗಡಿಯವರು ಸಂಸ್ಥೆಯು ಫಲಾನುಭವಿಗಳನ್ನು ಗುರುತಿಸುವಿಕೆ ಮತ್ತು ಅವರಿಗೆ ಎ. ಪಿ. ಡಿ. ಸಂಸ್ಥೆಯ ಸಹಾಯ ಸಹಕಾರ ನೀಡುವ ಕುರಿತು. ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲು ನೆರವು ನೀಡುವ ಕುರಿತು ತಿಳಿಸಿದರು. ಎ.ಪಿ.ಡಿ.ಸಂಸ್ಥೆ ಬೆನ್ನುಹುರಿ ಅಪಘಾತಕ್ಕೊಳಗಾದವರ ವಿಭಾಗ ಮುಖ್ಯಸ್ಥರಾದ, ನಾಯ್ಕರ ಪಾಲಸ್ವಾಮಿಯವರು ಪ್ರಾಸ್ತಾವಿಕವಾಗಿ ಮಾತನಾಡುತ್ತ ಕಾಯಿಲೆ ಸ್ವರೂಪ, ಅದರ ಚಿಕಿತ್ಸಾ ವಿಧಾನಗಳ ಬಗ್ಗೆ ವಿವರವಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಎ.ಪಿ.ಡಿ. ಸಂಸ್ಥೆ ಸಿಬ್ಬಂದಿಯವರಾದ ಅಂಜೀತಾ ಚಿನ್ನು, ದಾಸನಟ್ಟಿ ಸತ್ಯಪ್ಪ, ಸಮಾಜ ಕಾರ್ಯ ವಿಭಾಗದ ಪ್ರಶಿಕ್ಷಣಾರ್ಥಿಗಳಾದ ಮಾನಸ ಗಂಗೋತ್ರಿ ವಿ.ವಿ.ಯ ಹಾಸನ್ ಸಮಾಜ ಕಾರ್ಯ ಮಹಾವಿದ್ಯಾಲಯದ ಚಂದ್ರಶೇಖರ ಜಿ. ಬಿ. , ಪ್ರಮೋದ ಎಮ್., ಭೂಮಿಕಾ ಬಿ. ಎಸ್., ದಿವ್ಯಾ ಎಸ್., ನಿವೇದಿತಾ ಎಸ್. ಬಿ. ಉಪಸ್ಥಿತರಿದ್ದು, ಬೆನ್ನುಹುರಿ ಅಪಘಾತಕ್ಕೊಳಗಾದವರನ್ನು ಸಂಪರ್ಕಿಸಿ, ತಮ್ಮ ಉನ್ನತ ಶಿಕ್ಷಣಕ್ಕೆ ಅನುಕೂಲವಾಗುವ ಮಾಹಿತಿಯನ್ನು ಪಡೆದುಕೊಂಡರು. ಚನ್ನಪ್ಪ ಕುಂಬಾರ ಅವರು ಕಾರ್ಯಕ್ರಮ ನಿರೂಪಣೆ ಮಾಡಿ, ಕಾರ್ಯಕ್ರಮದಲ್ಲಿ ಪಾಲ್ಗೊಂಡ ಘನ್ಯಮಾನ್ಯರಿಗೆ, ಸಭಿಕರಿಗೆ, ಹಾಗೂ ಫಲಾನುಭವಿಗಳಿಗೆ ವಂದನಾರ್ಪಣೆ ಸಲ್ಲಿಸಿದರು.
Gadi Kannadiga > Local News > ಬೆನ್ನುಹುರಿ ಅಪಘಾತಕ್ಕೊಳಗಾದ ಫಲಾನುಭವಿಗಳಿಗೆ ವೀಲ್ ಚೇರ್ ಹಾಗೂ ಔಷಧಿ ಕಿಟ್ ವಿತರಣೆ