This is the title of the web page
This is the title of the web page

Please assign a menu to the primary menu location under menu

Local News

ಕಾವ್ಯ ಪ್ರೋತ್ಸಾಹಕ್ಕೆ ವಾತಾವರಣ ನಿರ್ಮಿಸಬೇಕಿದೆ : ಡಾ. ಆನಂದ ಪಾಟೀಲ


ಬೆಳಗಾವಿ ಆ.,೨೮- ಹೊಂಬೆಳಕು ಸಾಂಸ್ಕೃತಿಕ ಸಂಘ (ರಿ) ಬೆಳಗಾವಿ ಇವರು ೭೭ನೇ ಸ್ವಾತಂತ್ರೊö್ಯÃತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ಬಹುಭಾಷಾ ಕವಿಗೋಷ್ಠಿಯನ್ನು ಉದ್ಘಾಟಿಸಿದ ವಿಶ್ರಾಂತ ಆಕಾಶವಾನಿ ನಿರ್ದೇಶಕರು ಹಾಗೂ ಅಂತರ ರಾಷ್ಟ್ರೀಯ ಮಕ್ಕಳ ಸಾಹಿತಿಗಳಾದ ಡಾ. ಆನಂದ ಪಾಟೀಲರವರು ಇಂದಿನ ಕಾವ್ಯಕ್ಕೆ ಸೂಕ್ತವಾದ ವಾತಾವರಣ ನಿರ್ಮಿಸುವುದು ಅಗತ್ಯವೆಂದರು. ಸಣ್ಣ ಗುಂಪುಗಳಲ್ಲಿ ಕಾವ್ಯ ವಾಚನ ಮತ್ತು ಚರ್ಚೆ ಇಂತಹ ವಾತಾವರಣ ನಿರ್ಮಿಸಬಲ್ಲವು ಎಂದು ಹೇಳುತ್ತ ಈ ಕಾರ್ಯವನ್ನು ಕೈಗೊಳ್ಳುತ್ತಿರುವ ಹೊಂಬೆಳಕು ಸಾಂಸ್ಕೃತಿ ಸಂಘವನ್ನು ಶ್ಲಾಘಸಿದರು.
ಅತಿಥಿಗಳಾಗಿ ಭಾಗವಹಿಸಿದ ಬೆಳಗಾವಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಬಸಮ್ಮ ಗಂಗನಳ್ಳಿ ಅವರು ಮಾತನಾಡುತ್ತ ಇಲ್ಲಿ ಪ್ರಸ್ತುತಗೊಂಡ ಎಲ್ಲ ಭಾಷೆಯ ಕವನಗಳು ಮಾರ್ಮಿಕವಾಗಿಯೂ ಹಾಗೂ ಅರ್ಥಗರ್ಭಿತವಾಗಿದ್ದವು ಎಂದರು. ಕವನ ರಚನೆಯಲ್ಲಿ ರಸಕ್ಕೆ ಪ್ರಧಾನ್ಯತೆ ಕೊಡಬೇಕೆಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷರಾದ ಸ.ರಾ.ಸುಳಕೂಡೆಯವರು ಕಾವ್ಯ ಪ್ರಕಾಶಕ್ಕೆ ಮನೆ ಮನೆಯಲ್ಲಿಯೂ ವಾಕ್ಯನ ಹುಟ್ಟಿದ್ದರು ಎಂದಿನಂತೆ ಇಂದು ಕಾವ್ಯ ರಚನೆ ಕ್ಲೀಷ್ಟಕರವಾಗಿ ಉಳಿದಿದೆ. ಇಲ್ಲಿ ಪ್ರಸ್ತುತಗೊಂಡ ಕವನಗಳು ಓದುವ ಕವನಗಳಾಗಿದ್ದು, ಬದುಕಿನ ಭಾಷೆ ಬದಲಾಗಿದೆ ಅದರಂತೆ ಕಾವ್ಯದ ಅಭಿವ್ಯಕ್ತಿಯು ಬದಲಾಗಬೇಕು ಎಂದರು.
ಸ್ವಾಗತ ಹಾಗೂ ಪ್ರಸ್ತಾವಿಕವಾಗಿ ಮಾತನಾಡಿದ ಸಂಘದ ಕಾರ್ಯದರ್ಶಿ ಆರ್.ಬಿ.ಬನಶಂಕರಿಯವರು ಸಂಘದ ೨೫ ವರ್ಷಗಳ ಕಾರ್ಯ ಚಟುವಟಿಕೆಗಳ ಬಗ್ಗೆ ಪ್ರಸ್ತಾಪಿಸಿ, ಆಗಾಗ ಈ ಸಂಘವು ಬಹುಭಾಷೆ ಕವಿಗೋಷ್ಠಿಗಳನ್ನು, ವಿಚಾರ ಸಂಕಿರಣಗಳನ್ನು ಹಾಗೂ ಪುಸ್ತಕ ಪ್ರಶಸ್ತಿಗಳನ್ನು ನೀಡುತ್ತಿರುವ ಬಗ್ಗೆ ಸಾಹಿತ್ಯಾಸಕ್ತರ ಗಮನಕ್ಕೆ ತಂದು ಸರ್ವರನ್ನು ಸ್ವಾಗತಿಸಿದರು.
ಈ ಬಹುಭಾಷಾ ಕವಿಗೋಷ್ಠಿಯಲ್ಲಿ ಅಶೋಕ ಮಳಗಲಿ, ಲೀಲಾ ರಜಪೂತ, ಇಂದಿರಾ ಮೋಟೆಬೆನ್ನೂರ, ಮಮತಾ ಶಂಕರ, ಡಾ. ದಾನಮ್ಮ ಝಳಕಿ, ನದೀಮ ಸನದಿ, ಡಾ. ವೈಷ್ಣವಿ ಕಥವಟೆ, ಡಾ. ಪ್ರೇಮಾ ಮಣಸಿ, ಆನಂದ ಮಣಸಿ, ಬಿ.ಹೆಚ್. ಶಿಗೀಹಳ್ಳಿ, ಸೂರ್ಯಸಖಾ ಪ್ರಸಾದ ಕುಲಕರ್ಣಿ, ಕುಮಾರಿ ಮೇಹೆಕ ಮಕಾಂದರ, ಜ್ಯೋತಿ ಮುರಾಳೆ, ಬಸವರಾಜ ಘೋಡಗೇರಿ, ಬಾಳಗೌಡ ದೊಡಬಂಗಿ, ನೀ.ರಾ.ಗೋಣಿ, ಡಾ. ಶೋಭಾ ಆರ್. ಬನಶಂಕರಿ ಭಾಗವಹಿಸಿ ಕನ್ನಡ, ಆಂಗ್ಲ, ಉರ್ದು, ಹಿಂದಿ ಹಾಗೂ ಮರಾಠಿ ಭಾಷೆಗಳ ಕವನಗಳನ್ನು ವಾಚಿಸಿದರು.
ಕವಿಗೋಷ್ಠಿಯ ನಿರೂಪಣೆಯನ್ನು ಕವಯತ್ರಿ ಲೀಲಾ ರಜಪೂತ ಅವರು ನಿರ್ವಹಿಸಿದರು. ಈ ಸಮಾರಂಭದಲ್ಲಿ ಬಸವರಾಜ ಗಾರ್ಗಿ, ಸಂಪತ್‌ಕುಮಾರ ಮುಚಳಂಬಿ, ಸಂಜು ಮುರಾಳ, ಅನಿತಾ ಬೆಳವಿ ಹಾಗೂ ಡಾ. ಆರತಿ ಬೆಳವಿಯವರು ಉಪಸ್ಥಿತರಿದ್ದರು. ಗೋಷ್ಠಿಯಲ್ಲಿ ಭಾಗವಹಿಸಿದ ಎಲ್ಲರಿಗೂ ಕ.ಸಾ.ಪ ಜಿಲ್ಲಾ ಕಾರ್ಯದರ್ಶಿ ಮಹಾಂತೇಶ ಮೆಣಸಿನಕಾಯಿಯವರು ವಂದನಾರ್ಪಣೆಯನ್ನು ಸಲ್ಲಿಸಿದರು.


Leave a Reply