This is the title of the web page
This is the title of the web page

Please assign a menu to the primary menu location under menu

Local News

ಜಿಲ್ಲಾ ಬಿಜೆಪಿ ಓಬಿಸಿ ಮೋರ್ಚಾ ಸಮಾವೇಶದ ಪೂರ್ವಬಾವಿ ಸಭೆ


ಬೆಳಗಾವಿ ೨೫ : ರವಿವಾರದಂದು ಬೆಳಗಾವಿ ಜನತಾ ಪಾರ್ಟಿ ಬೆಳಗಾವಿ ಮಹಾನಗರ ಜಿಲ್ಲಾ ಒಬಿಸಿ ಮೋರ್ಚಾದ ಪೂರ್ವಬಾವಿ ಸಭೆಯು ಬೆಳಗಾವಿಯ ಸದಾಶಿವನರದ ರೆಡ್ಡಿ ಭವನದಲ್ಲಿ ಜರುಗಿತು. ಒಬಿಸಿ ಸಮುದಾಯದ ಪ್ರಮುಖರು, ಪಂಚರು, ಮುಖಂಡರುಗಳು ಮತ್ತು ಕಾರ್ಯಕರ್ತರ ನೇತೃತ್ವದಲ್ಲಿ ಜರುಗಿದ ಸಭೆ.
ಸಮಾಜದಲ್ಲಿ ಒಬಿಸಿ ವರ್ಗಕ್ಕೆ ರಾಜ್ಯ ಮತ್ತು ಕೆಂದ್ರ ಸರ್ಕಾರದ ಯೋಜನೆಗಳ ಅರಿವು ಮತ್ತು ಅನುಚ್ಠನಕ್ಕಾಗಿ ಮತ್ತು ಸಮಾಜದ ದುರ್ಬಲ ಕುಟುಂಬಗಳ ಉನ್ನತಿಗಾಗಿ ಒಬಿಸಿಯ ಎಲ್ಲ ಸಮಾಜದ ಪ್ರಮುಖರೊಂದಿಎ ಪೂರ್ವ ಸಮಾವೇಶ ಸಭೆಯನ್ನು ಆಯೋಜಿಸಲಾಗಿದೆ. ಭವಿಷ್ಯದ ಯೋಜನೆಗಳುಮ ವಿನಂತಿಗಳು, ಮೀಸಲಾತಿ ಅನುಷ್ಠಾನದ ಕುರಿತು ಮತ್ತು ಸಮಾಜದ ಸರ್ವಾಂಗೀಣ ಅಭಿವೃದ್ದಿಗಾಗಿ ಪ್ರಯೋಜನೆಗಳನ್ನು ಬಳಸಿಕೊಳ್ಳುವುದರ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಮಾನತಾಡಿದ ಶಾಸಕರು ಬಿಜೆಪಿ ಸರ್ಕಾರವು ಸಮಾಜದ ಒಬಿಸಿ ವರ್ಗಗಳಿಗೆ ವಿವಿಧ ಯೋಜನೆಗಳ ಲಾಭವನ್ನು ಖಾತ್ರಿಪಡಿಸುವ ಮೂಲಕ ಅವರ ಸಬಲೀಕರಣ ಮತ್ತು ಉನ್ನತಿಗಾಗಿ ಅವಿರತವಾಗಿ ಶ್ರಮಿಸುತ್ತಿದೆ ಮತ್ತು ಅವರ ಸುಧಾರಣೆಗೆ ನಾವು ನಿರ್ಣಾಯಕ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮಹಾನಗರ ಜಿಲ್ಲಾ ಒಬಿಸಿ ಮೋರ್ಚಾ ಅಧ್ಯಕ್ಷರಾದ ವಿಜಯ ಕದಂ, ಪ್ರಧಾನ ಕಾರ್ಯದರ್ಶಿ ನಿತಿನ ಸುಳಗಾರ, ಶೇಷಕುಮಾರ ಜಾವಲ್ಕರ, ಉತ್ತರ ಮಂಡಲ ಒಬಿಸಿ ಮೋರ್ಚಾ ಅಧ್ಯಕ್ಷರಾದ ವಿಕ್ರಂ ಬಾಳೆಕುಂದ್ರಿ, ದಕ್ಷಿಣ ಮಂಡಲ ಒಬಿಸಿ ಮೋರ್ಚಾ ಅಧ್ಯಕ್ಷರಾದ ವಿನಾಯಕ ಸೂರೇಪಾನ, ವಿಶ್ವಕರ್ಮ ಪಾಂಚಾಲ ಸಮಾಜ ಪ್ರಮುಖರಾದ ಭರತ ಶೀರೋಳ್ಕರ, ಹಿಂದೂ ಖಾಟಿಕ ಸಮಾಜದ ಪ್ರಮುಖರಾದ ಉದಯ ಘೋಡಖೆ, ಸಾವಜಿ ಕ್ಷತ್ರಿಯ ಸಮಾಜ ಪ್ರಮುಖರಾದ ಅನಿಲ ಚೌದರಿ, ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷರಾದ ಮದನ್ ಗೋಜೆ, ನಾಮದೇವ ಶಿಂಪಿ ಸಮಾಜದ ಪ್ರಮುಖರಾದ ಅಶೋಕ ರೆಡೆಕರ, ಕುಂಬಾರ ಸಮಾಜದ ಪ್ರಮುಖರಾದ ದಿಗಂಬರ ಗುಂಜಿಕರ, ತೇಲಿ ಸಮಾಜ ಪ್ರಮುಖರಾದ ಪ್ರಕಾಶ ಬಾಳೆಕುಂದ್ರಿ, ಗವಳಿ ಸಮಾಜದ ಪ್ರಮುಖರು, ದೈವದನ್ಯ ಸೋನಾರ್ ಸಮಾಜದ ಪ್ರಮುಖರು, ಗೌಡ್ ಸಾರಸ್ವತ ಬ್ರಾಹ್ಮಣ ಸಮಾಜದ ಪ್ರಮುಖರು, ಹಡಪದ ಸಮಾಜದ ಪ್ರಮುಖರು, ನಾವಿಕ ಸಮಾಜದ ಪ್ರಮುಖರಾದ ಪಿಂಟು ಕಾಳೆ, ಸವಿತಾ ಸಮಾಜದ ಪ್ರಮುಖ ಶೇಖರರೆಡ್ಡಿ, ಪರಿತ ಸಮಾಜದ ವಿಟ್ಟಲ ಪಾಳೇಕರ, ಕಾಳಿಕಾ ದೈವಜ್ಞ ಸಮಾಜ ಪ್ರಮುಖ ನಿತಿನ ಕಳಗಟಕರ, ನೇಕಾರ ಸಮಾಜದ ಪ್ರಮುಖರು, ಕುಣಬಿ ಸಮಾಜದ ಪ್ರಮುಖರು, ವಿಶ್ವಕರ್ಮ ಸಮಾಜದ ಪ್ರಮುಖರು, ಹಣಬರ ಸಮಾಜದ ಪ್ರಮುಖರಾದ ಪ್ರವಿಣ ಪಾಟೀಲ ಹಾಗೂ ಎಲ್ಲ ಕಾರ್ಯಕರ್ತರು ಉಪಸ್ಥಿತರಿದ್ದರು.


Gadi Kannadiga

Leave a Reply