This is the title of the web page
This is the title of the web page

Please assign a menu to the primary menu location under menu

State

ಕಡ್ಡಾಯ ಮತದಾನದಿಂದ ಪ್ರಜಾಪ್ರಭುತ್ವ ಸದೃಢ: ಜಿಪಂ ಸಿಇಓ ಡಾ.ಬಿ.ಸುಶೀಲಾ


ಮುಂಡರಗಿ: ಭಾರತದ ಸಂವಿಧಾನ ಜಾತಿ, ಧರ್ಮ, ಬಡವ ಶ್ರೀಮಂತ ಎನ್ನದೆ ಎಲ್ಲರಿಗೂ ಸಮಾನತೆಯಿಂದ ಮತ ಚಲಾಯಿಸುವ ಹಕ್ಕು £Ãಡಿದೆ. ಆ ಹಕ್ಕನ್ನು ಮೇ ೧೦ ರಂದು ಚಲಾಯಿಸದೆ £ರ್ಲಕ್ಷ÷್ಯ ವಹಿಸದಿರಿ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ£ರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಡಾ.ಬಿ. ಸುಶೀಲಾ ಅವರು ಕರೆ £Ãಡಿದರು.
ಮಂಗಳವಾರ ಮುಂಡರಗಿ ಪಟ್ಟಣದಲ್ಲಿ ಕಡ್ಡಾಯ ಮತದಾನ ಹಾಗೂ ಮತದಾನ ಜಾಗೃತಿಗಾಗಿ ಜಿಲ್ಲಾ ಹಾಗೂ ತಾಲೂಕಾ ಸ್ವೀಪ್ ಸಮಿತಿಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾಲ್ನಡಿಗೆ ಜಾಥಾ ಕಾರ್ಯಕ್ರಮಕ್ಕೆ ಚಾಲನೆ £Ãಡಿ ಮಾತನಾಡಿದರು.
ಅರ್ಹ ಮತದಾರರು ತಪ್ಪದೇ ಮತ ಚಲಾಯಿಸುವುದರಿಂದ ಪ್ರಜಾಪ್ರಭುತ್ವ ಗಟ್ಟಿಗೊಳ್ಳುತ್ತದೆ. ಹಾಗಾಗಿ ಎಲ್ಲರೂ ತಪ್ಪದೇ ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಬೇಕು. ಬೇರೆ ಸ್ಥಳಗಳಲ್ಲಿ ವಾಸವಿರುವ £ಮ್ಮ ಸಂಬಂಧಿಕರು, ನೆಂಟರ ಮತಗಳು ಮುಂಡರಗಿ ಪಟ್ಟಣದಲ್ಲಿದ್ದರೆ ಎಲ್ಲರಿಗೂ ತಿಳಿಸಿ ಮೇ ೧೦ ರಂದು ತಪ್ಪದೇ ಮತ ಚಲಾಯಿಸಲು ಮಾಹಿತಿ £Ãಡಿ ಎಂದರು.
