ಕೊಪ್ಪಳ ಮೇ 09 : ಪೂರ್ವ ನಿಗದಿಯಂತೆ ಮೇ 09ರಂದು ಕೊಪ್ಪಳ ಜಿಲ್ಲೆಯ ಕುಷ್ಟಗಿ, ಕನಕಗಿರಿ, ಗಂಗಾವತಿ, ಯಲಬುರ್ಗಾ ಮತ್ತು ಕೊಪ್ಪಳ ವಿಧಾನಸಭಾ ಕ್ಷೇತ್ರಗಳ ಆಯಾ ಮಸ್ಟರಿಂಗ್ ಕೇಂದ್ರಗಳಲ್ಲಿ ಮೇ 09ರಂದು ಮಸ್ಟರಿಂಗ್ ಕಾರ್ಯ ಬೆಳಗ್ಗೆಯಿಂದಲೇ ಆರಂಭಗೊAಡು ಯಶಸ್ವಿಯಾಗಿ ನಡೆಯಿತು.
ಕೊಪ್ಪಳ ವಿಧಾನಸಭಾ ಕ್ಷೇತ್ರದ ಮಸ್ಟರಿಂಗ್ ಕಾರ್ಯವು ನಗರದ ಶ್ರೀ ಗವಿಸಿದ್ದೇಶ್ವರ ಪ್ರೌಢಶಾಲೆಯ ಆವರಣದಲ್ಲಿ ನಡೆಯಿತು. ಮತಗಟ್ಟೆಗೆ ನಿಯೋಜನೆಗೊಂಡ ಪಿಆರ್‌ಓ, ಎಪಿಆರ್‌ಓ, ಪಿಓ-1 ಮತ್ತು ಪಿಓ-2 ಅವರು ಎರಡು ದಿನಗಳಿಗೆ ಆಗುವಷ್ಟು ಬಟ್ಟೆ-ಬರೆಗಳೊಂದಿಗೆ ಮತಗಟ್ಟೆಗಳಿಗೆ ತೆರಳಲು ಬೆಳಗ್ಗೆಯಿಂದಲೇ ಶ್ರೀ ಗವಿಸಿದ್ದೇಶ್ವರ ಮಠದ ಆವರಣದತ್ತ ಆಗಮಿಸುವ ದೃಶ್ಯಗಳು ಕಂಡು ಬಂದವು.
ಮತದಾನದ ಕರ್ತವ್ಯಕ್ಕೆ ನಿಯೋಜನೆಗೊಂಡ ಅಧಿಕಾರಿ ಸಿಬ್ಬಂದಿಯ ಪ್ರಯಾಣಕ್ಕಾಗಿ ಮಾಡಲಾದ ಬಸ್‌ಗಳು, ಮಿನಿ ಬಸ್‌ಗಳು ಮತ್ತು ಕ್ರೂಷರಗಳು ಸಹ ಶ್ರೀ ಗವಿಸಿದ್ದೇಶ್ವರ ಶ್ರೀಗಳ ಮಠದ ಆವರಣಕ್ಕೆ ಆಗಮಿಸಿ ಸಾಲಾಗಿ ನಿಂತಿದ್ದವು. ಮತಗಟ್ಟೆ ಸಂಖ್ಯೆ, ಮತಗಟ್ಟೆ ಹೆಸರು, ಮತದಾನ ಕೇಂದ್ರ ಕಟ್ಟಡದ ವಿಳಾಸ, ವಾಹನ ತಂಗುವ ಸ್ಥಳ ರೂಟ್ ತೋರಿಸುವ ಅಧಿಕಾರಿಯ ಸ್ಟೀಕರಗಳನ್ನು ಪಡೆದು ತಮ್ಮ ತಮ್ಮ ವಾಹನಗಳಿಗೆ ಅಂಟಿಸಿ ವಾಹನ ಚಾಲಕರು ಮತ್ತು ಮಾಲೀಕರು ವಾಹನಗಳನ್ನು ಸಿದ್ಧತೆ ಮಾಡಿಕೊಂಡು ತಮ್ಮ ತಮ್ಮ ಮತಗಟ್ಟೆಗಳಿಗೆ ತೆರಳಿದರು.
ಪೋಲಿಂಗ್ ಪಾರ್ಟಿ ನಂಬರ್, ಪೋಲಿಂಗ್ ಸ್ಟೇಷನ್ ಅಲಾಟೆಡ್ ನಂಬರ್ ಮತ್ತು ಪೋಲಿಂಗ್ ಸ್ಟೇಷನ್ ವಿಳಾಸವನ್ನು ಹುಡುಕಿಕೊಂಡು ತಮ್ಮ ತಮ್ಮ ಮತಗಟ್ಟೆಗೆ ತೆರಳಲು ಅಧಿಕಾರಿಗಳು ಮತ್ತು ಸಿಬ್ಬಂದಿ ಸಿದ್ಧತೆ ಮಾಡಿಕೊಳ್ಳುವ ದೃಶ್ಯಗಳು ಮಸ್ಟರಿಂಗ್ ಕೇಂದ್ರದಲ್ಲಿ ಸಾಮಾನ್ಯವಾಗಿತ್ತು.
