This is the title of the web page
This is the title of the web page

Please assign a menu to the primary menu location under menu

State

ಚುಟುಕು ಸಾಹಿತ್ಯ ಪರಿಷತ್ತಿನಿಂದ ದಿ. ೨೭ ರಂದು ಜಿಲ್ಲಾ ಮಟ್ಟದ ಚುಟುಕು ವಾಚನ ಸ್ಪರ್ಧೆ


ಬೆಳಗಾವಿ ೨೪- ಚುಟುಕು ಸಾಹಿತ್ಯ ಪರಿಷತ್ತು ಇದೇ ಅಗಸ್ಟ್ ೨೭ ರವಿವಾರ ಕನ್ನಡ ಸಾಹಿತ್ಯ ಭವನದಲ್ಲಿ ಜಿಲ್ಲಾ ಮಟ್ಟದ ಚುಟುಕು ವಾಚನ ಸ್ಪರ್ಧೆ ಏರ್ಪಡಿಸಿದ್ದು ಬೆಳಿಗ್ಗೆ ೧೦.೩೦ ಕ್ಕೆ ಖ್ಯಾತ ಚುಟುಕು ಕವಿ ಜಿನದತ್ತ ದೇಸಾಯಿ ಅವರು ಸ್ಪರ್ಧೆ ಉದ್ಘಾಟಿಸಲಿದ್ದಾರೆ. ಸಂಜೆ ೪ ಗಂಟೆಗೆ ಸಮಾರೋಪ ಮತ್ತು ಬಹುಮಾನ ವಿತರಣೆ ನಡೆಯಲಿದೆ.
ಸ್ಪರ್ಧೆಗೆ ಪ್ರವೇಶ ಉಚಿತವಿದ್ದು ವಯೋಮಿತಿಯಿರುವುದಿಲ್ಲ. ಪ್ರತಿಯೊಬ್ಬರು ತಲಾ ಮೂರು ಚುಟುಕುಗಳನ್ನು ಓದಲು ಅವಕಾಶವಿದ್ದು, ಐವರು ವಿಜೇತರಿಗೆ ನಗದು ಹಣ ಬಹುಮಾನ, ಮತ್ತು ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರ ಕೊಡಲಾಗುತ್ತದೆ.
ಸ್ಪರ್ಧೆಯಲ್ಲಿ ಭಾಗವಹಿಸಬಯಸುವವರು ದಿ. ೨೬ ರ ಸಂಜೆಯೊಳಗೆ ರೊಳಗೆ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಬಸವರಾಜ ಗಾರ್ಗಿ ಇವರ ಮೊಬೈಲ್ ವಾಟ್ಸಪ್ 8762889099 ಈ ನಂಬರಿಗೆ ತಮ್ಮ ಹೆಸರು ವಿಳಾಸ ಮತ್ತು ಮೊಬೈಲ್ ನಂಬರು ದಾಖಲಿಸಿಕೊಳ್ಳಬೇಕೆಂದು ಜಿಲ್ಲಾಧ್ಯಕ್ಷ ಎಲ್. ಎಸ್. ಶಾಸ್ತ್ರಿ ಅವರು ತಿಳಿಸಿದ್ದಾರೆ .


Leave a Reply