This is the title of the web page
This is the title of the web page

Please assign a menu to the primary menu location under menu

State

ರುದ್ರಾಕ್ಷಿ ಧಾರಣೆ ಮಾಡುವ ಮೂಲಕ ಧರ್ಮ ಜಾಗೃತಿಯಲ್ಲಿ ತೊಡಗಿರುವ ಡಾ. ಅಲ್ಲಮಪ್ರಭು ಸ್ವಾಮೀಜಿ


ಬೆಳಗಾವಿ  : ಬೆಳಗಾವಿ ನಗರದಲ್ಲಿ ಧರ್ಮ ಜಾಗೃತಿಗಾಗಿ ಪರಮಪೂಜ್ಯ ಡಾ. ಅಲ್ಲಮಪ್ರಭು ಸ್ವಾಮಿಜಿ ಪಾದಯಾತ್ರೆ ಕಾರ್ಯಕ್ರಮವನ್ನು ಆರಂಭಿಸಿದ್ದಾರೆ. ಶರಣ ಶರಣೆಯರಿಗೆ ರುದ್ರಾಕ್ಷಿ ಧಾರಣೆ ಮಾಡುವ ಮೂಲಕ ಧರ್ಮ ಜಾಗೃತಿಯನ್ನು ಮೂಡಿಸಿದರು.
ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ರಾಷ್ಟ್ರೀಯ ಬಸವ ಸೇನೆ ಬೆಳಗಾವಿ ಜಿಲ್ಲಾ ಘಟಕ ವತಿಯಿಂದ ಬಸವ ಜಯಂತಿ ನಿಮಿತ್ಯ ಬೆಳಗಾವಿ ನಗರದಲ್ಲಿ ಪ್ರತಿ ವಾರ್ಡಿನಲ್ಲಿ ದಿನಾಲು ಧರ್ಮಜಾಗೃತಿ ಪಾದಯಾತ್ರೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ವೇಳೆ ಪೂ. ಶ್ರೀ ಡಾ. ಅಲ್ಲಮಪ್ರಭು ಸ್ವಾಮೀಜಿ ಅವರ ಮಾರ್ಗದರ್ಶನದಲಿ,್ಲ ಹಲವಾರು ಪೂಜ್ಯರ ಉಪಸ್ಥಿತಿಯಲ್ಲಿ ಧರ್ಮಜಾಗೃತಿ ಪಾದಯಾತ್ರೆ ನಡೆಸಲಾಯಿತು. ಇವತ್ತಿನ ದಿನ ಕಣÀಬರ್ಗಿ ಬಸ್ ಸ್ಟ್ಯಾಂಡ್ ನಿಂದ ವಿಠ್ಠಲ್ ಮಂದಿರ ವರೆಗೆ ನಡೆದ ಪಾದಯಾತ್ರೆ ತುಂಬಾ ಅತ್ಯದ್ಭುತವಾಗಿತ್ತು. ಈ ವೇಳೆ ಪೂಜ್ಯರು ಜೊತೆಗೆ ಬಂದAತಹ ಎಲ್ಲಾ ಶರಣ-ಶರಣರಿಗೆ ಪೂಜ್ಯರು ರುದ್ರಾಕ್ಷಿ ಧಾರಣೆ ಮಾಡಿದರು.
ಈ ವೇಳೆ ಮಾತನಾಡಿದ ಭಕ್ತರು, ನಾವೆಲ್ಲ ಪುಣ್ಯವಂತರು. ಶ್ರೀಗಳು ನಮ್ಮ ಮನೆಮನೆಗೆ ಬಂದು ಇಂದು ರುದ್ರಾಕ್ಷಿ ದೀಕ್ಷೆಯನ್ನು ನೀಡುತ್ತಿದ್ದಾರೆ. ಅಲ್ಲದೇ ಪ್ರವಚನ ನಡೆದಾಗಲೂ ಕೂಡ ಶ್ರೀಗಳು ಮನೆಗೆ ಬಂದು ನಮ್ಮನ್ನು ಆಹ್ವಾನಿಸುತ್ತಾರೆ. ಹಾಗಾಗಿ ಸ್ವಾಮಿಜಿರವರ ಕಾರ್ಯಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ,ಧನ್ಯತಾ ಭಾವವನ್ನು ಹೊರಹಾಕಿದರು.
ಇದೇ ವೇಳೆ ಮಾತನಾಡಿದ ಸ್ವಾಮಿಜಿರವರು, ಬೆಳಗಾವಿಯಲ್ಲಿ ಧರ್ಮಜಾಗೃತಿಗಾಗಿ ನಾವು ಪಾದಯಾತ್ರೆಯನ್ನು ಮಾಡುತ್ತಿದ್ದೇವೆ. ಇನ್ನು ಪ್ರತೀ ದಿನ ಸಂಜೆ ಆರ್‌ಎನ್ ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ಸಾಯಂಕಾಲ ಪ್ರವಚನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಜಗಜ್ಯೋತಿ ಬಸವೇಶ್ವರ ಜೀವನ ಸಂದೇಶವನ್ನು ಕುರಿತಂತೆ ಪೂಜ್ಯ ಶ್ರೀ ಬಸವಾನಂದ ಮಹಾಸ್ವಾಮಿಗಳು ಪ್ರವಚನವನ್ನು ನೀಡುತ್ತಾರೆ. ನಂತರ ಎಲ್ಲರಿಗೂ ಪ್ರಸಾದ ಕಾರ್ಯಕ್ರಮವನ್ನು ನೆರವೇರಿಸಲಾಗುತ್ತದೆ. ಎಂದು ಕಾರ್ಯಕ್ರಮ ಕುರಿತು ಮಾತನಾಡಿದರು.
ಈ ವೇಳೆ ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ರಾಷ್ಟ್ರೀಯ ಬಸವ ಸೇನೆಯ ಜಿಲ್ಲಾ ಅಧ್ಯಕ್ಷರು ಮತ್ತು ಸದಸ್ಯರು ಪಾದಯಾತ್ರೆಯಲ್ಲಿ ಭಾಗಿಗಳಾಗಿದ್ದರು. ಈ ವೇಳೆ ಆಯಾ ವಾರ್ಡಿನ ನಗರಸೇವಕರು ಉಪಸ್ಥಿತರಿದ್ದರು.


Leave a Reply