This is the title of the web page
This is the title of the web page

Please assign a menu to the primary menu location under menu

Local News

ಬಸವಣ್ಣನವರ ತತ್ವಗಳು ಪ್ರತಿಯೊಬ್ಬರಿಗೂ ಆದರ್ಶ ಪ್ರಾಯ: ಡಾ.ಅಲ್ಲಮ ಪ್ರಭು ಸ್ವಾಮೀಜಿ


ಬೆಳಗಾವಿ:೨೪: ಜಗಜ್ಯೋತಿ ಬಸವಣ್ಣನವರ ತತ್ವ,ಆದರ್ಶಗಳು ಸಮಾಜದ ಪ್ರತಿಯೊಬ್ಬರಿಗೂ ದಾರಿ ದೀಪಗಳಿದ್ದಂತೆ,ಅವುಗಳನ್ನು ಅನುಸರಿಸಿ, ಸಂಸ್ಕಾರವಂತರಾಗಬೇಕು ಎಂದು ನಗರದ ನಾಗನೂರು ರುದ್ರಾಕ್ಷಿ ಮಠದ ಪ.ಪೂಜ್ಯ ಡಾ.ಅಲ್ಲಮಪ್ರಭು ಸ್ವಾಮೀಜಿಗಳು ಹೇಳಿದರು. ಅವರು ಜಾಗತಿಕ ಲಿಂಗಾಯತ ಮಹಾಸಭಾ (ರೀ) ಹಾಗೂ ಲಿಂಗಾಯತ ಸೇವಾ ಸಮಿತಿ ವಡಗಾವಿ, ಖಾಸಬಾಗ ಬೆಳಗಾವಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಶ್ರಾವಣ ಮಾಸ £ಮಿತ್ತ ‘ಜನಜಾಗೃತಿ ಪಾದಯಾತ್ರೆ ಮತ್ತು ರುದ್ರಾಕ್ಷಿ ಧಾರಣೆ’ ಕಾರ್ಯಕ್ರಮವನ್ನು ಉದ್ದಶಿಸಿ ಹಿತನುಡಿ £Ãಡಿ, ಮಾತನಾಡಿದರು.
ಪೂಜ್ಯರ ಸಾ£ಧ್ಯದಲ್ಲಿ ಪಾದಯಾತ್ರೆಯು ವಡಗಾವಿಯ ಸಂಭಾಜಿ ನಗರದ ಗಣೇಶ ಗುಡಿಯಿಂದ ಶುರುವಾಗಿ ಪಾಟೀಲ ಗಲ್ಲಿ, ವಜ್ಜೆಗಲ್ಲಿ, ಚಾವಡಿಗಲ್ಲಿಯಿಂದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದವರೆಗೆ ಸಾಗಿತು.ನಂತರ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಮುಖ್ಯ ಕಾರ್ಯಕ್ರಮ ನಡೆಯಿತು.ಈ ಪಾದಯಾತ್ರೆಯಲ್ಲಿ ಜಾಗತಿಕ ಲಿಂಗಾಯತ ಮಹಾಸಭೆಯ ಅಧ್ಯಕ್ಷರಾದ ಶ್ರೀ ರೊಟ್ಟಿ, ಹಾಗೂ ಲಿಂಗಾಯತ ಸೇವಾ ಸಮಿತಿ ಅಧ್ಯಕ್ಷರಾದ ಡಾ. ಎಸ್ ಎಂ ದೊಡ್ಡಮ£ , ಮಾಜಿ ನಗರಸೇವಕ ಶ್ರೀ ದೀಪಕ್ ಜಮಖಂಡಿ, ನಗರ ಸೇವಕಿ ಸಾರಿಕಾ ಪಾಟೀಲ್,ಅಶೋಕ ಮಳಗಲಿ, ಸಿ ಎಮ್ ಬೂದಿಹಾಳ,ಜೊತೆಗೆ ಸಮಾಜದ ಮುಖಂಡರಾದ ಸಂಜಯ್ ಜಮಖಂಡಿ, ಸಂಜಯ್ ಅಂಗಡಿ, ರಾಜು ಕುಂದುಗೊಳ, ಮಹಾಂತೇಶ್ ವಾಲಿ,ಆನಂದ್ ಹರತಿ ಹಾಗೂ ಲಿಂಗಾಯತ ಮಹಿಳಾ ಮಂಡಲದ ಎಲ್ಲ ಶರಣೆಯರು ಹಾಗೂ ಕುರುವಿನ ಶೆಟ್ಟಿ ಸಮಾಜದ ಎಲ್ಲ ಹಿರಿಯರು,ಅಪಾರ ಸಂಖ್ಯೆಯಲ್ಲಿ ಸಾರ್ವಜ£ಕರು ಪಾಲ್ಗೊಂಡಿದ್ದರು


Leave a Reply