This is the title of the web page
This is the title of the web page

Please assign a menu to the primary menu location under menu

Local News

ತಂಬಾಕು ಮಾರಾಟಕ್ಕೆ ನಿಯಮ ಬಾಹಿರ: ಡಾ. ಬಿ.ಎನ್. ತುಕ್ಕಾರ


ಬೆಳಗಾವಿ: ಕೋಟ್ಪಾ -2003 ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವಲ್ಲಿ ವಿವಿಧ ಇಲಾಖೆಯ ಅಧಿಕಾರಗಳ ಪಾತ್ರ ಮಹತ್ವದಾಗಿದ್ದು, ಮಕ್ಕಳು ಮತ್ತು ಯುವಜನತೆ ತಂಬಾಕು ಸೇವೆನೆ ಹಗೂ ಮತ್ತಿತರ ದುಷ್ಚಟಗಳಿಗೆ ಬಲಿಯಾಗದಂತೆ ವಿವಿಧ ಇಲಾಖೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ. ಬಿ.ಎನ್. ತುಕ್ಕಾರ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಮಂಗಳವಾರ(ಜ.18) ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರ ಅಧ್ಯಕ್ಷತೆಯಲ್ಲಿ ನಡೆದ ತಂಬಾಕು ನಿಯಂತ್ರಣ ಕೋಶ ಜಿಲ್ಲಾ ಸಮನ್ವಯ ಸಮಿತಿಯ 3ನೇ ತ್ರೆöÊಮಾಸಿಕ ಸಭೆಯಲ್ಲಿ ಅವರು ಮಾತನಾಡಿದರು.

ಶಿಕ್ಷಣ ಸಂಸ್ಥೆಗಳ ವ್ಯಾಪ್ತಿಯಲ್ಲಿ 100 ಗಜದ ಅಂತರದೊಳಗೆ ತಂಬಾಕು ಉತ್ಪನ್ನ ಮಾರಾಟವಾಗದಂತೆ ಕ್ರಮ ವಹಿಸುವುದು ಹಾಗೂ ಕೋಟ್ಪಾ-2003 ರ ಕಾಯ್ದೆಯ ಸೇಕ್ಷನ್-4 6(ಬಿ) ನಾಮಫಲಕಗಳನ್ನು ಕಡ್ಡಾಯವಾಗಿ ಶಿಕ್ಷಣ ಸಂಸ್ಥೆಗಳ ಮುಖ್ಯದ್ವಾರದ ಮುಂಭಾಗದಲ್ಲಿ ಪ್ರದರ್ಶಿಸಬೇಕೆಂದು ಮತ್ತು ಜಿಲ್ಲೆಯ ಎಲ್ಲ ಶೈಕ್ಷಣಿಕ ಸಂಸ್ಥೆಗಳನ್ನು ತಂಬಾಕು ಮುಕ್ತ ಶೈಕ್ಷಣಿಕಗಳೆಂದು ಘೋಷಿಸಲು ಕ್ರಮ ವಹಿಸಿ ವರದಿ ನೀಡುವಂತೆ ಉಪ ನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.

ತಾಲೂಕಿನ ಎಲ್ಲ ಸರ್ಕಾರಿ ಕಛೇರಿಗಳನ್ನು ತಂಬಾಕು ಮುಕ್ತ ಕಛೆರಿ ಮಾಡುವ ಕುರಿತು ತಿಳಿಸಿದರು. ಜಿಲ್ಲಾ ತಂಬಾಕು ವ್ಯಸನ ಮುಕ್ತ ಕೇಂದ್ರದಲ್ಲಿ ತಂಬಾಕು ಹಾಗೂ ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮದ ಕುರಿತು ಗುಂಪು ಚರ್ಚೆ ಮುಖಾತಂರ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಹಮ್ಮಿಕೋಳ್ಳಲಾಗಿದೆ. ಕೋಟ್ಪಾ -2003 ಕಾಯ್ದೆಯ ಉಲ್ಲಂಘನೆಯನ್ನು ಸಾರ್ವಜನಿಕರಿಂದ ವರದಿ ಮಾಡಲು ರಾಜ್ಯ ತಂಬಾಕು ನಿಯಂತ್ರಣ ಘಟಕದಿಂದ “ಸ್ಟಾಪ್ ಟೋಬ್ಯಾಕೊ ಆ್ಯಪ್‌ನ್ನು’’ ಬಿಡುಗಡೆಗೊಳಿಸಿದ್ದು ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಹಾಗೂ ಪ್ರಚಾರ ಪಡಿಸಿ ಕೋಟ್ಪಾ-2003 ಕಾಯ್ದೆ ಉಲ್ಲಂಘನೆ ಮಾಡಿದಲ್ಲಿ ಕ್ರಮ ಜರುಗಿಸಲು ನಿರ್ದೇಶನ ನೀಡಿದರು.

WHO FCTC 5.3 ರಾಜ್ಯ ನಿಯಮಾವಳಿ ರಾಷ್ಟಿçÃಯ ತಂಬಾಕು ನಿಯಂತ್ರಣ ಕಾರ್ಯಕ್ರಮವನ್ನು ತಂಬಾಕು ಉತ್ಪನ್ನಗಳ ಕಂಪನಿಗಳ ಮಧ್ಯಸ್ಥಿಕೆಯನ್ನು ತಡೆಯುವ ನಿಟ್ಟಿನಲ್ಲಿ ಹಾಗೂ ತಂಬಾಕು ಉತ್ಪನ್ನ ಜಾಹಿರಾತು ಕಂಪನಿಗಳ ಉಡುಗರೆ ಯಾವದೇ ರೀತಿಯಾದ ಹಣ, ವಸ್ತು ರೂಪದಲ್ಲಿ ಸರ್ಕಾರಿ ಅಧಿಕಾರಿಗಳು ಪಡೆಯಬಾರದು ಹಾಗೂ ತಂಬಾಕು ಉತ್ಪನ್ನಗಳ ಕಂಪನಿಗಳ ಸರ್ಕಾದ ಅಧಿಕಾರಿಗಳು ಭೇಟಿ ಮಾಡುವ ಮೂದಲು ಆಯುಕ್ತರು ಆರೋಗ್ಯ ಮತ್ತು ಕು.ಕ ಸೇವೆಗಳು ಬೆಂಗಳೂರು ಇವರಿಗೆ ಸಭೆಯ ಉದ್ದೇಶಗಳ ಪೂರ್ವಾನುಮತಿ ಪಡೆದು ಭೇಟಿಯಾಗಬೇಕೆಂದು ತಿಳಿಸಿದರು.

ತಮ್ಮ ತಾಲೂಕಿನಲ್ಲಿ ಬರತಕ್ಕಂತಹ ಎಲ್ಲ ಸರ್ಕಾರಿ ಕಛೇರಿಗಳಲ್ಲಿ ಕೋಟ್ಪಾ-2003 ರ ಸೆಕ್ಷನ್ 4 ರ ನಾಮಫಲಕ ಅಳವಡಿಸುವಂತೆ ಆದೇಶಿಸಿದರು. ತಾಲೂಕು ಮಟ್ಟದ ತಹಶೀಲ್ದಾರರ ನೇತೃತ್ವದಲ್ಲಿ ತಾಲೂಕು ತಂಬಾಕು ನಿಯಂತ್ರಣ ಸಭೆ ಕರೆದು ವಾರದಲ್ಲಿ ಒಂದು ದಿನ ತಂಬಾಕು ಮಾರಾಟ ಮಾಡುತ್ತಿರುವ ಅಂಗಡಿಗಳ ಮೇಲೆ ದಾಳಿಯನ್ನು ಮಾಡಲು ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ. ಬಿ.ಎನ್. ತುಕ್ಕಾರ ತಿಳಿಸದರು.

ಜಿಲ್ಲಾ ಆರೋಗ್ಯ ಮತ್ತು ಕು.ಕ ಅಧಿಕಾರಿ ಡಾ: ಎಸ್ ವ್ಹಿ ಮುನ್ಯಾಹಾಳ, ಸಾರ್ವಜನಿಕ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಎಲ್ಲ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಅಪರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಡಾ. ಎಸ್ ಎಸ್. ಗಡಾದ ಇವರು ವಂದಿಸಿದರು.


Gadi Kannadiga

Leave a Reply