ತಪ್ಪು ಸಂದೇಶ ನೀಡುವ ಚುಟುಕುಗಳು ಬೇಡ; ಡಾ.ಪಿ.ಜಿ. ಕೆಂಪಣ್ಣವರ

Murugesh Shivapuji
ತಪ್ಪು ಸಂದೇಶ ನೀಡುವ ಚುಟುಕುಗಳು ಬೇಡ; ಡಾ.ಪಿ.ಜಿ. ಕೆಂಪಣ್ಣವರ
Oplus_131072
WhatsApp Group Join Now
ಬೆಳಗಾವಿ; ಸಮಾಜಕ್ಕೆ ತಪ್ಪು ಸಂದೇಶ ನೀಡುವಂಥ ಚುಟುಕುಗಳ ರಚನೆ ಒಳ್ಳೆಯದಲ್ಲ ಅಂತಹ ಚುಟುಕುಗಳು ಬೇಡ ಎಂದು ಹಿರಿಯ ಸಾಹಿತಿ ಡಾ.ಪಿ ಜಿ. ಕೆಂಪಣ್ಣವರ್ ಹೇಳಿದರು.
ಅವರಿಂದು ಬೆಳಗಾವಿಯಲ್ಲಿ ನಡೆದ ಬೆಳಗಾವಿ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನದ ಅಂಗವಾಗಿ ಏರ್ಪಡಿಸಲಾದ ರಾಜ್ಯಮಟ್ಟದ ಚುಟುಕು ವಾಹನ ವಾಚನ ಸ್ಪರ್ಧೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಅಧ್ಯಯನದಿಂದ ಚುಟುಕು ಸಾಹಿತ್ಯದ ರಚನೆಯಾಗಲಿ ಅವುಗಳಿಂದ ಸಮಾಜಕ್ಕೆ ಒಳಿತಾಗಲಿ ಆಧುನಿಕ ಚುಟುಕುಗಳು ಮನಸ್ಸನ್ನು ಅರಳಿಸುವಂತಿರಬೇಕು. ಚುಟುಕುಗಳ ರಚನೆಯಲ್ಲಿ ಶಬ್ದಗಳನ್ನು ಬಳಸುವಾಗ ಕಾಳಜಿ ವಹಿಸಬೇಕು ಎಂದವರು ಹೇಳಿದರು.
ಆಶಯ ಭಾಷಣ ಮಾಡಿದ ನಿವೃತ್ತ ಅಧಿಕಾರಿ ರವಿ ಕೋಟಾರಗಸ್ತಿ ಮಾತನಾಡಿ ಸರ್ವಜ್ಞನ ಚುಟುಕುಗಳಿಂದ ಹಿಡಿದು ಈವರೆಗಿನ ಚುಟುಕುಗಳನ್ನು ಅವಲೋಕಿಸಿದಾಗ ಮನಸ್ಸು ಮುದಗೊಳ್ಳುತ್ತದೆ. 30 ವರ್ಷಗಳ ಹಿಂದೆ ದಿನಕರ ದೇಸಾಯಿ ಅವರು ಬರೆದ ಚೌಪದಿಗಳು ಅತ್ಯಂತ ಪ್ರಭಾವಕಾರಿಯಾಗಿದ್ದವು. ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ವಿಶೇಷ ಪಾತ್ರ ವಹಿಸಿದ್ದವು ಎಂದ ಅವರು ಚುಟುಕು ಸಾಹಿತ್ಯ ಜನಮಾನಸದಲ್ಲಿ ಹಾಸು ಹೊಕ್ಕಾಗಿದೆ ಅವನ್ನು ಸಾಹಿತ್ಯಿಕವಾಗಿ ಹೊರ ತಂದಾಗ ಅವಕ್ಕೆ ಹೆಚ್ಚಿನ ಮಹತ್ವ ಬರುತ್ತದೆ ಎಂದರು. ಚುಟುಕುಗಳನ್ನು  ಭಾವತುಂಬಿ ಪ್ರಸ್ತುತಪಡಿಸಿದಾಗ ಮಾತ್ರ  ಕೇಳುಗರನ್ನು  ಅವು ಪರಿಣಾಮಕಾರಿಯಾಗಿ ತಲುಪುತ್ತವೆ ಎಂದರು.
ಒಟ್ಟು 53 ಕವಿಗಳು ತಮ್ಮ ಚುಟುಕುಗಳನ್ನು ಪ್ರಸ್ತುತಪಡಿಸಿದರು. ಡಾ ಭಾರತಿ ಮಠದ, ಶ್ರೀಮತಿ ಮಮತಾ ಶಂಕರ ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಿದರು. ಆರ್.ಬಿ. ಕಟ್ಟಿ ,‌ ಎಸ್.ಕೆ. ಹೊಳೆಪ್ಪನವರ್, ಬಿ.ಬಿ. ಹಾಜಿ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಎಂ.ಎ. ಪಾಟೀಲ್, ಎನ್. ಗುಣಶೀಲ,  ಸಂಜೀವ್ ಲದ್ದಿ ಮಠ ವೇದಿಕೆ ನಿರ್ವಹಣೆಯಲ್ಲಿ
ದ್ದರು. ಚಿದಾನಂದ ಹೂಗಾರ ಕಾರ್ಯಕ್ರಮವನ್ನು ನಿರ್ವಹಿಸಿದರು
WhatsApp Group Join Now
Telegram Group Join Now
Share This Article
error: Content is protected !!