ಉಪಹಾರದ ವ್ಯವಸ್ಥೆ: ಜಿಲ್ಲಾ ಚುನಾವಣಾಧಿಕಾರಿಗಳ ನಿರ್ದೇಶನದಂತೆ, ಮತಗಟ್ಟೆಗೆ ನಿಯೋಜನೆಗೊಂಡ ಅಧಿಕಾರಿ- ಸಿಬ್ಬಂದಿಗೆ ಕೊಪ್ಪಳ ವಿಧಾನಸಭಾ ಕ್ಷೇತ್ರ ಚುನಾವಣಾಧಿಕಾರಿಗಳಾದ ಮಲ್ಲಿಕಾರ್ಜುನ, ತಹಸೀಲ್ದಾರರಾದ ಅಮರೇಶ ಬಿರಾದರ ಅವರು ಶ್ರೀಗವಿಸಿದ್ದೇಶ್ವರ ಪ್ರೌಢಶಾಲಾ ಆವರಣದಲ್ಲಿ ಕೂಡಲು ಅಚ್ಚುಕಟ್ಟಾದ ಶ್ಯಾಮಿಯಾನ್ ವ್ಯವಸ್ಥೆ, ಉಪಹಾರ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರು.
ಪೊಲೀಸ್ ದಂಡು: ಚುನಾವಣೆಯು ಶಾಂತರೀತಿಯಿAದ ನಡೆಯುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಅಗತ್ಯ ಸಂಖ್ಯೆಯಲ್ಲಿ ನಿಯೋಜಿಸಿರುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಸಹ ಕೊಪ್ಪಳ ಕ್ಷೇತ್ರದ ಮಸ್ಟರಿಂಗ್ ಕೇಂದ್ರಕ್ಕೆ ಆಗಮಿಸಿ, ನಿಗದಿಪಡಿಸಿದ ಮತಗಟ್ಟೆಗಳಿಗೆ ತೆರಳಿದರು.
ಮಸ್ಟರಿಂಗ್ ಕೇಂದ್ರಕ್ಕೆ ಜಿಲ್ಲಾಧಿಕಾರಿಗಳ ಭೇಟಿ: ಜಿಲ್ಲಾಧಿಕಾರಿಗಳಾದ ಎಂ.ಸುAದರೇಶಬಾಬು ಅವರು ಮೇ 9ರಂದು ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಪ್ರೌಢಶಾಲಾ ಆವರಣಕ್ಕೆ ತೆರಳಿ ಕೊಪ್ಪಳ ವಿಧಾನಸಭಾ ಮತಕ್ಷೇತ್ರದ ಮಸ್ಟರಿಂಗ್ ಕೇಂದ್ರದ ಸಿದ್ಧತೆಯನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರ ಚುನಾವಣಾಧಿಕಾರಿ ಮಲ್ಲಿಕಾರ್ಜುನ, ಡಿಎಸ್ಪಿ ಶರಣಬಸಪ್ಪ ಹಾಗೂ ಇನ್ನೀತರರು ಇದ್ದರು.
ವಿವಿಧೆಡೆ ಮಸ್ಟರಿಂಗ್ ಕಾರ್ಯ: ಮಸ್ಟರಿಂಗ್ ಕಾರ್ಯವು 60 ಕುಷ್ಟಗಿ ಕ್ಷೇತ್ರದ್ದು ಕುಷ್ಟಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ, 61 ಕನಕಗಿರಿ ಕ್ಷೇತ್ರದ್ದು ಕನಕಗಿರಿಯ ಕರ್ನಾಟಕ ಪಬ್ಲಿಕ್ ಶಾಲೆ, ಪ್ರೌಢಶಾಲೆ ಮತ್ತು ಕಾಲೇಜು ವಿಭಾಗದಲ್ಲಿ, 62- ಗಂಗಾವತಿ ಕ್ಷೇತ್ರದ್ದು ಗಂಗಾವತಿಯ ಲಯನ್ಸ್ ಕ್ಲಬ್ ಕ್ಯಾಂಪಸ್‌ನ ಲಯನ್ಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, 63 ಯಲಬುರ್ಗಾ ಕ್ಷೇತ್ರದ್ದು ಯಲಬುರ್ಗಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಿತು.