This is the title of the web page
This is the title of the web page

Please assign a menu to the primary menu location under menu

State

ದೇಶಿ ಹಸು ಸಾಕಾಣಿಕೆ : ಸಾಧಕ-ಬಾಧಕಗಳು ವಿಚಾರ ಗೋಷ್ಠಿ


ಗದಗ ಸೆಪ್ಟೆಂಬರ್ ೧೫: ಪಶು ವೈದ್ಯಕೀಯ ಮಹಾವಿದ್ಯಾಲಯ, ಗದಗನ ೬ನೆಯ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಸೆಪ್ಟೆಂಬರ್ ೨೭ ರಂದು ಬೆಳಿಗ್ಗೆ ೧೧ ಗಂಟೆಗೆ “ದೇಶಿ ಹಸು ಸಾಕಾಣಿಕೆ : ಸಾಧಕ-ಬಾಧಕಗಳು” ವಿಷಯದ ಮೇಲೆ ವಿಚಾರಗೋಷ್ಠಿ ಏರ್ಪಡಿಸಲಾಗಿದೆ. ಈ ವಿಚಾರಗೋಷ್ಟಿಯಲ್ಲಿ ತಜ್ಞ ಪಶುವೈದ್ಯ ವಿಜ್ಞಾನಿಗಳು, ಪಶುವೈದ್ಯರುಗಳು, ದೇಶಿ ಹಸು ಸಾಕುತ್ತಿರುವ ರೈತರು, ವಿದ್ಯಾರ್ಥಿಗಳು ಮತ್ತು ಇತರೆ ಆಸಕ್ತರು ಭಾಗವಹಿಸಿ ತಮ್ಮ ತಮ್ಮ ವಿಚಾರಗಳನ್ನು ಪ್ರಸ್ತುತಪಡಿಸಲಿದ್ದಾರೆ.
ಈ ವಿಚಾರಗೋಷ್ಠಿಯು ದೇಶಿ ಹಸು ಸಾಕಾಣಿಕೆಯಲ್ಲಿನ ವಿವಿಧ ಸಾಧಕ-ಬಾಧಕಗಳನ್ನು ವಿವಿಧ ದೃಷ್ಟಿಕೋನಗಳಿಂದ ಪರಾಮರ್ಶಿಸಿ ವಸ್ತುನಿಷ್ಠ, ವೈಜ್ಞಾನಿಕ ಹಾಗೂ ಸುಸ್ಥಿರ ಅಭಿವೃದ್ಧಿಯ ದೃಷ್ಟಿಯಿಂದ ಉತ್ತಮವಾದ ಮಾಹಿತಿಯನ್ನು ನೀಡುವ ಉದ್ದೇಶ ಹೊಂದಿದೆ. ಆಸಕ್ತ ರೈತರು, ಪಶುವೈದ್ಯರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸ್ವಯಂ-ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಇನ್ನಿತರೆ ಆಸಕ್ತ ನಾಗರಿಕರು ಭಾಗವಹಿಸಬಹುದಾಗಿದೆ. ಈ ವಿಚಾರ ಗೋಷ್ಠಿಯಲ್ಲಿ ಭಾಗವಹಿಸಲು ಸೆಪ್ಟೆಂಬರ್ ೨೩ ರೊಳಗಾಗಿ ನೊಂದಣಿ ಮಾಡಿಸಬೇಕು. ನೊಂದಣಿಗಾಗಿ ಮತ್ತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಸಂಘಟಕರನ್ನು ಸಂಪರ್ಕಿಸಬಹುದಾಗಿದೆ.
ಸಂಘಟನಾ ಕಾರ್ಯದರ್ಶಿ : ಡಾ. ಶಿವಕುಮಾರ ಕ. ರಡ್ಡೇರ, ಪ್ರಾಧ್ಯಾಪಕರು & ಮುಖ್ಯಸ್ಥರು, ಪ.ವೈ.&ಪ.ಸಂ. ವಿಸ್ತರಣಾ ಶಿಕ್ಷಣ ವಿಭಾಗ, ಪಶುವೈದ್ಯಕೀಯ ಮಹಾವಿದ್ಯಾಲಯ, ಗದಗ, ಮೊ. ೯೯೦೦೧೧೫೫೨೪, ಈ-ಮೇಲ್ -, mಚಿiಟಣo:hoಜvಚಿhevಛಿ[email protected]ಚಿiಟ.ಛಿom mಚಿiಟಣo:shivಚಿ.veಣ೨೦೦೨@gmಚಿiಟ.ಛಿom … ಸಹ ಸಂಘಟನಾ ಕಾರ್ಯದರ್ಶಿ : ಡಾ. ಸಿದ್ಧಲಿಂಗಸ್ವಾಮಿ ಹಿರೇಮಠ, ಸಹಪ್ರಾಧ್ಯಾಪಕರು, ಪ್ರಾಣಿ ಅನುವಂಶೀಯತೆ ವಿಭಾಗ, ಪಶುವೈದ್ಯಕೀಯ ಮಹಾವಿದ್ಯಾಲಯ, ಗದಗ. ಮೊ. ೯೪೪೮೫೪೫೩೫೧.


Gadi Kannadiga

Leave a Reply