This is the title of the web page
This is the title of the web page

Please assign a menu to the primary menu location under menu

Local News

ನಿಮ್ ಪೊಲೀಸರೇ ಮಾಸ್ಕ್ ಹಾಕಿಲ್ಲ : ಬೆಳಗಾವಿ DCPಗೆ ವೈದ್ಯೆ ಕ್ಲಾಸ್


ಬೆಳಗಾವಿ: ವೀಕೆಂಡ್ ಕರ್ಪ್ಯೂ ಸಂದರ್ಭದಲ್ಲಿ ತುರ್ತು ಸಂದರ್ಭದಲ್ಲಿ ತೆರಳೋದಕ್ಕೆ ಮಾತ್ರವೇ ಅವಕಾಶ ನೀಡಲಾಗಿದೆ. ಈ ವೇಳೆ ವೈದ್ಯೆಯೊಬ್ಬರು ಕೆಲಸಕ್ಕೆ ತೆರಳುತ್ತಿದ್ದಂತ ಸಂದರ್ಭದಲ್ಲಿ ಮಾಸ್ಕ್ ಹಾಕಿಲ್ಲ, ಹಾಕಿ ಅಂತ ಡಿಸಿಪಿ ಸೂಚಿಸಿದ್ದಾರೆ.

ಆಗ ನಡೆದುಕೊಂಡು ಹೋಗೋರು, ನಿಮ್ಮ ಪೋಲಿಸಿನವರೇ ಮಾಸ್ಕ್ ಹಾಕಿಲ್ಲ. ಕಾರಿನಲ್ಲಿ ಹೋಗೋ ನಮಗೆ ಮಾಸ್ಕ್ ಹಾಕಿ ಅಂತೀರಾ ಅಂತ ಡಿಸಿಪಿಯೊಂದಿಗೆ ಮೊಂಡಾಟತನ ಮೆರೆದಿರೋ ಘಟನೆ ಬೆಳಗಾವಿಯ ಚೆನ್ಮಮ್ಮ ವೃತ್ತದಲ್ಲಿ ನಡೆದಿದೆ.

ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ಇಂದು ವೀಕೆಂಡ್ ಕರ್ಪ್ಯೂ ಸಂದರ್ಭದಲ್ಲಿ ತಪಾಸಣೆಯಲ್ಲಿ ತೊಡಗಿದ್ದಂತ ಡಿಸಿಪಿ ರವೀಂದ್ರ ಹಾಗೂ ಎಸಿಪಿ ಸದಾಶಿವ ಕಟ್ಟೀಮನಿಯವರಿಗೆ, ಕಾರಿನಲ್ಲಿ ಮಾಸ್ಕ್ ಹಾಕದೇ ತೆರಳುತ್ತಿದ್ದಂತವನ್ನು ತೆಡಿದ್ದಾರೆ. ಮಾಸ್ಕ್ ಹಾಕಿಕೊಂಡು ಹೋಗಿ ಅಂತ ಸಲಹೆ ಮಾಡಿದ್ದಾರೆ. ಇಷ್ಟಕ್ಕೇ ಪೊಲೀಸರೊಂದಿಗೆ ಕಿರಿಕ್ ಗೆ ವೈದ್ಯೆ ಇಳಿದಿದ್ದಾರೆ.

ಅಲ್ಲ ಸಾರ್.. ನಿಮ್ಮ ಪೊಲೀಸ್ ನವರೇ ಎಷ್ಟೋ ಕಡೆ ಮಾಸ್ಕ್ ಹಾಕಿಲ್ಲದೇ ಇರೋದನ್ನು ನೋಡಿದ್ದೀನಿ. ದಾರಿಯಲ್ಲಿ ನಡೆದುಕೊಂಡು ಹೋಗೋ ಅನೇಕರು ಮಾಸ್ಕ್ ಇಲ್ಲದೇ ಹೋಗೋದನ್ನು ಗಮನಿಸಿದ್ದೀನಿ. ಅವರನ್ನು ಪ್ರಶ್ನಿಸದ ನೀವು, ಕಾರಿನಲ್ಲಿ ತೆರಳುತ್ತಿರೋ ನಮ್ಮನ್ನು ತಡೆದು ಹೀಗೆ ಮಾಡ್ತೀರಲ್ಲಾ ಅಂತ ಪ್ರಶ್ನಿಸಿದ್ದಾರೆ. ಇದಕ್ಕೆ ಡಿಸಿಪಿ ಹಾಗೂ ಎಸಿಪಿ ಮೇಡಂ ನಿಮ್ಮ ಆರೋಗ್ಯದ ಹಿತದೃಷ್ಠಿಯಿಂದ ಹೇಳ್ತಾ ಇರೋದು ಅಂದಿದ್ದಾರೆ.

ಆಯ್ತು ಎಲ್ಲರಿಗೂ ಒಂದೇ ರೂಲ್ಸ್ ಅಲ್ವಾ.. ಮಾಸ್ಕ್ ಇಲ್ಲದೇ ತೆರಳೋ ಎಲ್ಲರನ್ನು ಹೀಗೆ ತಡೆದು ಮಾಸ್ಕ್ ಹಾಕಿಸಿ. ನಿಮ್ಮ ಪೊಲೀಸ್ ನವರಿಗೂ ಎಲ್ಲರಿಗೂ ಮಾಸ್ಕ್ ಹಾಕುವಂತೆ ಸೂಚಿಸಿ ಅಂತ ಕೈಮುಗಿದು ಹೇಳಿ, ಮಾಸ್ಕ್ ಧರಿಸಿಕೊಂಡು ಅಲ್ಲಿಂದ ವೈದ್ಯೆ ತೆರಳಿರೋ ಘಟನೆ ನಡೆದಿದೆ.


Leave a Reply