This is the title of the web page
This is the title of the web page

Please assign a menu to the primary menu location under menu

Local News

ಯುವಕರ ಮುಂದಾಳತ್ವದಿಂದ ಗ್ರಾಮೀಣ ಅಭಿವೃದ್ಧಿಯಲ್ಲಿ ಸಹಕಾರಿ: ಡಾ.ಬಸವಪ್ರಭು ಹಿರೇಮಠ


ಬೆಳಗಾವಿ, ಜ.೦೨ : ಯುವಕರು ದುಶ್ಚಟಗಳಿಗೆ ಬಲಿಯಾಗದೆ, ಮೊಬೈಲಿಗೆ ದಾಸರಾಗದೆ ಯುವಕರು ಗ್ರಾಮೀಣ ಅಭಿವೃದ್ದಿಯಲ್ಲಿ ಸಹಕಾರಿಯಾಗಬೇಕು ಎಂದು ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿಗಳಾದ ಡಾ. ಬಸವಪ್ರಭು ಹಿರೇಮಠ ತಿಳಿಸಿದರು.
ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ ಬೆಳಗಾವಿಯಲ್ಲಿ ಭಾರತ ಸರಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರ ಬೆಳಗಾವಿ, ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ ಇವುಗಳ ಆಶ್ರಯದಲ್ಲಿ ಶನಿವಾರ (ಡಿ.೩೧) ನಡೆದ ಯುವಕ/ತಿ ಯುವ ಮುಂದಾಳತ್ವ ಮತ್ತು ಸಮುದಾಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಭಾರತದಲ್ಲಿ ಯುವಕರು ಒಳ್ಳೆಯ ಗುಣಗಳಿಂದ ದೆಶಾಭಿಮಾನ ಬೆಳಸಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಯುವ ಅಧಿಕಾರಿಗಳಾದ ರೋಹಿತ ಕಲರಾ ಅವರು ಪ್ರಾಸ್ಥಾವಿಕವಾಗಿ ಮಾತನಾಡಿ ನೆಹರು ಯುವ ಕೇಂದ್ರ ಯೋಜನೆ ಬಗ್ಗೆ ಮತ್ತು ಯುವ ಮುಂದಾಳತ್ವ ಹಾಗೂ ಸಮುದಾಯ ಅಭಿವೃದ್ಧಿ ತರಬೇತಿ ೦೩ ದಿನಗಳ ಕಾಲ ಬೇರೆ ಬೇರೆ ವಿಷಯಗಳ ಪರಿಣಿತರಿಂದ ಉಪನ್ಯಾಸ ಹಾಗೂ ಯೋಗ, ಕೇತ್ರ ವಿಕ್ಷಣೆ, ಸಂಸ್ಕೃತಿಕ ಕಾರ್ಯಕ್ರಮ, ಪ್ರವಾಸ ಮುಂತಾದ ಚಟುವಟಿಕೆಗಳನ್ನು ಮಾಡಿಸಲಾಗುವುದು, ಎಂದು ತಿಳಿಸಿದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ ಎಸ್.ಯು. ಜಮಾದಾರ ನಿವೃತ್ತ ಜಿಲ್ಲಾ ಯುವ ಸಮನ್ವಯ ಅಧಿಕಾರಿಗಳು ಮಾತನಾಡಿ, ಯುವಕರು ನಾಯಕತ್ವ ಗುಣಗಳು ಎಂದರೆ ನಾನು ಎನ್ನುವದಕಿಂತ ನಾವೇಲ್ಲರೂ ಒಂದೆ ಹಾಗೂ ಜಾತಿ ಮತ ಪಂತ ಇವುಗಳನ್ನು ತೊರಿದು ಗ್ರಾಮೀನ ಅಭಿವರದ್ದಿಯಲ್ಲಿ ಯುವಕರು ಆಸಕ್ತಿವಹಿಸಿಬೇಕು. ಯುವ ಮಂಡಳಗಳ ರಚೆ ಮಾಡಿ ಸರ್ಕಾದ ಯೋಜನೆಗಳನ್ನು ಪಡೆದುಕೊಂಡು ಗ್ರಾಮದ ಜನರಿಗೆ ಸಹಾಯ ಮಾಡಿ ಎಂದು ತಿಳಿಸಿದರು.ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ ನಿರ್ದೇಶಕರಾದ ಸಿದ್ದನಗೌಡ ಬಚಲಾಪೂರ ಅವರು ಮಾತನಾಡಿ ಯುವಕರು ಈ ತರಬೇತಿಯ ಉಪಯೋಗ ಪಡೆದುಕೊಂಡು ಸಮುದಾಯದಲ್ಲಿ ಒಳ್ಳೆ ಕೆಲಸ ಮಾಡಿ ಮತ್ತು ನಮ್ಮ ಸಂಸ್ಥೆಯಲ್ಲೂ ಗ್ರಾಮೀಣ ಬಡ ಯುವಕರಿಗೆ ಹಲವಾರು ತರಬೇತಿಗಳನ್ನು ನಿಡಲಾಗುತ್ತೆ ಅದರಲ್ಲಿ ಹೈನುಗಾರಿಗೆ, ಕುರಿ ಸಾಕಣಿಕೆ, ಮುಂತಾದ ತರಬೇತಿಗಳು ಮಾಡಲಾಗುತ್ತೆ ಅದರ ಉಪಯೋಗ ಪಡೆದುಕೊಳ್ಳಿ ಎಂದು ಸಲಹೆ ನಿಡಿದರು.ನೆಹರು ಯುವ ಕೇಂದ್ರದಿಂದ ನಾಯಕತ್ವ ಗುಣಗಳನ್ನು ಮತ್ತು ವೇದಿಕೆ ಮೇಲೆ ಮಾತನಾಡುವ ಕೌಶಲ್ಯಗಲನ್ನು ಇಂತಹ ತರಬೇತಿಗಳಿಂದ ಪಡೆದುಕೊಂಡಿರುತ್ತೇವೆ ನಿವು ಎಲ್ಲ ಚಟುವಟಿಕೆಗಲ್ಲಿ ಭಾಗವಹಿಸಿ ತರಬೇತಿಯ ಉಪಯೋಗ ಪಡೆದುಕೊಳ್ಳಿ ಎಂದು ನಾಗೇದ್ರ ಚೌಗಲಾ ಸಲಹೆ ನೀಡದರು, ಈ ವೇಳೆ ೧೪ ತಾಲೂಕಿನಿಂದ ೪೦ ಅಭ್ಯರ್ಥಿಗಳು ಭಾಗವಹಿಸಿದ್ದರು. ನಾಗೇಂದ್ರ ಚೌಗಲಾ ನೀರೂಪಿಸಿದರು, ಮಲ್ಲಯ್ಯ ಕರಡಿ ಸ್ವಾಗತಿಸಿ, ವಂದಿಸಿದರು.


Gadi Kannadiga

Leave a Reply