ಬೆಳಗಾವಿ:- ಪದೇ ಪದೇ ಸೊಂಟ ನೋವು ಹಾಗೂ ಕಿಬ್ಬೊಟ್ಟೆಯ ಊತದೊಂದಿಗೆ ಮೂತ್ರಪಿಂಡದ (ಕಿಡ್ನಿಯ) ವಿಪರೀತ ಭಾದೆ ಪಡುತ್ತಿದ್ದ ೬೦ ವರ್ಷದ ವಯಸ್ಕರಿಗೆ ಯಶಸ್ವಿಯಾಗಿ ಲೇಸರ್ ಶಸ್ತ್ರಚಿಕಿತ್ಸೆಯ ಮೂಲಕ ಮೂತ್ರಪಿಂಡದ ಹರಳುಗಳನ್ನು ಯಶಸ್ವಿಯಾಗಿ ಹೊರತೆಗೆದು ಉಪಚರಿಸಲಾಗಿದೆ. ಈ ರೋಗಿಯು ಸತತ ೩ ವರ್ಷಗಳಿಂದ ಈ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದನು. ಅಲ್ಲದೇ ಅನಿಯಂತ್ರಿತ ಮಧುಮೇಹ ಹಾಗೂ ರಕ್ತದೊತ್ತಡದ ಸಮಸ್ಯೆಯಿಂದಾಗಿ ವೈದ್ಯರಿಗೆ ಚಿಕಿತ್ಸೆ ನೀಡಲು ಸವಾಲೆನಿಸುವ ಪ್ರಸಂಗದಲ್ಲಿತ್ತು ,ಆ ನಂತರ ವ್ಯಕ್ತಿಗೆ ಅಲ್ಟ್ರಾಸೋನೊಗ್ರಾಫಿಯ ಮೂಲಕ ಆತನ ಮೂತ್ರಪಿಂಡದಲ್ಲಿ ಸುಮಾರು ನೂರಕ್ಕೂ ಅಧಿಕ ಹರಳುಗಳಿರುವದು ತಿಳಿದುಬಂದಿತು. ಅಲ್ಲದೇ ರೋಗಿಯು ವಿಪರೀತ ಭಾಧೆಯಿಂದ ಚಿಕಿತ್ಸೆಗೆ ಅತೀವ ತೊಂದರೆಯಾಗುತ್ತಿತ್ತು. ಇದನ್ನು ಮನಗಂಡ ಖ್ಯಾತ ಮೂತ್ರಪಿಂಡ ವೈದ್ಯರಾದ ಡಾ. ಅಮೇಯ ಪಥಾಡೆ ಅವರು ರೋಗಿಗೆ ಧೈರ್ಯ ತುಂಬಿ ಆತನನ್ನು ಶಸ್ತ್ರಚಿಕಿತ್ಸೆಗ ಮಾನಸಿಕವಾಗಿ ಸನ್ನಧ್ದಗೊಳಿಸಿದರು.
ನಂತರ ಸತತ ೨ ಘಂಟೆಗಳ ಕಾಲ ನಡೆದ ಲೇಸರ ಶಸ್ತ್ರಚಿಕಿತ್ಸೆಯಲ್ಲಿ ನಿರತರಾದ ಡಾ. ಅಮೇಯ ಪಥಾಡೆ, ವೈದ್ಯ ವಿದ್ಯಾರ್ಥಿಗಳಾದ ಡಾ. ಮಂಜಿತ ಹಾಗೂ ಡಾ. ಈಶ್ವರ ಮತ್ತು ಅರವಳಿಕೆ ವಿಭಾಗದ ಮುಖ್ಯಸ್ಥರಾದ ಡಾ. ಆರ್ ಜಿ ನೆಲವಿಗಿ ಅವರ ತಂಡಕಾರ್ಯದಲ್ಲಿ ರೋಗಿಯ ಮೂತ್ರಪಿಂಡದಿಂದ ಎಲ್ಲ ಹರಳುಗಳನ್ನು ತೆಗೆಯಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಡಾ. ಅಮೇಯ ಪಥಾಡೆ ಅವರು ಮೂತ್ರಪಿಂಡದಲ್ಲಿ ಹರಳುಗಳುಗಳಾಗುವದು ಇಂದಿನ ದಿನಗಳಲ್ಲಿ ಸಹಜವಾಗಿದೆ. ಇದಕ್ಕೆ ಕಾರಣ ನಾವು ದಿನನಿತ್ಯ ಸೇವಿಸುವ ಆಹಾರವಾಗಿದೆ. ನಾವು ಸೇವಿಸಿದಷ್ಟು ಆಹಾರಕ್ಕೆ ತಕ್ಕಂತೆ ನಮ್ಮ ಶರೀರಕ್ಕೆ ವ್ಯಾಯಾಮ ಹಾಗೂ ಸಮರ್ಪಕವಾದ ನೀರಿನ ಸೇªನೆಯಿಂದ ದೇಹದಲ್ಲಿ ಉತ್ಪತ್ತಿಯಾಗುವ ಕ್ಯಾಲ್ಸಿಯಂ ಮತ್ತಿತರೆ ಪೌಷ್ಟಿಕಾಂಶಗಳು ಶರೀರಕ್ಕೆ ಶಕ್ತಿಯಾಗಿ ಪರಿಣಮಿಸುತ್ತವೆ. ಆದರೆ ವ್ಯಾಯಾಮ ಮತ್ತು ನೀರಿನ ಸೇವನೆ ಕಡೆಗಣಿಸಿದರೆ ಶರೀರದಲ್ಲಿನ ಕ್ಯಾಲ್ಸಿಯಂ ಹರಳಿನ ರೂಪಕ್ಕೆ ತಿರುಗಿ ಮೂತ್ರಪಿಂಡದ ಸಮಸ್ಯೆಗಳು ತಲೆದೋರಬಹುದಾಗಿದೆ. ಮೂತ್ರಪಿಂಡದ ಹರಳುಗಳ ಸಮಸ್ಯೆಯಿಂದ ದೂರಉಳಿಯಬಹುದಾಗಿದೆ. ಅಲ್ಲದೇ ಇಂತಹ ಸಮಸ್ಯೆಗಳು ಕಂಡುಬಂದಾಕ್ಷಣ ವೈದ್ಯರನ್ನು ಕಂಡು ತಕ್ಕ ಉಪಚಾರ ಪಡೆಯುವದು ಅತ್ಯಗತ್ಯವಾಗಿದೆ ಎಂದು ತಿಳುವಳಿಕೆ ನೀಡಿದರು.
ಈ ಸಂದರ್ಭದಲ್ಲಿ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ನಿರ್ದೇಶಕರಾದ ಡಾ. ಎಸ್ ಸಿ ಧಾರವಾಡ ಅವರು, ಯುಎಸ್‌ಎಮ್ ಕೆ ಎಲ್ ಇ ಯ ನಿರ್ದೇಶಕರಾದ ಡಾ. ಹೆಚ್ ಬಿ ರಾಜಶೇಖರ ಅವರು ವೈದ್ಯರ ತಂಡಕ್ಕೆ ಅಭಿನಂದಿಸಿದ್ದಾರೆ. ಕೆ ಎಲ್ ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
Gadi Kannadiga > Local News > ಮೂತ್ರಪಿಂಡದಿಂದ ನೂರಾರು ಹರಳುಗಳನ್ನು ತೆಗೆದ ವೈದ್ಯರು
ಮೂತ್ರಪಿಂಡದಿಂದ ನೂರಾರು ಹರಳುಗಳನ್ನು ತೆಗೆದ ವೈದ್ಯರು
Suresh27/04/2023
posted on
