This is the title of the web page
This is the title of the web page

Please assign a menu to the primary menu location under menu

Local News

ಜಿಲ್ಲಾ ಮಟ್ಟದ ಸಾರ್ವತ್ರಿಕ ಕಾರ್ಯಪಡೆ ಸಭೆ


ಬೆಳಗಾವಿ, ಜು.೧೩ : ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿ ನೀಡಲಾಗುವ ಲಸಿಕೆಯನ್ನು ಪಡೆಯದೇ ಅಥವಾ ಅರ್ಧಕ್ಕೆ ಬಿಟ್ಟುಹೋದ ೨ ವರ್ಷದ ಮಕ್ಕಳ ದಡಾರ (ಗೋಬ್ಬರ) ಮತ್ತು ರುಬೇಲ್ಲಾ ೧ ಮತ್ತು ೨ ಡೋಸ್ ಲಸಿಕೆ, ಡಿ.ಪ.ಟಿ ವರ್ದಕ ಮತ್ತು ಓ.ಪಿ.ಇ ವರ್ದಕ ಪಡೆಯದಿರುವ ಎಲ್ಲ ೨ ರಿಂದ ೫ ವರ್ಷದ ಮಕ್ಕಳ ಹಾಗೂ ಒಂದೂ ಲಸಿಕೆ ಪಡೆಯದ, ಭಾಗಶಹಃ ಲಸಿಕೆ ಪಡೆದ ಗರ್ಭಿಣಿಯರಿಗೆ ತೀವ್ರತರ ಮಿಷನ್ ಇಂದ್ರದನುಷ ೫.೦ ಅಭಿಯಾನದಲ್ಲಿ ಲಸಿಕೆಯನ್ನು ನೀಡಲಾಗುವದು. ಅರ್ಹ ಫಲಾನುಭವಿಗಳು ಲಸಿಕೆಯನ್ನು ಪಡೆಯಬೇಕು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ತಿಳಿಸಿದರು.
ಬೆಳಗಾವಿಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಇಲ್ಲಿ ಬುಧವಾರ (ಜು.೧೨) ನಡೆದ ಜಿಲ್ಲಾ ಮಟ್ಟದ ಸಾರ್ವತ್ರಿಕ ಲಸಿಕೆ ಮತ್ತು ತೀವ್ರತರ ಮಿಷನ್ ಇಂದ್ರದನುಷ ೫.೦ ದ ಜಿಲ್ಲಾ ಕಾರ್ಯಪಡೆಯ ಸಭೆಯ ಹಾಗೂ ಸಕ್ರೀಯ ಕ್ಷಯರೋಗ ಪತ್ತೆ ಆಂದೋಲನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ವಿವಿಧ ಇಲಾಖೆಗಳು ತೀವ್ರತರ ಮಿಷನ್ ಇಂದ್ರದನುಷ ೫.೦ ಅಭಿಯಾನದಡಿ ಸಮನ್ವತೆಯಿಂದ ಕಾರ್ಯ ನಿರ್ವಹಿಸಬೇಕು ಹಾಗೂ ಅಭಿಯಾನದ ಕುರಿತು ಸಾರ್ವಜನಿಕರಲ್ಲಿ ವ್ಯಾಪಕ ಪ್ರಚಾರವನ್ನು ಕೈಗೊಳ್ಳಬೇಕು, ಸಾಕಷ್ಟು ಪ್ರಮಾಣದಲ್ಲಿ ಲಸಿಕೆಗಳ ದಾಸ್ತಾನು ಇಟ್ಟುಕೊಳ್ಳಬೇಕು ಎಂದು ತಿಳಿಸಿದರು.
ಬೆಳಗಾವಿ ಜಿಲ್ಲೆಯಲ್ಲಿ ಅಗಷ್ಟ ೭ ರಿಂದ ೧೨ ರವರೆಗೆ ಮೊದಲನೆ ಸುತ್ತು, ಸಪ್ಟೆಂಬರ ೧೧ ರಿಂದ ೧೬ ರವರೆಗೆ ೨ನೇ ಸುತ್ತು. ಹಾಗೂ ಅಕ್ಟೋಬರ ೯ ರಿಂದ ೧೪ ರವರೆಗೆ ೩ನೇ ಸುತ್ತು ಈ ಮೂರು ಸುತ್ತುಗಳಲ್ಲಿ ತೀವ್ರ ಇಂದ್ರದನುಷ್ ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಹೇಶ ಕೋಣಿ ಅವರು ತಿಳಿಸಿದರು.
ಜಿಲ್ಲೆಯ ಲಸಿಕಾ ಕಾರ್ಯಪಡೆಯ ಸಭೆಗೆ ಬೆಳಗಾವಿ ಜಿಲ್ಲೆಯಲ್ಲಿ ನೀಡುತ್ತಿರುವ ಲಸಿಕೆಗಳ ವಿವರಗಳನ್ನು ಮತ್ತು ತೀವ್ರತರ ಮಿಷನ್ ಇಂದ್ರದನುಷ ೫.೦ ಅಭಿಯಾನದ ವಿವರಗಳನ್ನು ಡಾ ಚೇತನ ಕಂಕಣವಾಡಿ ಜಿಲ್ಲಾ ಸಂತಾನೋತ್ಪತಿ ಹಾಗೂ ಮಕ್ಕಳ ಮತ್ತು ಲಸಿಕಾ ಅಧಿಕಾರಿಗಳು ತಿಳಿಸಿದರು.
ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು, ಆರೋಗ್ಯ ಇಲಾಖೆಯ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳು ಹಾಗೂ ತಾಲೂಕಾ ಆರೋಗ್ಯಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


Leave a Reply