ಬೆಳಗಾವಿ ೮- ಚುಟುಕು ಸಾಹಿತ್ಯ ಪರಿಷತ್ತು ಇದೇ ಅಗಸ್ಟ್ ೨೭ ರವಿವಾರ ಕನ್ನಡ ಸಾಹಿತ್ಯ ಭವನದಲ್ಲಿ ಜಿಲ್ಲಾ ಮಟ್ಟದ ಚುಟುಕು ವಾಚನ ಸ್ಪರ್ಧೆ ಏರ್ಪಡಿಸಿದ್ದು ಬೆಳಿಗ್ಗೆ ೧೦.೩೦ ಕ್ಕೆ ಖ್ಯಾತ ಚುಟುಕು ಕವಿ ಜಿನದತ್ತ ದೇಸಾಯಿ ಅವರು ಸ್ಪರ್ಧೆ ಉದ್ಘಾಟಿಸಲಿದ್ದಾರೆ. ಸಂಜೆ ೪ ಗಂಟೆಗೆ ಸಮಾರೋಪ ಮತ್ತು ಬಹುಮಾನ ವಿತರಣೆ ನಡೆಯಲಿದೆ.
ಸ್ಪರ್ಧೆಗೆ ಪ್ರವೇಶ ಉಚಿತವಿದ್ದು ವಯೋಮಿತಿಯಿರುವುದಿಲ್ಲ. ಪ್ರತಿಯೊಬ್ಬರು ತಲಾ ಮೂರು ಚುಟುಕುಗಳನ್ನು ಓದಲು ಅವಕಾಶವಿದ್ದು, ಐವರು ವಿಜೇತರಿಗೆ ನಗದು ಬಹುಮಾನ, ಮತ್ತು ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರ ಮತ್ತು ಪುಸ್ತಕ ಕೊಡುಗೆಯಿರುತ್ತದೆ.
ಸ್ಪರ್ಧೆಯಲ್ಲಿ ಭಾಗವಹಿಸಬಯಸುವವರು ದಿ. ೨೫ ರೊಳಗೆ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಬಸವರಾಜ ಗಾರ್ಗಿ ಇವರ ಮೊಬೈಲ್ ವಾಟ್ಸಪ್ 8762889099 ಈ ನಂಬರಿಗೆ ತಮ್ಮ ಹೆಸರು ವಿಳಾಸ ಮತ್ತು ಮೊಬೈಲ್ ನಂಬರು ದಾಖಲಿಸಿಕೊಳ್ಳಬೇಕೆಂದು ಜಿಲ್ಲಾಧ್ಯಕ್ಷ ಎಲ್. ಎಸ್. ಶಾಸ್ತ್ರಿ ಅವರು ತಿಳಿಸಿದ್ದಾರೆ .