ಸವದತ್ತಿ : ಏಕ ಬಳಕೆ ಪ್ಲಾಸ್ಟಿಕ್ ನಿಷೇದ ಮತ್ತು ತ್ಯಾಜ್ಯ ನಿರ್ವಹಣೆ ಕುರಿತು ಜಾಥಾ ತರಬೇತಿ ಹಾಗೂ ಅರಿವು ಮೂಡಿಸುವ ಆಂದೋಲನ ಮತ್ತು ಅಭಿಯಾನ ಜೆ.ಎಸ್.ಪಿ. ಸಂಘದ ಎಸ್.ಪಿ.ಜೆ.ಜಿ. ಕಾಲೇಜು ಆವರಣದಲ್ಲಿ ಜರುಗಿತು. ಪುರಸಭೆ ಮುಖ್ಯಾಧಿಕಾರಿ ಡಿ.ಎನ್.ತಹಶೀಲ್ದಾರ ಮಾತನಾಡಿ ನಿಷೇಧಿತ ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಿ, ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ಮಾಡಲು ಎಲ್ಲರೂ ಸಹಕರಿಸಬೇಕೆಂದರು.
ನಂತರ ಪ್ರತಿಜ್ಞಾ ವಿಧಿ ಬೋಧಿಸಿದರು. ಈ ಸಂದರ್ಭದಲ್ಲಿ ಪುರಸಭೆ ಕಂದಾಯ ಅಧಿಕಾರಿ ಅನಿಲ ಗಿಡ್ನಂದಿ, ಆರೋಗ್ಯಾಧಿಕಾರಿ ಎಸ್.ಜಿ.ಗೌಡರ, ಬಸವರಾಜ ಹಲಗಿ, ಮುತ್ತಪ್ಪ ಪಾಗಾದ, ಬಾಬಾಜಾನ ಅತ್ತಾರ, ಆರ್.ಎಚ್.ಪಾಟೀಲ, ಮಾಲತೇಶ ಮಕರವಳ್ಳಿ, ಅಮಿತ ಕರೀಕಟ್ಟಿ, ಉಮೇಶ ಚುಳಕಿ ಸೇರಿದಂತೆ ಕಾಲೇಜಿನ ಸಿಬ್ಬಂದಿ ವರ್ಗದವರು ಇದ್ದರು.