ಗದಗ ಜುಲೈ 19: ಬಿಪಿಎಲ್‍ಪಡಿತರದಾರರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ವಿವಿಧ ರೀತಿಯ ತರಬೇತಿಗಳನ್ನು ಸರ್ಕಾರದಿಂದ(ಆರ್‍ಸೆಟಿ) ನೀಡಲಾಗುತ್ತಿದ್ದು ಬಡತನ ರೇಖೆಗಿಂತ ಕೆಳಗಿರುವವರು ಆರ್ಥಿಕವಾಗಿ ಸಬಲೀಕರಣ ಹೊಂದಬೇಕೆನ್ನುವುದೇ ಇದರ ಉದ್ದೇಶವಾಗಿದ್ದು ತರಬೇತಿದಾರರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಸಾಲ ನೀಡುವಲ್ಲಿ ವಿನಾಕಾರಣ ವಿಳಂಬ ಮಾಡಬಾರದು ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ತಿಳಿಸಿದರು.
ಗದಗ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಲೀಡ್ ಬ್ಯಾಂಕ್‍ನ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ ಸಭೆ ( ಡಿಎಲ್‍ಆರ್‍ಸಿ)ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬ್ಯಾಂಕ್ ಅಧಿಕಾರಿಗಳು ಪಿಎಂಸ್ವನಿಧಿ (ಬೀದಿ ಬದಿ ವ್ಯಾಪಾರಸ್ಥರ ಉನ್ನತಿಗೆ ಸಾಲ ಯೋಜನೆ), ಉದ್ಯೋಗಿನಿ, ಪಿಎಂಎಸ್‍ಬಿವೈ, ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳ ಅರ್ಹ ಫಲಾನುಭವಿಗಳಿಗೆ ಸಾಲ ವಿತರಣೆಯಲ್ಲಿ ಇನ್ನಷ್ಟು ಪ್ರಗತಿ ಸಾಧಿಸಬೆಕು. ಫಲಾನುಭವಿಗಳು ಅರ್ಜಿಗಳೊಂದಿಗೆ ಸೂಕ್ತ ದಾಖಲಾತಿಗಳನ್ನು ಹಾಜರುಪಡಿಸದೇ ಇದ್ದಲ್ಲಿ ಸಕಾರಣದೊಂದಿಗೆ ಅರ್ಜಿಯನ್ನು ತಿರಸ್ಕøತಗೊಳಿಸಬಹುದು ಮತ್ತು ಫಲಾನುಭವಿಗಳಿಗೆ ಯೋಜನೆಯ ಕುರಿತು ಬ್ಯಾಂಕ್‍ನವರು ಸೂಕ್ತ ಮಾಹಿತಿ ಒದಗಿಸಬೇಕು. ಈಗಾಗಲೇ ಅಂಬೇಡ್ಕರ್ ನಿಗಮ, ಕೈಮಗ್ಗ ಇಲಾಖೆಯ ಯೋಜನೆಯ ಬಾಕಿ ಇರುವ ಅರ್ಜಿಗಳನ್ನು ಪುನ: ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ಸಲಹೆ ಮಾಡಿದರು.
ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಎಂ.ವಿ.ಚಳಗೇರಿ ಅವರು ಮಾತನಾಡಿ ಬ್ಯಾಂಕ್‍ನವರು ಕೆವೈಸಿ ಅಪಡೇಟ್ ಮಾಡುವ ಪ್ರಕ್ರಿಯೆಯಲ್ಲಿ ಅಂಗವಿಕಲರಿಗೆ ಹಾಗೂ ಹಿರಿಯ ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸಿ ಕಾರ್ಯ ನಿರ್ವಹಿಸಬೇಕು.ಅರ್ಹ ಫಲಾನುಭವಿಗಳು ಬ್ಯಾಂಕ್‍ಗೆಉದ್ಯೋಗಿನಿ ಯೋಜನೆಯ ಅರ್ಜಿಗಳನ್ನು ಪ್ರಸ್ತುತಪಡಿಸುವಾಗ ಕನಿಷ್ಟ ಪಕ್ಷ ಅರ್ಜಿಯೊಂದಿಗೆ ಅವಶ್ಯಕವಾಗಿ ಬೇಕಾಗುವ ದಾಖಲೆಗಳ ಕುರಿತು ಸೂಕ್ತ ಮಾಹಿತಿ ಒದಗಿಸಬೇಕು. ವಿನಾಕಾರಣ ಅರ್ಜಿಗಳನ್ನು ತಿರಸ್ಕರಿಸಬಾರದು. ಸರ್ಕಾರದ ಯೋಜನೆಯ ಸೌಲಭ್ಯ ಸಾರ್ವಜನಿಕರಿಗೆ ತಲುಪಬೇಕಾದರೆ ಬ್ಯಾಂಕ್ ನವರು ವಿಶೇಷ ಆಸಕ್ತಿಯಿಂದ ಕೆಲಸ ಮಾಡಬೇಕಾಗುತ್ತದೆ ಎಂದು ತಿಳಿಸಿದರು.
ಲೀಡ್ ಬ್ಯಾಂಕ್ ಮ್ಯಾನೇಜರ್ ಜಬ್ಬಾರ್ ಅಹ್ಮದ್ ಸಾರವಾಡ ಮಾತನಾಡಿ ಜಿಲ್ಲೆಯಲ್ಲಿ ಜೂನ್ 2023 ರ ಅಂತ್ಯಕ್ಕೆ ಲೀಡ್ ಬ್ಯಾಂಕ್‍ನ 176 ಶಾಖೆಗಳು ಕಾರ್ಯನಿರ್ವಹಿಸುತ್ತಿವೆ. ಜಿಲ್ಲೆಯ ಸಾಲ ಠೇವಣಿ ಅನುಪಾತ ಜೂನ್ 2023 ರ ಅಂತ್ಯದವರೆಗೆ ಶೇ.91.93 ರಷ್ಟಾಗಿದೆ. ಎಲ್ಲ ಬ್ಯಾಂಕ್‍ನ ನಿಯಂತ್ರಣಾಧಿಕಾರಿಗಳು ತಮ್ಮ ಸಾಲ ಠೇವಣಿ ಅನುಪಾತವನ್ನು ಪರಿಶೀಲಿಸಿ ಸುಧಾರಿಸಲು ನಿರ್ದೇಶನ ನೀಡಲಾಗಿದೆ. ಜೂನ್ 2023ರ ಅಂತ್ಯಕ್ಕೆ ಆದ್ಯತಾ ಕ್ಷೇತ್ರಕ್ಕೆ 94771.37 ಲಕ್ಷ ರೂ. ಸಾಲ ನೀಡಿಕೆಯಾಗಿದ್ದು ಗದಗ-41304.37 ಲಕ್ಷ ರೂ,ಗಜೇಂದ್ರಗಡ –4189.60 ಲಕ್ಷ ರೂ, ಲಕ್ಷ್ಮೇಶ್ವರ- 3807.92 ಲಕ್ಷ ರೂ, ಮುಂಡರಗಿ-7862.42 ಲಕ್ಷ ರೂ, ನರಗುಂದ-9255.54ಲಕ್ಷ ರೂ, ರೋಣ 21278.58 ಲಕ್ಷ ರೂ, ಶಿರಹಟ್ಟಿ-7072.95 ಲಕ್ಷ ರೂ.ಸಾಲ ನೀಡಿಕೆಯಾಗಿದೆ ಎಂದು ಸಭೆಗೆ ತಿಳಿಸಿದರು.
ಸಭೆಯಲ್ಲಿಪಿಎಂಇಜಿಪಿ, ಪಿಎಂಎಂವೈ(ಮುದ್ರಾ), ಸಿಎಂಅಮೃತ ಜೀವನ, ಡೇನಲ್ಮ-ಎಆರ್‍ಎಲ್‍ಎಂ, ಪಿಎಂಎವೈ, ಪಿಎಂಜೆಜೆವೈ, ಎಪಿವೈ, ಪಿಎಂಎಸ್‍ಬಿವೈ ಸೇರಿದಂತೆ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು