ಬೆಳಗಾವಿ,ಅ.೧೯: ಜಿಲ್ಲಾಡಳಿತದಿಂದ ಕಿತ್ತೂರ ಉತ್ಸವವನ್ನು ಅತೀ ವಿಜೃಂಭಣೆಯಿಂದ ಮೂರು ದಿನಗಳ ಕಾಲ ಆಚರಿಸಲಿರುವ ಕಾರಣ, ಸಾರ್ವಜನಿಕರ ನೆಮ್ಮದಿ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳವ ಅವಶ್ಯಕತೆ ಇರವುದರಿಂದ ಅಕ್ಟೊಬರ್ ೨೩, ಬೆಳಿಗ್ಗೆ ೬ ಗಂಟೆಯಿಂದ ಅಕ್ಟೊಬರ್ ೨೫, ಮದ್ಯರಾತ್ರಿ ೧೨ ಗಂಟೆವರೆಗೆ ಕಿತ್ತೂರು ಪಟ್ಟಣದಲ್ಲಿರುವ ಎಲ್ಲ ಮದ್ಯ/ಬಾರ್ ಅಂಗಡಿಗಳನ್ನು ಬಂದ ಮಾಡಿ, ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೋರಡಿಸಿದ್ದಾರೆ.
ಅಬಕಾರಿ ಜಂಟಿ ಆಯುಕ್ತರು, ಬೆಳಗಾವಿ ಅಬಕಾರಿ ಉಪ ಆಯುಕ್ತರು, ಬೆಳಗಾವಿ ಮತ್ತು ಅಬಕಾರಿ ಉಪ ಅಧೀಕ್ಷಕರು ವರು ಉತ್ಸವದ ದಿನಗಳಂದು ಮದ್ಯ ಮಾರಾಟ ಆಗದಂತೆ ಕಟ್ಟುನಿಟ್ಟಿನ ನಿಗಾ ವಹಿಸಬೇಕು. ಕರ್ನಾಟಕ ಅಬಕಾರಿ ಕಾಯ್ದೆಯಡಿ ಇಬ್ಬ ವ್ಯಕ್ತಿ ಹೊಂದಬೇಕಾದ ಮದ್ಯ ಸಂಗ್ರಹಣೆ ಹೊರತು ಪಡಿಸಿ ಹೆಚ್ಚಿನ ಸಂಗ್ರಹಣೆ ಇರದಂತೆ ಹಾಗೂ ಲೈಸನ್ಸ್ ಇಲ್ಲದ ಆವರಣಗಳಲ್ಲಿ ಸಂಗ್ರಹಣೆ ಇಡದಂತೆ ಸೂಕ್ತ ಕ್ರಮ ಜರುಗಿರಬೇಕು.
ಆದೇಶದಲ್ಲಿಯ ಸೂಚನೆಯನ್ನು ಉಲ್ಲಂಘಿಸಿದಲ್ಲಿ ಅಂಥವರು ಕರ್ನಾಟಕ ಅಬಕಾರಿ ಕಾಯ್ದೆ ೧೯೬೫ ರ ಕಲಂ ೩೨ ರನ್ವಯ ಶಿಕ್ಷೆಗೆ ಒಳಪಡುವರು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಸೂಚನೆ ನೀಡಿದ್ದಾರೆ
Gadi Kannadiga > Local News > ಅ.೨೩ ರಿಂದ ೨೫ ರ ವರೆಗೆ ಮದ್ಯ ಮಾರಾಟ ನಿಷೇಧ : ಜಿಲ್ಲಾಧಿಕಾರಿ ಆದೇಶ
More important news
ವ್ಯಕ್ತಿ ನಾಪತ್ತೆ
30/01/2023
ನೇಕಾರರಿಗೆ ವಿಶೇಷ ಪ್ಯಾಕೇಜ್
30/01/2023
ಫ.೧ ರಂದು ಮಡಿವಾಳ ಮಾಚಿದೇವ ಜಯಂತಿ ಉತ್ಸವ
27/01/2023
ಜ.೨೮ ರಂದು ಸವಿತಾ ಮಹರ್ಷಿ ಜಯಂತಿ ಉತ್ಸವ
27/01/2023