This is the title of the web page
This is the title of the web page

Please assign a menu to the primary menu location under menu

Local News

ಡಾ. ಅನುಪಮ ಉತ್ನಾಳ ಅವರ ಕೃತಿಗಳ ಲೋಕಾರ್ಪಣೆ: ಜೂ.೨೭ ರಂದು


ಬೆಳಗಾವಿ,ಜೂನ್೨೪: ಹಂಪಿ ಕನ್ನಡ ವಿಶ್ವವಿದ್ಯಾಲಯ ಬೆಳಗಾವಿ ಅಧ್ಯಯನ ಕೇಂದ್ರದ ಡಾ.ಆ.ನೇ.ಉಪಾಧ್ಯೆ ವಿಸ್ತರಣ ಕೇಂದ್ರ ಮತ್ತು ಅಥಣಿಯ ಅನುಪಮಾ ಪ್ರಕಾಶನ ಇವುಗಳ ಸಂಯುಕ್ತ ಆಶ್ರಯದಲ್ಲಿ ಜೂನ್೨೭ ರಂದು ಮುಂಜಾನೆ ೧೦.೩೦ ಗಂಟೆಗೆ ಬೆಳಗಾವಿ ಕಿತ್ತೂರ ರಾಣಿ ಚೆನ್ನಮ್ಮ ವೃತ್ತದ ಹತ್ತಿರ ಇರುವ ಕನ್ನಡ ಸಾಹಿತ್ಯ ಭವನದಲ್ಲಿ ಡಾ.ಆ.ನೇ.ಉಪಾಧ್ಯೆ ವಿಸ್ತರಣ ಕೇಂದ್ರ ಸಹಾಯಕ ಪ್ರಾಧ್ಯಾಪಕರಾದ ಡಾ.ಅನುಪಮ ಸಿ.ಉತ್ನಾಳ ಅವರ ಕೃತಿಗಳ ಲೋಕಾರ್ಪಣಾ ಕಾರ್ಯಕ್ರಮ ನಡೆಯಲಿದೆ.
ಖ್ಯಾತ ವಿದ್ವಾಂಸರಾದ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಸ.ಚಿ.ರಮೇಶ ಅವರು ಕೃತಿಗಳ ಲೋಕಾರ್ಪಣೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕನ್ನಡ ವಿಶ್ವವಿದ್ಯಾಲಯದ ಕರ‍್ಯಕಾರಿ ಸಮಿತಿ ಸದಸ್ಯರಾದ ಪ್ರೊ. ಹೆಚ್.ಎಂ.ಚನ್ನಪ್ಪಗೊಳ ಅವರು ಅಧ್ಯಕ್ಷರಾಗಿ ಹಿರಿಯ ಕವಿಗಳಾದ ಡಾ.ಜಿನದತ್ತ ದೇಸಾಯಿ ಅವರು ಉಪಸ್ಥಿತರಿರಲಿದ್ದಾರೆ.
ಚಿಂತನ ಸನ್ನಿಧಿ, ಕನ್ನಡ ಜಾನಪದ ಶಾಸ್ತ್ರಕ್ಕೆ ಎಸ್.ಎಸ್.ಅಂಗಡಿ ಅವರ ಕೊಡುಗೆ, ನಾಲ್ಕನೆಯ ಆಯಾಮ ಒಂದು ವಿಶ್ಲೇಷಣೆ, ನಿಜ ಶರಣ ಅಂಬಿಗರ ಚೌಡಯ್ಯ(ನಾಟಕ) ಹಾಗೂ ಪ್ರಿಯ ಸಾಯಿ, ತ್ಯಾಗವೀರ ಶಿರಸಂಗಿ ಲಿಂಗರಾಜರು ಕೃತಿಗಳನ್ನು ನಾಡಿನ ಖ್ಯಾತ ಸಾಹಿತಿಗಳು ಪರಿಚಯಿಸಲಿದ್ದಾರೆ ಎಂದು ಅನುಪಮ ಪ್ರಕಾಶನದ ಡಾ.ಸಿದ್ದಣ್ಣ ಉತ್ನಾಳ ಅವರು ಮತ್ತು ಡಾ.ಆ.ನೇ.ಉಪಾಧ್ಯೆ ವಿಸ್ತರಣ ಕೇಂದ್ರದ ಮುಖ್ಯಸ್ಥರಾದ ಡಾ.ಎಸ್.ಎಸ್.ಅಂಗಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply