ಕುಷ್ಟಗಿ:- ಪಟ್ಟಣದಲ್ಲಿ ಏಪ್ರಿಲ್ -3 ರಂದು ಬುಧವಾರ ಬಿಜೆಪಿ ಪಕ್ಷದ ಅಭ್ಯರ್ಥಿ ದೊಡ್ಡನಗೌಡ ಎಚ್ ಪಾಟೀಲ್ ರವರ ಪರ ಕುಷ್ಟಗಿ ಮಲ್ಲಯ್ಯ ವೃತ್ತದಿಂದ ಮಾರುತಿ ಸರ್ಕಲ್ ಮೂಲಕ ಬಸವೇಶ್ವರ ವೃತ್ತವರೆಗೂ ತೆರೆದ ವಾಹನದಲ್ಲಿ ರೋಡ್ ಶೋ ಮೂಲಕ ತೆರಳಿ ಬಸವೇಶ್ವರ ಸಕ್೯ಲ್ ನಲ್ಲಿ ಪಕ್ಷದ ಅಭ್ಯರ್ಥಿ ಪರ ಕಿಚ್ಚ ಸುದೀಪ್ ಮತಯಾಚನೆ ಮಾಡಿದರು.
ಕುಷ್ಟಗಿಯಲ್ಲಿ ಅಭಿಮಾನಿಗಳು ಈ ಪ್ರೀತಿ ತೋರಿಸಿದ್ದು ಬಹಳ ಸಂತಸವಾಯಿತು. ರಸ್ತೆ ಯುದ್ದಕ್ಕೂ ಕಿಚ್ಚ ಪರ ಘೋಷಣೆಗಳು ಮುಗಿಲೆತ್ತರಕ್ಕೆ ಕೇಳಿದವು .
ಬಿಜೆಪಿ ಅಭ್ಯರ್ಥಿ ದೊಡ್ಡನಗೌಡ ಪಾಟೀಲ್ ರವರನ್ನು ಎರಡು ಸಾರಿ ಗೆಲಿಸಿದ್ದೀರಿ, ಈಗ ಮತ್ತೊಮ್ಮೆ ಕುಷ್ಟಗಿ ಯಲ್ಲಿ ಗೆಲ್ಲಿಸಿ ಕೊಡಿ ಎಂದು ಬಿಜೆಪಿ ಅಭ್ಯರ್ಥಿ ಪರ ಮತ ಯಾಚನೆ ಮಾಡಿದರು.
ರಸ್ತೆಯುದ್ದಕ್ಕೂ ಕಿಚ್ಚ ಸುದೀಪ್ ರವರು ಮತಯಾಚನೆ ಮಾಡುವುದರ ಜೊತೆಗೆ ಅಭಿಮಾನಿಗಳ ತಂದಿರುವ ಪೋಟೋಗಳಿಗೆ ಮತ್ತು ವಿವಿಧ ವಸ್ತುಗಳ ಮೇಲೆ ಬಾದ್ ಷಾ ಎಂದು ಆಟೋ ಗ್ರಾಫಿ ಹಾಕಿ ದ್ದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಎಸ್ ಸಿ ಮೋರ್ಚಾ ರಾಜ್ಯಾದ್ಯಕ್ಷರಾದ ಚಲವಾದಿ ನಾರಾಯಣ ಸ್ವಾಮಿ, ಬಿಜೆಪಿ ಪಕ್ಷದ ಅಭ್ಯರ್ಥಿ ದೊಡ್ಡನಗೌಡ ಎಚ್ ಪಾಟೀಲ್ , ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ಬಿಜೆಪಿ ತಾಲೂಕ ಅಧ್ಯಕ್ಷ ಬಸವರಾಜ ಹಳ್ಳೂರ ,ನಾಗರಾಜ ಮೇಲಿನಮನಿ ಹಾಗೂ ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.
ಆರ್ ಶರಣಪ್ಪ ಗುಮಗೇರಾ
ಕೊಪ್ಪಳ