This is the title of the web page
This is the title of the web page

Please assign a menu to the primary menu location under menu

State

ಶ್ರೀ ಹುಲಿಗೆಮ್ಮ ದೇವಿ ಜಾತ್ರೆ: ಜಾಗೃತೆ ವಹಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಯಶೋಧಾ ವಂಟಗೋಡಿ ಮನವಿ


ಕೊಪ್ಪಳ ಮೇ ೧೨: ಜಿಲ್ಲೆಯ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ ಜಾತ್ರಾ ಮಹೋತ್ಸವ ಪ್ರಯುಕ್ತ ಸಾರ್ವಜನಿಕರು ನಾನಾ ವಿಷಯಗಳ ಕುರಿತು ಜಾಗೃತೆ ವಹಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಯಶೋಧಾ ವಂಟಗೊಡಿ ಅವರು ಜಾತ್ರೆಗೆ ಆಗಮಿಸುವ ಭಕ್ತರಲ್ಲಿ ಮನವಿ ಮಾಡಿದ್ದಾರೆ.
ಶ್ರೀ ಹುಲಿಗೆಮ್ಮ ದೇವಿ ಜಾತ್ರೆಗೆ ಬರಲಿರುವ ಭಕ್ತರ ಸುರಕ್ಷತೆ ದೃಷ್ಟಿಯಿಂದ ಕೊಪ್ಪಳ ಜಿಲ್ಲಾ ಪೊಲೀಸ್ ಹಾಗೂ ಮುನಿರಾಬಾದ್ ಪೊಲೀಸ್ ವತಿಯಿಂದ ಎಲ್ಲಾ ರೀತಿಯ ಭದ್ರತೆ ವಹಿಸಲಾಗಿದೆ. ಆದರು ಸಹ ಏನಾದರು ಅವ್ಯವಸ್ತೆ ಉಂಟಾದಲ್ಲಿ ಕೂಡಲೇ ಪೊಲೀಸ್ ಇಲಾಖೆಯ ಗಮನಕ್ಕೆ ಮಾಹಿತಿ ನೀಡಬೇಕು ಎಂದು ಎಸ್ಪಿ ಅವರು ಮನವಿ ಮಾಡಿದ್ದಾರೆ.
ಜಾತ್ರೆಗೆ ಬರುವ ಭಕ್ತಾದಿಗಳು, ಜೇಬುಗಳ್ಳರಿಂದ, ಸರಗಳ್ಳರಿಂದ ಎಚ್ಚರ ವಹಿಸಬೇಕು.
ಜಾತ್ರೆಯ ಸಂದರ್ಭದಲ್ಲಿ ನಿಮ್ಮ ಮಕ್ಕಳ ಮತ್ತು ವಯಸ್ಸಾದ ವೃದ್ಧರ ಜೇಬಿನಲ್ಲಿ ಮನೆ ವಿಳಾಸ ಹಾಗೂ ಮೊಬೈಲ್ ಸಂಖ್ಯೆಯನ್ನು ಬರೆದಿಡಬೇಕು. ದೇವರ ದರ್ಶನಕ್ಕೆ ಹೋದಾಗ ಅಥವಾ ಜಾತ್ರೆಗೆ ಹೋಗುವಾಗ ಆಭರಣಗಳನ್ನು ಎಲ್ಲರಿಗೂ ಕಾಣುವಂತೆ ಹಾಕಿಕೊಳ್ಳಬಾರದು. ಹೊಳೆಯ ದಂಡೆಯಲ್ಲಿ ಸ್ನಾನ ಮಾಡುವಾಗ ತಮ್ಮ ಮೊಬೈಲ್, ಬ್ಯಾಗ್ ಹಾಗೂ ಪರ್ಸುಗಳ ಬಗ್ಗೆ ಎಚ್ಚರ ವಹಿಸಬೇಕು. ನಿಮ್ಮ ದ್ವಿಚಕ್ರ ವಾಹನ ಅಥವಾ ಇತರ ವಾಹನಗಳನ್ನು ಎಲ್ಲೆಂದರಲ್ಲಿ ಬಿಡದೇ ಪಾರ್ಕಿಂಗ್ ಸ್ಥಳದಲ್ಲೇ ಬಿಡಬೇಕು ಮತ್ತು ಲಾಕ್ ಮಾಡುವುದನ್ನು ಮರೆಯಬಾರದು. ಜಾತ್ರೆಯಲ್ಲಿ ವಸ್ತುಗಳನ್ನು ಖರೀದಿ ಮಾಡುವಾಗ ನಿಮ್ಮ ವೆನಿಟಿ ಬ್ಯಾಗ್ ಮತ್ತು ಪರ್ಸುಗಳ ಬಗ್ಗೆ ಗಮನ ವಹಿಸಬೇಕು. ನಿಮ್ಮ ಗಮನ ಬೇರೆಡೆ ಸೆಳೆದು ಕಳ್ಳತನ ಮಾಡುವ ಸಂದರ್ಭವಿರುತ್ತದೆ. ಜಾತ್ರೆಯಲ್ಲಿ ಅಪರಿಚಿತ ವ್ಯಕ್ತಿಗಳಿಗೆ ನಿಮ್ಮ ವಸ್ತುಗಳನ್ನು ಮತ್ತು ನಿಮ್ಮ ಮಕ್ಕಳನ್ನು ನೋಡಿಕೊಳ್ಳಲು ಹೇಳಬೇಬಾರದು. ಜಾತ್ರೆಯಲ್ಲಿ ಯಾರಾದರೂ ಸಂಶಯಾಸ್ಪದ ವ್ಯಕ್ತಿಗಳು ಕಂಡುಬಂದರೆ ತಕ್ಷಣವೇ ಪೋಲಿಸರಿಗೆ ಅಥವಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಇಲ್ಲವೇ ೧೧೨ಗೆ ಕರೆ ಮಾಡಬೇಕು. ಅಥವಾ ಪೊಲೀಸ್ ಕಂಟ್ರೋಲ್ ರೂಮ್ ನಂ:೯೪೮೦೮೦೩೭೦೦ ಗೆ ಸಂಪರ್ಕಿಸಬೇಕು.
ಸಹಾಯಕ್ಕಾಗಿ ಪಿಎಸ್‌ಐ ೯೪೮೦೮೦೩೭೪೮ ಹಾಗೂ ಸಿಪಿಐ ೯೪೮೦೮೦೩೭೩೧ಗೆ ಅಥವಾ ಹತ್ತಿರದ ಮುನಿರಾಬಾದ್ ಠಾಣೆಗೆ ಸಂಪರ್ಕಿಸಬಹುದು ಎಂದು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.


Leave a Reply