This is the title of the web page
This is the title of the web page

Please assign a menu to the primary menu location under menu

Local News

ಅಭಿವೃದ್ದಿಗಾಗಿ ರಾಜಕೀಯ ಮಾಡಿ : ಲಖನ ಜಾರಕಿಹೊಳಿ


ಯಮಕನಮರಡಿ: ಜನಸಾಮಾನ್ಯರ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸಿ ಅಭಿವೃದ್ದಿ ಕಾರ್ಯಗಳನ್ನು ಮಾಡಬೇಕು ಹೊರತು ಹಣ ಗಳಿಸುವುದಕ್ಕೆ ರಾಜಕಾರಣ ಮಾಡಬಾರದು ಎಂದು ವಿಧಾನ ಪರಿಷತ್ ಸದಸ್ಯ ಲಖನ ಜಾರಕಿಹೊಳಿ ಹೇಳಿದರು.
ಅವರು ಗುರುವಾರ ದಿ. ೧೧ ರಂದು ಚಿಕ್ಕಲದಿನ್ನಿ ಗ್ರಾಮದ ಶ್ರೀ ಕಮಲಾದೇವಿ ದೇವಸ್ಥಾನದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ನನ್ನ ಕ್ಷೇತ್ರದಲ್ಲಿ ಬರುವ ೧೮ ಮತಕ್ಷೇತ್ರಗಳ ಅಭಿವೃದ್ದಿಗೆ ಕಂಕಣಬದ್ದರಾಗಿದ್ದು, ದೇವಾಲಗಳ ಜಿರ್ಣೋದ್ದಾರ ಮತ್ತು ಶಾಲಾ ಅಭಿವೃದ್ದಿಗೆ ಹೆಚ್ಚಿನ ಆದ್ಯತೆ ನೀಡುತ್ತೇನೆ. ಯಮಕನಮರಡಿ ಕ್ಷೇತ್ರದಲ್ಲಿ ಶಾಸಕರು ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದಾರೆ ಆದರೆ ಅವರ ಕೆಲ ಹಿಂಬಾಲಕರಿಂದ ಶಾಸಕರ ಹೆಸರಿಗೆ ದಕ್ಕೆಯಾಗುತ್ತಿದೆ. ಇಲ್ಲಿ ಪಿಎ ಗಳ ರಾಜಕಾರಣದಿಂದ ಕಾರ್ಯಕರ್ತರು ಅಸಮಾಧಾನ ಹೊಂದಿದ್ದಾರೆ ಅವರ ಪರವಾಗಿ ನೊಂದ ಕಾರ್ಯಕರ್ತರ ಅಧ್ಯಕ್ಷನಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿ ಪಿಎಗಳು ಕರೋನಾ ಇದ್ದಂತೆ ಎಂದು ಲಖನ ಜಾರಕಿಹೊಳಿ ಹೇಳಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ ಚಿಕಲದಿನ್ನಿಯ ಶ್ರೀ ಅದೃಶ್ಯಾನಂದ ಮಹಾಸ್ವಾಮಿಗಳು ಮಾತನಾಡಿ ಜಾರಕಿಹೊಳಿ ಕುಟುಂಬದವರು ಸಾಮಾಜಿಕ ಕಳಕಳಿಯುವಳ್ಳವರಾಗಿದ್ದು ಅವರ ಹೆಸರು ಇಡೀ ರಾಜ್ಯದಲ್ಲಿ ಖ್ಯಾತಿಯಾಗಿದೆ. ಪಕ್ಷೇತರ ಅಭ್ಯರ್ಥಿಯಾಗಿಆಯ್ಕೆಯಾದ ಲಖನ ಜಾರಕಿಹೊಳಿಯವರು ಹೊಸ ದಾಖಲೆ ಬರೆದಿದ್ದಾರೆ. ಅವರ ವ್ಯಕ್ತಿತ್ವ ತುಂಬಾ ಸರಳವಾಗಿದೆ. ನೇರ ನುಡಿಗಾರರು ಎಂದು ಹೇಳಿದರು.
ಶ್ರೀ ಕೃಪಾನಂದ ವiಹಾಸ್ವಾಮಿಗಳು ಮಾತನಾಡಿದರು. ಕಾರ್ಯಕ್ರಮದಲ್ಲಿ ಶಹಾಬಂದರ ಗ್ರಾ.ಪಂ.ಅಧ್ಯಕ್ಷ ಶಂಕರ ಡೊಂಬಾರ, ಪಾಶ್ಚಾಪೂರ ಗ್ರಾ.ಪಂ. ಮಾಜಿ ಅಧ್ಯಕ್ಷ ಅಬ್ದುಲಗಣಿ ದರ್ಗಾ, ಹುಕ್ಕೇರಿ ಗ್ರಾಮೀನ ವಿದ್ಯುತ ಸಂಘದ ನಿರ್ದೇಶಕ ಈರಣ್ಣಾ ಬಂಜಿರಾಮ, ಪ್ರಕಾಶ ಮಠದವರ, ಮಲ್ಲಪ್ಪ ಎಸ್ ನಾಯಿಕ, ಡಿ.ಎಫ್. ಮುಲ್ಲಾ, ಮಜಹರ ಖತೀಬ, ಮಕ್ತುಮಸಾಬ ಅಪ್ಪುಬಾಯಿ, ಲಗಮಣ್ಣಾ ಪಾಟೀಲ, ರಾಜು ಸೂರ್ಯವಂಶಿ, ಸುರೇಶ ಡುಮ್ಮನಾಯಿಕ, ಯಲ್ಲಪ್ಪ ಬೀರನಹೊಳಿ, ಮಾರುತಿ ನಡಗಡ್ಡಿ, ರಾಮಚಂದ್ರ ನಾಯಿಕ, ಹಣಮಂತ ದಾಸ, ಶಮಸುದ್ದೀನ ಕೋತವಾಲ, ಬಸವರಾಜ ಡುಮ್ಮನಾಯಿಕ, ಹಾಗೂ ಶ್ರೀ ಕಮಲಾದೇವಿ ಟ್ರಸ್ಟ ಕಮೀಟಿಯ ಸದಸ್ಯರು ಉಪಸ್ಥಿತಿದ್ದರು. ಶಹಾಬಂದರ ಗ್ರಾ.ಪಂ. ಪಿಡಿಓ ರಮೇಶ ತೇಲಿ ಸ್ವಾಗತಿಸಿದರು. ಶಿಕ್ಷಕ ಆರ್.ಎಸ್. ಪಂಗನ್ನವರ ಕಾರ್ಯಕ್ರಮ ನಿರೂಪಿಸಿದರು. ಎನ್.ಬಿ.ಬೊಮ್ಮನವರ ಪ್ರಾಸ್ತಾವಿಕ ಮಾತನಾಡಿದರು. ಈ ಬಾಗದ ಕಾರ್ಯಕರ್ತರು ತಮ್ಮ ಅಸಮಾಧಾನವನ್ನು ಲಖನ ಜಾರಕಿಹೊಳಿಯವರ ಮುಂದೆ ಹೇಳಿದರು.


Gadi Kannadiga

Leave a Reply