This is the title of the web page
This is the title of the web page

Please assign a menu to the primary menu location under menu

Local News

ಡಾ. ಬಿ,ಆರ್, ಅಂಬೇಡ್ಕರ್ ಸ್ಮಾರಕ, ಸಂಗ್ರಹಾಲಯ ಹಾಗೂ ಸಂಶೋಧನಾ ಕೇಂದ್ರವನ್ನು ಸ್ಥಾಪನೆಗೆ ಆಗ್ರಹ


ಬೆಳಗಾವಿ: ನಗರದ ಜಿಲ್ಲಾಧಿಕಾರಿ ಕಚೇರಿಗೆ ಬೇಟಿ ನೀಡಿದ ಜಿಲ್ಲಾ ಸ್ಮಾರಕ, ಸಂಗ್ರಹಾಲಯ, ಸಂಶೋಧನಾ ಕೇಂದ್ರಗಳ ಹೋರಾಟ ಸಮಿತಿ ಪದಾಧಿಕಾರಿಗಳು, ಬೆಳಗಾವಿ ನಗರದಲ್ಲಿ ಬಾಬಾಸಾಹೇಬ ಅಂಬೇಡ್ಕರ್ ಅವರ ಸ್ಮಾರಕ, ಸಂಗ್ರಹಾಲಯ ಹಾಗೂ ಸಂಶೋಧನಾ ಕೇಂದ್ರ ನಿರ್ಮಾಣ ಆಗಬೇಕೆಂದು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಮಾಡಿಕೊಂಡರು.

ಈ ಸಂಧರ್ಬದಲ್ಲಿ ಮಾತನಾಡಿದ ಹೋರಾಟ ಸಮಿತಿಯ ಮುಖ್ಯ ಸದಸ್ಯರಾದ ಮಹಾದೇವ ತಳವಾರ ಅವರು, ಅಂಬೇಡ್ಕರ್ ಅವರು ಕರ್ನಾಟಕದಲ್ಲಿ 10 ಊರುಗಳಿಗೆ ಬೇಟಿ ನೀಡಿದ್ದರು, ಆ ಹತ್ತು ಊರುಗಳಲ್ಲಿ ಬೆಳಗಾವಿಯ ಕಂಗರಾಳಿ ಗಲ್ಲಿಗೂ ಕೂಡಾ 26/12/1939 ಬೇಟಿ ನೀಡಿದ್ದರು. ಹೀಗೆ ಬೇಟಿ ನೀಡಿದ ಹತ್ತೂ ಊರುಗಳಲ್ಲಿ ಅಂಬೇಡ್ಕರ ಅವರ ಸ್ಮಾರಕ, ಸಂಗ್ರಹಾಲಯ, ಸಂಶೋಧನಾ ಕೇಂದ್ರಗಳನ್ನು ಮಾಡಬೇಕೆಂದು ಮುಖ್ಯ ಮಂತ್ರಿಗಳಿಗೆ ಈಗಾಗಲೇ ಅರ್ಜಿ, ಕೊಟ್ಟಿದ್ದೇವೆ.. ಮುಖ್ಯಮಂತ್ರಿಯವರು ತಮ್ಮ ಬಜೆಟ್ ಮಂಡನೆಯಲ್ಲಿ ಈ ವಿಷಯ ಪ್ರಸ್ತಾಪಿಸಿ, ಒಪ್ಪಿಗೆ ಸೂಚಿಸಿದ್ದರು.. ಆದ ಕಾರಣ ಈ ವಿಷಯದಲ್ಲಿ ಇನ್ನೂ ಯಾವುದೇ ವಿಳಂಬ ಮಾಡದೆ ಎಲ್ಲಾ ಹತ್ತೂ ಊರುಗಳಲ್ಲಿ ಸ್ಮಾರಕ ಸಂಶೋಧನಾ ಕೇಂದ್ರ ಸ್ಪಾಪನೆ ಆಗಬೇಕೆಂದು, ಕರ್ನಾಟಕ ಸ್ಮಾರಕ ನಿರ್ಮಾಣ ಹೋರಾಟ ಸಮಿತಿಯ ಕಡೆಯಿಂದ ಮನವಿ ನೀಡ್ತಾ ಇದೀವಿ ಎಂದರು.

ಬೆಳಗಾವಿಯಲ್ಲಿ ಅಥವಾ ನಗರದ ಸುತ್ತ ಮುತ್ತ ಎಲ್ಲಿಯಾದರೂ 10 ಎಕರೆ ಜಾಗ, ಮತ್ತು 10 ಕೋಟಿ ಅನುದಾನ ನೀಡಿ, ಈ ಸ್ಮಾರಕ, ಸಂಗ್ರಹಾಲಯ, ಸಂಶೋಧನಾ ಕೇಂದ್ರಗಳು ಬೆಳಗಾವಿಯಲ್ಲಿ ಆದಷ್ಟೂ ಬೇಗ ನಿರ್ಮಾಣ ಆಗಬೇಕು ಎಂದು ಅಂಬೇಡ್ಕರ್ ಸ್ಮಾರಕ ನಿರ್ಮಾಣ ಹೋರಾಟ ಸಮೀತಿಯ ಕಡೆಯಿಂದ ಮಾನ್ಯ ಮುಖ್ಯಮಂತ್ರಿಗಳಿಗೆ, ಸಮಾಜ ಕಲ್ಯಾಣ ಇಲಾಖೆ ಸಚಿವರಿಗೆ, ಸಮಾಜ ಕಲ್ಯಾಣ ಇಲಾಖೆಯ ಅಧೀನ ಕಾರ್ಯದರ್ಶಿಗಳಿಗೆ ಈ ಪತ್ರ ಮನವೀಯ ಮೂಲಕ ಕೇಳಿಕೊಳ್ಳುತ್ತೇವೆ ಎಂದರು.

ಈ ಸಂಧರ್ಭದಲ್ಲಿ ದಲಿತ ಹೋರಾಟಗಾರ ಮಲ್ಲೇಶ್ ಚೌಗುಲೆ ಮಹಾದೇವ ತಳವಾರ ಇನ್ನಿತರ ಸಮಾಜ ಮುಖಂಡರು ಯುವಕರು ಭಾಗಿಯಾಗಿದ್ದರು.


Leave a Reply