ಬೆಳಗಾವಿ: ಬೆಳಗಾವಿ ಗುತ್ತಿಗೆದಾರ ಸಂತೋಷ ಪಾಟೀಲ ಸಾವಿಗೆ ಈಶ್ವರಪ್ಪ ಅವರ ಸಾವಿಗೆ ಈಶ್ವರಪ್ಪಾ ಅವರು ಕಾರಣ ಎಂದು ಡೆತ್ ನೋಟ್ ಬರೆದ್ದರೂ ಅವರನ್ನು ಇನ್ನು ಬಂಧಿಸಿಲ್ಲ ಈ ಪ್ರಕರಣದಲ್ಲಿ ಮೃತ ಸಂತೋಷ ಕುಟುಂಬಕ್ಕೆ ನ್ಯಾಯ ಸಿಗುವುದು ಅನುಮಾನ ಎಂದು ಆಮ್ ಆದ್ಮಿ ಮುಖಂಡ ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಹೇಳಿದರು.
ಶನಿವಾರ ನಗರದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಗುತ್ತಿಗೆದಾರ ಸಂತೋಷ 108 ಕಾಮಗಾರಿಗಳನ್ನು ಮಾಡಿರುವುದಾಗಿ ಮತ್ತು ನಾಲ್ಕು ಕೋಟಿ ರೂ. ಹಣ ಸರಕಾರ ನೀಡಬೇಕೆಂದು ದಾಖಲೆಗಳ ಸಮೇತ ಹೇಲಿದ್ದರು ಆದರೆ ಸರಕಾರ ಸೂಕ್ತ ತನಿಖೆ ಮಾಡಿಸಿ ಅವರ ಆತ್ಮಹತ್ಯೆಗೆ ನ್ಯಾಯ ಒದಗಿಸಿಕೊಡುವುದಾಗಿ ಹೇಳಲಿಲ್ಲ. ಈ ಪ್ರಕರಣದಲ್ಲಿ ಬೇರೆ ಯಾರಾದರೂ ಇದ್ದರೆ ಅವರ ಬಂಧನವಾಗುತ್ತಿತ್ತು. ಈಶ್ವರಪ್ಪ ಅವರನ್ನು ಇನ್ನೂ ಬಂಧಿಸಿಲ್ಲ ನ್ಯಾಯ ಸಿಗುವುದು ಅನುಮಾನ ಎಂದರು.
ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ಪ್ರಚಾರಕ್ಕೆ ಬಂದಾಗ 10% ಕಮಿಷನ್ ಸರಕಾರ ಎಂದು ಆರೋಪ ಮಾಡಿದ್ದರು. ಆದರೆ ಈಗ ಅವರ ಡಬಲ್ ಎಂಜಿನ್ ಸರಕಾರದಲ್ಲಿ 40% ಕಮಿಷನ್ ಆರೋಪ ಕೇಳಿ ಬರುತ್ತಿದೆ ಎರಡೂ ಪಕ್ಷದವರು ಭ್ರಷ್ಟಾಚಾರ ನಡೆಸಿದ್ದಾರೆ. ಇದರ ವಿರುದ್ಧ ಆಮ್ ಆದ್ಮಿ ಹೋರಾಟ ನಡೆಸುತ್ತದೆ ಎಂದರು.
ಕರ್ನಾಟಕದಲ್ಲಿ ರಾಷ್ಟ್ರೀಯ ಪಕ್ಷಗಳು ಭ್ರಷ್ಟಾಚಾರದಲ್ಲಿ ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಹೋಗುತ್ತಿದ್ದಾರೆ. ಪ್ರಾದೇಶಿಕ ಪಕ್ಷ ಇದ್ದರೂ ಜನರಿಗೆ ನ್ಯಾಯ ಸಿಗುತ್ತಿಲ್ಲ. ಆದ್ದರಿಂದ ಆಮ್ ಆದ್ಮಿ ಪಕ್ಷದಿಂದ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತೇವೆ ಎಂದರು.
ಈ ವೇಳೆ ಆಮ್ ಆದ್ಮಿ ಉತ್ತರ ವಲಯ ಉಸ್ತುವಾರಿ ರಾಜಕುಮಾರ ಟೋಪಣ್ಣವರ, ಜಿಲ್ಲಾಧ್ಯಕ್ಷ ವಿಜಯ ಪಾಟೀಲ, ಶಂಕರ ಹೆಗಡೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ನನಗೆ ಪಕ್ಷಗಳಾಗಲಿ ಮತ್ತು ಈಶ್ವರಪ್ಪಾ, ಶಾಸಕ ಲಕ್ಷ್ಮೀ ಹೆಬ್ಬಾಳ್ಕರ್ ಆಗಲಿ ನನಗೆ ಮುಖ್ಯವಲ್ಲ ಭ್ರಷ್ಟಾಚಾರ ಎನ್ನುವುದು ಪಕ್ಷಗಳಲ್ಲೇ ಇದೆ ಅದರ ವಿರುದ್ಧ ನನ್ನ ವಾಗ್ದಾಳಿ ಇದೆ ಎಂದರು.