This is the title of the web page
This is the title of the web page

Please assign a menu to the primary menu location under menu

Local News

ಜಿಲ್ಲಾಸ್ಪತ್ರೆ ಮುಂದಿನ ದಿನಗಳಲ್ಲಿ ಹೆಚ್ಚು ಅಭಿವೃದ್ಧಿ ಕಾಣಲಿದೆ: ಶಾಸಕ ಬೆನಕೆ


ಬೆಳಗಾವಿ ಜಿಲ್ಲಾಸ್ಪತ್ರೆಯ ದಾಖಲಾಗಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ಇಂದಿನಿಂದ ಹೈಜೀನ್ ಕೀಟ್ ವಿತರಣೆ ಮಾಡಲಾಗುವುದು ಎಂದು ಶಾಸಕ ಅನಿಲ್ ಬೆನಕೆ ತಿಳಿಸಿದರು.ಶುಕ್ರವಾರ ಬೆಳಗಾವಿ ನಗರದಲ್ಲಿ ಇರುವ ಜಿಲ್ಲಾಸ್ಪತ್ರೆಯ ರೋಗಿಗಳ ಆರೋಗ್ಯದ ದೃಷ್ಟಿಯಿಂದ ವಿವಿಧ ವಾರ್ಡ್ ಗಳಿಗೆ ತೆರಳಿ ಹೈಜೀನ್ ಕೀಟ್ ವಿತರಣೆ ಮಾಡಿ ಮಾತನಾಡಿದ ಅವರು ಇಡೀ ರಾಜ್ಯದಲ್ಲಿ ಪ್ರಥಮಬಾರಿಗೆ ಎಲ್ಲ ರೋಗಿಗಳ ಆರೋಗ್ಯದ ದೃಷ್ಟಿಯಿಂದ ಸಾನಿಟೈಸರ್ ಕೀಟ್ ವಿತರಣೆ ಮಾಡಲಾಗಿದೆ.‌

ಮುಂದೆಯೂ ಕೂಡಾ ಯಾವುದೇ ರೋಗಿ ಆಸ್ಪತ್ರೆಯಲ್ಲಿ ದಾಖಲಾದರೆ ಅವರಿಗೆ ಸಾನಿಟೈಸರ್ ಕೀಟ್ ವಿತರಣೆ ಮಾಡಲಾಗುವುದು ಎಂದು ನಾನೂ ಹಾಗೂ ಭೀಮ್ಸ್ ಆಡಳಿತ ಅಧಿಕಾರಿ ಹಾಗೂ ಪ್ರಾದೇಶಿಕ ಆಯುಕ್ತ ಆದಿತ್ಯ ಆಮ್ಲಾನ ಬಿಸ್ವಾಸ ಘೋಷಿಸಿದ್ದೇವೆ ಎಂದರು.

ಬರುವ ದಿನಗಳಲ್ಲಿ ರೋಗಿಗಳಿಗೆ ಮತ್ತು ಆಸ್ಪತ್ರೆಯ ಅಭಿವೃದ್ಧಿಗೆ ಏನು ಸೌಲಭ್ಯ ಒದಗಿಸಬೇಕು ಎಂಬುದನ್ನು ಚರ್ಚೆ ಮಾಡುತ್ತೇವೆ. ಈಗಾಗಲೇ ಬೆಳಗಾವಿ ಜಿಲ್ಲಾಸ್ಪತ್ರೆ ಸಾಕಷ್ಟು ಅಭಿವೃದ್ಧಿ ಕಂಡಿದೆ. ಎಕ್ಸರೆ, ಸಿಟಿ ಸ್ಕ್ಯಾನ್ ಹಾಗೂ ಅಲ್ಟ್ರಾಸೌಂಡ್ ಸೇವೆಗಳು ದಿನದ 24 ಗಂಟೆಯು ಕಾರ್ಯನಿರ್ವಹಿಸುತ್ತಿದೆ.

ಅನಾವಶ್ಯಕವಾಗಿ ರೋಗಿಗಳು ಬೇರೆ ಕಡೆ ಚಿಕಿತ್ಸೆ ಪಡೆದು ಹಣ ವ್ಯಯ ಮಾಡದೇ ಬೆಳಗಾವಿ ಜಿಲ್ಲಾಸ್ಪತ್ರೆಯ ಉಪಯೋಗ ಪಡೆಯಬೇಕು ಎಂದರು.ಜಿಲ್ಲಾಸ್ಪತ್ರೆಯ ಅಧಿಕಾರಿಗಳಾದ ಡಾ. ಆರ್.ಜಿ ವಿವೇಕಿ, ಎ.ಬಿ ಪಾಟಿಲ್, ಎ.ಎಸ್ ಬಳ್ಳಾರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.


Leave a Reply