This is the title of the web page
This is the title of the web page

Please assign a menu to the primary menu location under menu

State

ಡಂಬಳದಲ್ಲಿ ಸಾಂಪ್ರದಾಯಿಕ ಉಡುಗೆಯೊಂದಿಗೆ ಕಾಲ್ನಡಿಗೆ ಜಾಥಾ ನಿಷ್ಕಾಳಜಿ ತೋರದೇ ನೈತಿಕ ಮತದಾನ ಮಾಡಿ : ಡಾ.ಬಿ.ಸುಶೀಲಾ


ಗದಗ ಮೇ ೫: ಮತದಾನ ಪ್ರಜಾಪ್ರಭುತ್ವದ ಹಬ್ಬ. ಮೇ ೧೦ರಂದು ಜರುಗುವ ಮತದಾನದಲ್ಲಿ £ಷ್ಕಾಳಜಿ ತೋರದೇ ನೈತಿಕವಾಗಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳೋಣ. ಇತರರನ್ನು ಮತದಾನದಿಂದ ಹೊರಗುಳಿಯದಂತೆ ಮತ ಚಲಾಯಿಸಲು ಪ್ರೇರೇಪಿಸಬೇಕು ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಡಾ. ಬಿ. ಸುಶೀಲಾ ಅವರು ಹೇಳಿದರು.
ಶುಕ್ರವಾರ ಮುಂಡರಗಿ ತಾಲೂಕಿನ ಡಂಬಳ ಗ್ರಾಮದಲ್ಲಿ ಕಡ್ಡಾಯ ಮತದಾನ ಹಾಗೂ ಮತದಾನ ಜಾಗೃತಿಗಾಗಿ ಜಿಲ್ಲಾ ಹಾಗೂ ತಾಲೂಕಾ ಸ್ವೀಪ್ ಸಮಿತಿಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾಲ್ನಡಿಗೆ ಜಾಥಾ, ಆಹ್ವಾ£ತ ಕುಸ್ತಿ ಪಂದ್ಯಾವಳಿ ಕಾರ್ಯಕ್ರಮಕ್ಕೆ ಚಾಲನೆ £Ãಡಿ ಅವರು ಮಾತನಾಡಿದರು. ಅರ್ಹ ಮತದಾರರು ತಪ್ಪದೇ ಮತ ಚಲಾಯಿಸುವುದರಿಂದ ಪ್ರಜಾಪ್ರಭುತ್ವ ಗಟ್ಟಿಗೊಳ್ಳುತ್ತದೆ. ಹಾಗಾಗಿ ಎಲ್ಲರೂ ತಪ್ಪದೇ ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಬೇಕು. ಬೇರೆ ಸ್ಥಳಗಳಲ್ಲಿ ವಾಸವಿರುವ £ಮ್ಮ ಸಂಬಂಧಿಕರು, ನೆಂಟರ ಮತಗಳು ವ್ಯರ್ಥವಾಗದಂತೆ ಎಲ್ಲರಿಗೂ ತಿಳಿಸಿ ಮೇ೧೦ರಂದು ತಪ್ಪದೇ ಮತ ಚಲಾಯಿಸಲು ಮಾಹಿತಿ £Ãಡಿ ಎಂದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಬಿ.ಎಸ್.ನೇಮಗೌಡ ಮಾತನಾಡಿ ಮೇ ೧೦ ರಂದು ಅತ್ಯಂತ ಕಾಳಜಿಯಿಂದ ಮತದಾನ ಮಾಡಿ. ಎಲ್ಲರಿಗೂ ತಿಳುವಳಿಕೆ ಹೇಳುವ ಮೂಲಕ ಮತದಾನ ಮಾಡಿಸಿ. £ರ್ಭೀತ ಮತದಾನಕ್ಕಾಗಿ ಪೊಲೀಸ್ ಇಲಾಖೆ £ಮ್ಮ ಜೊತೆಗಿದೆ ಎಂದರು.
ಇದಕ್ಕೂ ಮುನ್ನ ಸಶಸ್ತ್ರ ಸೀಮಾ ಬಲ ತಂಡದೊಂದಿಗೆ ತಾಲೂಕಿನ ಸರಕಾರಿ ನೌಕರರು, ಗ್ರಾಪಂ ಸಿಬ್ಬಂದಿ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದ ಮತದಾನ ಜಾಗೃತಿ ಕಾಲ್ನಡಿಗೆ ಜಾಥಾ ತೋಂಟದಾರ್ಯ ಕಲಾಭವನದ ಆವರಣದಿಂದ ಆರಂಭಗೊಂಡು ಗ್ರಾಮದ ಮೇನ್ ಬಜಾರ್ ಮಾರ್ಗವಾಗಿ ಪ್ರಮುಖ ಬೀದಿಗಳಲ್ಲಿ ಹಾಯ್ದು ಆಹ್ವಾ£ತ ಕುಸ್ತಿ ಪಂದ್ಯಾವಳಿ ನಡೆಯುವ ಸರಕಾರಿ ಹಿರಿಯ ಬಾಲಕಿಯರ ಪ್ರಾಥಮಿಕ ಶಾಲೆಗೆ ತಲುಪಿತು. ಇನ್ನು ಇದೇ ವೇಳೆ ಮುಂಡರಗಿ ತಾಲೂಕು ಪಂಚಾಯತ ಹಾಗೂ ವಿವಿಧ ಗ್ರಾಮ ಪಂಚಾಯತ ಸಿಬ್ಬಂದಿಗಳು ಪಾರಂಪರಿಕ ಹಾಗೂ ಸಾಂಸ್ಕöÈತಿಕ ವೇಷಭೂಷಣ ಧರಿಸಿ ಪಾಲ್ಗೊಳ್ಳುವ ಮೂಲಕ ಗಮನಸೆಳೆದರು.
ನಂತರ ಮತದಾನ ಜಾಗೃತಿ ಉದ್ದೇಶದಿಂದ ಗ್ರಾಮೀಣ ಕ್ರೀಡೆ ಉತ್ತೇಜಿಸುವ ಇರಾದೆಯಲ್ಲಿ ಜಿಲ್ಲಾ ಚುನಾವಣಾ ರಾಯಭಾರಿ ಹಾಗೂ ಅಂತರಾಷ್ಟ್ರೀಯ ಕುಸ್ತಿಪಟು ಪ್ರೇಮಾ ಹುಚ್ಚಣ್ಣವರ ಅವರ ತಂಡದಿಂದ ಸರಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಆಹ್ವಾ£ತ ಕುಸ್ತಿ ಪಂದ್ಯಗಳು ನಡೆದವು. ಗ್ರಾಮದ ಪೈಲ್ವಾನ ಮೈಲಾರೆಪ್ಪ ಮೂಲಿಮ£ ಅವರಿಂದ ವಿವಿಧ ಕೆಜಿಯ ಭಾರದ ಕಲ್ಲು ಎತ್ತುವ ಪ್ರದರ್ಶನ ಸಹ ನಡೆಯಿತು.
ಈ ಸಂದರ್ಭದಲ್ಲಿ ಮುಖ್ಯ ಯೋಜನಾಧಿಕಾರಿ ವಾಗೀಶ ಶಿವಾಚಾರ್ಯ, ತಾಪಂ ಕಾರ್ಯ£ರ್ವಾಹಕ ಅಧಿಕಾರಿ ಡಾ.ಯುವರಾಜ ಹನಗಂಡಿ, ಸಹಾಯಕ £ರ್ದೇಶಕ ವಿಶ್ವನಾಥ ಹೊಸಮ£ (ಗ್ರಾ.ಉ), ಮಂಜುಳಾ ಬಾರಕೇರ, ಸಹಾಯಕ £ರ್ದೇಶಕರು (ಪಂಚಾಯತ್ ರಾಜ್) ಜಿಲ್ಲೆಯ ಎಲ್ಲ ತಾಲೂಕಿನ ತಾಲೂಕು ಪಂಚಾಯತ್ ಸಿಬ್ಬಂದಿ, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯತ್ ನೌಕರರು ಹಾಗೂ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು. ಗ್ರಾಮದ ಮಾಜಿ ಪೈಲ್ವಾನರಾದ ಮರಿತಮ್ಮಪ್ಪ ಆದಮ್ಮನವರ, ದೇವಪ್ಪ ಗಡಾದ, ಹೊನ್ನಪ್ಪ ಪೈಲ್ವಾನ ಹಾಗೂ ಇತರರು ಇದ್ದರು.


Leave a Reply