ಕೊಪ್ಪಳ, ನವೆಂಬರ್ ೧೯ : ಜಿಲ್ಲೆಯ ಕನಕಗಿರಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ನಿರುಪಯುಕ್ತ ಎಲೆಕ್ಟ್ರಾನಿಕ್ ವಸ್ತುಗಳನ್ನು ಇ-ವೇಸ್ಟ್ ಸೆಂಟರ್ಗೆ ನೀಡುವಂತೆ ಪ.ಪಂ. ಮುಖ್ಯಾಧಿಕಾರಿ ತಿಳಿಸಿದ್ದಾರೆ.
ಕನಕಗಿರಿ ಪಟ್ಟಣ ಪಂಚಾಯತ್ ವತಿಯಿಂದ ಇ-ವೇಸ್ಟ್ ಸೆಂಟರ್ ಸ್ಥಾಪಿಸಲಾಗಿದ್ದು, ಪ.ಪಂ. ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕರು ಹಾಗೂ ವಾಣಿಜ್ಯ ಉದ್ದಿಮೆದಾರರು, ತಮ್ಮ ಮನೆ ಅಥವಾ ಎಲೆಕ್ಟ್ರಾನಿಕ್ ಅಂಗಡಿಗಳಲ್ಲಿ ಉತ್ಪತ್ತಿಯಾಗುವ ಅನುಪಯುಕ್ತ ಇ-ವೇಸ್ಟ್, ಎಲೆಕ್ಟ್ರಾನಿಕ್ ವೇಸ್ಟ್ (ಟಿವಿ, ಕಂಪ್ಯೂಟರ್, ಮಾನಿಟರ್, ಎರ್ಫೋನ್, ಮೊಬೈಲ್ ಇತ್ಯಾದಿ) ವಸ್ತುಗಳನ್ನು ನಗರದಲ್ಲಿ ಎಲ್ಲೆಂದರಲ್ಲಿ ಬಿಸಾಡದೇ, ಹಸಿಕಸ ಮತ್ತು ಒಣಕಸಗಳಲ್ಲಿಯೂ ಹಾಕದೇ ಪ್ರತ್ಯೇಕವಾಗಿ ಪ.ಪಂ. ಕಚೇರಿ ಆವರಣದ ಇ-ವೇಸ್ಟ್ ಸೆಂಟರ್ಗೆ ತಂದು ಕೊಡಬೇಕೆಂದು ಪ್ರಕಟಣೆ ತಿಳಿಸಿದೆ.
Gadi Kannadiga > State > ಕನಕಗಿರಿ: ನಿರುಪಯುಕ್ತ ಎಲೆಕ್ಟ್ರಾನಿಕ್ ವಸ್ತುಗಳನ್ನು ಇ-ವೇಸ್ಟ್ ಸೆಂಟರ್ಗೆ ನೀಡಿ