This is the title of the web page
This is the title of the web page

Please assign a menu to the primary menu location under menu

State

ಬಳ್ಳಾರಿ ಉತ್ಸವ-ವಿವಿಧ ಕಾರ್ಯಕ್ರಮಗಳ ಆಯೋಜನೆ, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಜಿಲ್ಲಾಧಿಕಾರಿ ಮಲಪಾಟಿ ಕರೆ


ಬಳ್ಳಾರಿ,ಜ.೧೨: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಜ.೨೧ ಮತ್ತು ೨೨ರಂದು ನಡೆಸಲಾಗುತ್ತಿರುವ ಬಳ್ಳಾರಿ ಉತ್ಸವದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಜ.೧೮ ರಂದು ಬೆಳಗ್ಗೆ ೭ಕ್ಕೆ ಸಂಗನಕಲ್ಲು ಗ್ರಾಮದಿಂದ ಮೋಕಾ ಗ್ರಾಮದವರೆಗೆ ಮ್ಯಾರಾಥನ್ ಓಟ ನಡೆಯಲಿದೆ. ಬೆಳಗ್ಗೆ ೧೧ಕ್ಕೆ ಕೊಳಗಲ್ ವಿಮಾನ ನಿಲ್ದಾಣದಲ್ಲಿ ಗಾಳಿಪಟ ಸ್ಪರ್ಧೆ ಆಯೋಜಿಸಲಾಗಿದೆ. ಜ.೧೯ ರಂದು ಮಧ್ಯಾಹ್ನ ೩ಕ್ಕೆ ಕೃಷಿ ಮಾರುಕಟ್ಟೆ (ಎಪಿಎಂಸಿ)ಯಿಂದ ಮುನಿಸಿಪಲ್ ಮೈದಾನದವರೆಗೆ ಎತ್ತಿನಗಾಡಿ ಉತ್ಸವವದೊಂದಿಗೆ ರೈತ ಹಬ್ಬ ಮೆರವಣಿಗೆ ಕಾರ್ಯಕ್ರಮ ನಡೆಯಲಿದೆ. ಸಂಜೆ ೫ಕ್ಕೆ ಹೆಚ್.ಆರ್.ಗವಿಯಪ್ಪ ವೃತ್ತದಲ್ಲಿ (ಮೋತಿ ಸರ್ಕಲ್) ದೀಪಾಲಂಕಾರ ಉದ್ಘಾಟನೆ ಕಾರ್ಯಕ್ರಮವಿದೆ. ಹಾಗೂ ಜ.೧೯ರಿಂದ ೨೩ ರವರೆಗೆ ಬೆಳಗ್ಗೆ ೧೦ ರಿಂದ ಕೊಳಗಲ್ ವಿಮಾನ ನಿಲ್ದಾಣದಲ್ಲಿ ಬಳ್ಳಾರಿ ಬೈಸ್ಕೆöÊ ಇರಲಿದೆ.
ಜ.೨೦ ರಂದು ಬೆಳಗ್ಗೆ ೧೧ ಕ್ಕೆ ದುರ್ಗಮ್ಮ ದೇವಸ್ಥಾನದ ಆವರಣದಲ್ಲಿ ಮೆಹಂದಿ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಅಡುಗೆ ಸ್ಪರ್ಧೆ ನಡೆಯಲಿದ್ದು, ಸಂಜೆ ೪ಕ್ಕೆ ವಿಮ್ಸ್ ಮೈದಾನದಿಂದ ಎಸ್‌ಪಿ ಸರ್ಕಲ್, ಮೋತಿ ಸರ್ಕಲ್, ರಾಯಲ್ ಸರ್ಕಲ್ ಮೂಲಕ ಮುನಿಸಿಪಲ್ ಮೈದಾನದವರೆಗೆ ವಸಂತ ವೈಭವ ಮೆರವಣಿಗೆ ನಡೆಯಲಿದ್ದು ಈ ವೇಳೆ ನೂರಾರು ಕಲಾತಂಡಗಳು ಭಾಗವಹಿಸಲಿವೆ. ಜ.೨೧ ರಂದು ಬೆಳಗ್ಗೆ ೮ ಕ್ಕೆ ನಗರದ ಕೋಟೆ ಆವರಣದಲ್ಲಿ ಸಾಹಸ ಕ್ರೀಡೆಗಳು, ರಾಕ್ ಕ್ಲೆöÊಂಬಿಂಗ್, ಹಾರ್ಸ್ ಜಂಪಿಂಗ್, ಬೈಕ್ ಸ್ಟಂಟ್ಸ್ ಇರಲಿವೆ. ಬೆಳಗ್ಗೆ ೯ ಕ್ಕೆ ಜಿಲ್ಲಾ ಕ್ರೀಡಾಂಗಣ, ಮುನಿಸಿಪಲ್ ಕಾಲೇಜು ಮೈದಾನ ಹಾಗೂ ನೂತನ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಮರಳು ಶಿಲ್ಪಕಲೆ ಉತ್ಸವ ಆಯೋಜಿಸಲಾಗಿದೆ. ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಗ್ಗೆ ೧೦ ಕ್ಕೆ ಗುಂಡು ಎತ್ತುವ ಸ್ಪರ್ಧೆ, ಕಬ್ಬಡ್ಡಿ, ಕುಸ್ತಿ ಕ್ರೀಡೆಗಳು ನಡೆಯಲಿವೆ. ಬೆಳಗ್ಗೆ ೧೦.೩೦ಕ್ಕೆ ನೂತನ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಆವರಣದಲ್ಲಿ ಮತ್ಸ್ಯ ಮೇಳ, ೧೧ಕ್ಕೆ ಫಲ ಪುಷ್ಪ ಪ್ರದರ್ಶನ ಹಾಗೂ ಬೆಳಗ್ಗೆ ೧೧.೩೦ಕ್ಕೆ ಆಹಾರಮೇಳ ನಡೆಯಲಿದೆ. ಜ.೨೨ ರಂದು ಬೆಳಗ್ಗೆ ೧೦ ಕ್ಕೆ ಬಿಡಿಎಎ ಫುಟ್‌ಬಾಲ್ ಮೈದಾನದಲ್ಲಿ ಶ್ವಾನ ಪ್ರದರ್ಶನ ಸೇರಿದಂತೆ ವಿವಿಧ ರಸಮಂಜರಿ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಜಿಲ್ಲಾಧಿಕಾರಿ ಹಾಗೂ ಉತ್ಸವ ಅಚರಣಾ ಕಾರ್ಯಕಾರಿ ಸಮಿತಿ ಅಧ್ಯಕ್ಷರಾದ ಪವನ್‌ಕುಮಾರ್ ಮಾಲಪಾಟಿ ತಿಳಿಸಿದ್ದಾರೆ.


Leave a Reply