ನಂತರ ತಾಲೂಕಿನ ಎಲ್ಲ ಇಲಾಖೆಗಳ ಸರಕಾರಿ ನೌಕರರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದ ಮತದಾನ ಜಾಗೃತಿ ಕಾಲ್ನಡಿಗೆ ಜಾಥಾ ತಾಲೂಕು ಪಂಚಾಯತ ಆವರಣದಿಂದ ಬಸ್ £ಲ್ದಾಣದ ಮಾರ್ಗವಾಗಿ ಮಾರುಕಟ್ಟೆ ಮೂಲಕ ತಹಶೀಲದಾರ ಕಚೇರಿವರೆಗೆ ಸಂಚರಿಸಿತು. ಈ ವೇಳೆ ಮಾರ್ಗಮಧ್ಯೆ ಕೊಪ್ಪಳ ಕ್ರಾಸ್‌ನಲ್ಲಿ ಮಾನವ ಸರಪಳಿ £ರ್ಮಿಸಿ ಮತದಾನದ ಘೋಷಣೆಗಳನ್ನು ಕೂಗಿದ್ದು ವಿಶೇಷವಾಗಿತ್ತು. ಇನ್ನು ಇದೇ ವೇಳೆ ಬಂಜಾರ ಸಮುದಾಯದವರು ತಮ್ಮ ಪಾರಂಪರಿಕ ಸಾಂಸ್ಕöÈತಿಕ ನೃತ್ಯದ ಮೂಲಕ ಗಮನಸೆಳೆದರು.
ಕಾಲ್ನಡಿಗೆ ಜಾಥಾ ತಹಶೀಲ್ದಾರ ಕಚೇರಿಗೆ ಆಗಮಿಸಿದ ವೇಳೆ ಮಾತನಾಡಿದ ತಾಲೂಕು ಪಂಚಾಯತ ಕಾರ್ಯ£ರ್ವಾಹಕ ಅಧಿಕಾರಿ ಡಾ.ಯುವರಾಜ ಹನಗಂಡಿ ಅವರು, ನಾವೆಲ್ಲ ಭಾರತದ ಸಂವಿಧಾನದ ಅಡಿ ಮತದಾನದ ಹಕ್ಕನ್ನು ಬಳಸಿಕೊಳ್ಳುವ ಮೂಲಕ ಸದೃಢ ನಾಳೆಗಳಿಗಾಗಿ ಮತದಾನದ ಹಕ್ಕನ್ನು ತಪ್ಫದೇ ಚಲಾಯಿಸೋಣ ಎಂದರು.
ಇದೇ ವೇಳೆ ಮಾತನಾಡಿದ ತಹಶೀಲ್ದಾರ್ ಶ್ರುತಿ ಮಳ್ಳಪ್ಪಗೌಡರ ಅವರು, ಮೇ೧೦ ರಂದು ಮತದಾನ ಮಾಡುವ ಅರ್ಹ ಮತದಾರರ ಜವಾಬ್ದಾರಿ ಹಬ್ಬ ಸಂಭ್ರಮದಂತಿರಲಿ. ಸಾರ್ವಜ£ಕರು ತಮ್ಮ ನೆರೆ ಹೊರೆಯಲ್ಲೂ ಉಳಿದವರಿಗೆ ಮತದಾನದ ಬಗೆಗೆ ಜಾಗೃತಿ ಮೂಡಿಸಿ ಮತ ಹಾಕಲು ತಿಳುವಳಿಕೆ ಮೂಡಿಸಬೇಕು ಎಂದರು.
ಈ ಸಂದರ್ಭದಲ್ಲಿ ಮುಖ್ಯ ಯೋಜನಾಧಿಕಾರಿ ವಾಗೀಶ ಶಿವಾಚಾರ್ಯ, ಸಹಾಯಕ £ರ್ದೇಶಕ (ಗ್ರಾ.ಉ) ವಿಶ್ವನಾಥ ಹೊಸಮ£, ಸರಕಾರಿ ನೌಕರರ ಸಂಘದ ತಾಲೂಕಾ ಘಟಕದ ಅಧ್ಯಕ್ಷ ನಾಗರಾಜ ಹಳ್ಳಿಕೇರಿ, ಪುರಸಭೆ ಮುಖ್ಯಾಧಿಕಾರಿ ಎಂ.ಎ. ನೂರುಲ್ಲಾಖಾನ್, ಕ್ಷೇತ್ರ ಶಿಕ್ಷಣಾಧಿಕಾರಿ ಎಫ್.ಎ.ಬಾರ್ಕಿ, ವಿವಿಧ ಇಲಾಖೆಗಳ ತಾಲೂಕಾ ಮಟ್ಟದ ಅಧಿಕಾರಿಗಳು, ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ತಾಲೂಕು ಪಂಚಾಯತ್ ಸಿಬ್ಬಂದಿ, ಗ್ರಾಮ ಪಂಚಾಯತ್ ನೌಕರರು ಹಾಗೂ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.


Leave a Reply